ಹುಬ್ಬಳ್ಳಿ:ನಗರದಲ್ಲಿ ಅಪ್ಪನ ಸಾಲ ತೀರಿಸುವುದಕ್ಕೆ ಮಗನಿಂದ ಬೆತ್ತಲೆ ಪೂಜೆ ಮಾಡಿಸುವ ಮೂಲಕ ವಿಕೃತ ಮನಸ್ಸಿನ ವ್ಯಕ್ತಿಗಳು ಅಪ್ರಾಪ್ತ ಬಾಲಕನಿಗೆ ಅವಮಾನ ಮಾಡಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
Bharat Jodo Yatra : ಇಂದು ಮೈಸೂರಿಗೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ
ಕಡು ಬಡತನದಿಂದ ಬಳಲುತ್ತಿದ್ದ ಬಾಲಕನನ್ನು ಪುಸಲಾಯಿಸಿ ಪರಿಚಯಸ್ಥರೇ ದ್ರೋಹ ಬಗೆದಿದ್ದಾರೆ. ಸಮಸ್ಯೆಗೆ ಪರಿಹಾರ ನೀಡುತ್ತೇವೆಂದು ಅಪ್ರಾಪ್ತ ಬಾಲಕನಿಗೆ ನಂಬಿಸಿ ಬೆತ್ತಲೆ ಪೂಜೆ ಮಾಡಿಸುವ ಮೂಲಕ ವಿಕೃತ ಮೆರೆದಿದ್ದಾರೆ. ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದ ನಿವಾಸಿ 16 ವರ್ಷದ ಪ್ರದೀಪ್ ನೊಂದ ಬಾಲಕ. ಶರಣಪ್ಪ, ಇರುಪನಗೌಡ, ಶರಣಪ್ಪ ತಳವರ್ ವಿಕೃತ ಮೆರೆದವರಾಗಿದ್ದಾರೆ.
Bharat Jodo Yatra : ಇಂದು ಮೈಸೂರಿಗೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ
ನಿಮ್ಮ ಅಪ್ಪನ ಸಾಲ ತೀರಬೇಕೆಂದರೆ ಬೆತ್ತಲೆ ಪೂಜೆ ಮಾಡಿದ್ರೆ ದುಡ್ಡು ಬರುತ್ತದೆ. ಮತ್ತೆ ಸಾಲ ಕೂಡ ತೀರುತ್ತದೆ. ಬೆತ್ತಲೆ ಪೂಜೆ ಮಾಡಬೇಕು. ಇದರಿಂದ ಬಡತನ ನಿವಾರಣೆ ಆಗುತ್ತದೆ ಎಂದು ಪ್ರದೀಪ್ ಅನ್ನು ಶರಣಪ್ಪ ಆ್ಯಂಡ್ ಟೀಂ ಪುಸಲಾಯಿಸಿದ್ದರು.ಕ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಮಾಡಿ ವಿಕೃತಿ ಮರೆದಿದ್ದಾರೆ.
ಬಳಿಕ ರೂಮ್ನಲ್ಲಿ ಪ್ರದೀಪ್ ಬಟ್ಟೆ ಬಿಚ್ಚಿಸಿ ಬೆತ್ತಲೆ ಮಾಡಿ, ಪೂಜೆ ಮಾಡುವ ನಾಟಕವಾಡಿ. ಇದನ್ನು ವೀಡಿಯೋ ಮಾಡಿ ಫೇಸ್ಬುಕ್, ವಾಟ್ಸಾಪ್ ಹಾಗೂ ಯೂಟ್ಯೂಬ್ಗಳಲ್ಲಿ ವೀಡಿಯೋ ವೈರಲ್ ಮಾಡಿದ್ದಾರೆ. ಇದರಿಂದಾಗಿ ನೊಂದ ಪ್ರದೀಪ್ ಮತ್ತು ಕುಟುಂಬಸ್ಥರು ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.