ಬಾಗಲಕೋಟೆ: ಸಚಿವ ಮುರುಗೇಶ್ ನಿರಾಣಿ ಹುಟ್ಟುಹಬ್ಬಕ್ಕೆ ಹಾಕಿದ್ದ ಶುಭಾಷಯ ಬ್ಯಾನರ್ ನಲ್ಲಿ ಮುಂದಿನ ಸಿಎಂ ಪದ ಬಳಕೆ ಮಾಡಿದ್ದಾರೆ. ನಿರಾಣಿ ಮುಂದಿನ ಮುಖ್ಯಮಂತ್ರಿಗಳು ಎಂದು ಹಾಕಿದ್ದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
BIGG NEWS: ಅಯ್ಯಪ್ಪನ ಭಕ್ತರಿಗೆ ಗುಡ್ ನ್ಯೂಸ್; ಇಂದಿನಿಂದ 5 ದಿನ ಶಬರಿಮಲೆ ದೇಗುಲದ ಬಾಗಿಲು ಓಪನ್
ಎಲ್ಲೆಡೆ ವೈರಲ್ ಆಗ್ತಿದ್ದಂತೆ ಕಾರ್ಯಕರ್ತರು ಏಕಾಏಕಿ ಬ್ಯಾನರ್ ತೆರವುಗೊಳಿಸಿದ್ದಾರೆ. ನಿರಾಣಿ ಆಪ್ತ ಸಹಾಯಕ ಕಿರಣ್ ಬಡಿಗೇರ ಅವರಿಂದ ಪೋಸ್ಟರ್ ತಯಾರು ಮಾಡಿದ್ದರು. ಬೀಳಗಿ ಕ್ಷೇತ್ರ ಬಿಟ್ಟು ಜಮಖಂಡಿ ಕಡೆ ಹೊರಟ್ರಾ ಮುರುಗೇಶ್ ನಿರಾಣಿ..? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಮೂಡಿದೆ. ಬೀಳಗಿ ಕ್ಷೇತ್ರದಲ್ಲಿ ಸೋಲಿನ ಭಯ ಕಾಡಿದಕ್ಕೆ ನಿರಾಣಿ ಜಮಖಂಡಿಯತ್ತ ಗಮನಹರಿಸುತ್ತಿದ್ದಾರೆ ಎಂದು ಪಿಸುಗುಸು ಶುರುವಾಗಿದೆ.
BIGG NEWS: ಅಯ್ಯಪ್ಪನ ಭಕ್ತರಿಗೆ ಗುಡ್ ನ್ಯೂಸ್; ಇಂದಿನಿಂದ 5 ದಿನ ಶಬರಿಮಲೆ ದೇಗುಲದ ಬಾಗಿಲು ಓಪನ್
ಫೆಬ್ರುವರಿಯಲ್ಲಿ ಜಮಖಂಡಿಯಲ್ಲಿ ಪಂಚಮಸಾಲಿ 3ನೇ ಪೀಠ ಸ್ಥಾಪನೆ ಮಾಡಲಾಗಿತ್ತು. ಹೀಗಾಗಿ ಪೀಠ ಸ್ಥಾಪನೆ ನೋಡಿದ್ರೆ ನಿರಾಣಿ ಜಮಖಂಡಿ ಕ್ಷೇತ್ರದಲ್ಲಿ ನಿಲ್ಲೋದು ಪಕ್ಕಾನಾ…? ಎಂಬ ಪ್ರಶ್ನೆ ಕಾಡತೊಡಗಿದೆ. ಕಳೆದ ಚುನಾವಣೆಯಲ್ಲಿ ಜಮಖಂಡಿಯಲ್ಲಿ ಪಕ್ಷೇತರ ನಿರಾಣಿ ಸಹೋದರ ಸಂಗಮೇಶ ಸ್ಪರ್ಧಿಸಿದ್ದರು. ಇದೀಗ ನಿರಾಣಿ ಅವರು ಮುಂದಿನ ಚುನಾವಣೆ ಜಮಖಂಡಿಯಿಂದ ಸ್ಫರ್ದೇ ಮಾಡುವ ಲಕ್ಷಣಗಳು ಗೋಚರಿಸುತ್ತದೆ. ಒಟ್ಟಾರೆಯಾಗಿ ಇದೆಲ್ಲ ಗೊಂದಲಕ್ಕೆ ಮುರುಗೇಶ್ ನಿರಾಣಿ ಅವರೆ ತೆರೆ ಎಳೆಯಬೇಕಿದೆ.