ಹುಬ್ಬಳ್ಳಿ : ಕೊಪ್ಪಳದಲ್ಲಿ ಜನಿಸಿದ ನವಜಾತ ಶಿಶುವೊಂದಕ್ಕೆ ಕರುಳುಗಳು ಹೊರಗೆ ಬಂದಿದ್ದು, ತುರ್ತು ಚಿಕಿತ್ಸೆಯ ಅಗತ್ಯವಿದೆ. ಮಗುವಿನ ಜೀವ ಉಳಿಸಲು, ಝೀರೋ ಟ್ರಾಫಿಕ್ ಮೂಲಕ ಕೊಪ್ಪಳದಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಪೊಲೀಸ್ ಇಲಾಖೆ ಹಾಗೂ ಆಂಬುಲೆನ್ಸ್ ಸಿಬ್ಬಂದಿಯ ಸಹಕಾರದಿಂದ ಮಗುವನ್ನು ಸಕಾಲದಲ್ಲಿ ತಲುಪಿಸುವ ಪ್ರಯತ್ನ ಮಾಡಲಾಗಿದೆ.
ಆದ್ರೆ ಇದೀಗ ವೈದ್ಯರು ಸಿಬ್ಬಂದಿಗಳ ಶ್ರಮವೆಲ್ಲ ವ್ಯರ್ಥವಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಗಂಡು ಮಗು ಸಾವನ್ನಪ್ಪಿದೆ. ಕೇವಲ 10 ಗಂಟೆ ಹಿಂದೆ ಜನಿಸಿದ ಮಗು ಆ ಮಗುವಿನ ಕರಳುಗಳು ಹೊರಗೆ ಬಂದಿದ್ದವು. ಹೀಗಾಗಿ ತುರ್ತು ಚಿಕಿತ್ಸೆ ಅನಿವಾರ್ಯವಾಗಿತ್ತು. ನಿನ್ನೆ ರಾತ್ರಿ ಜನಿಸಿದ ಮಗು ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿತ್ತು.ಆದರೆ ಇದೀಗ ಚಿಕೆತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದೆ.
ಘಟನೆ ಹಿನ್ನೆಲೆ?
ಕೊಪ್ಪಳದಲ್ಲಿ ಶನಿವಾರ ರಾತ್ರಿ 10 ಗಂಟೆ ಹಿಂದೆ ಜನಿಸಿದ ಮಗುವೊಂದನ್ನ ಝೀರೋ ಟ್ರಾಫಿಕ್ನಲ್ಲಿ ಸುಮಾರು 110 ಕಿ.ಮೀ ದೂರದ ಹುಬ್ಬಳ್ಳಿ ಕಿಮ್ಸ್ಗೆ ಕರೆದುಕೊಂಡು ಹೋಗಲಾಗಿದೆ. ಕುಕನೂರ ತಾಲೂಕಿನ ಗುತ್ತೂರ ನಿವಾಸಿಗಳಾದ ಮಲ್ಲಪ್ಪ, ವಿಜಯಲಕ್ಷ್ಮೀ ದಂಪತಿಗೆ ಶನಿವಾರ ಕುಕನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು.
10 ಗಂಟೆಗಳ ಹಿಂದೆ ಜನಿಸಿದ ಮಗುವಿನ ಕರಳುಗಳೆಲ್ಲಾ ಹೊರಗಡೆ ಬಂದಿದ್ದ ಕಾರಣ ಮಗುವಿಗೆ ತುರ್ತು ಆಪರೇಷನ್ ಮಾಡಬೇಕಾದ ಹಿನ್ನಲೆ ಕೊಪ್ಪಳ ಜಿಲ್ಲಾಸ್ಪತ್ರೆಯಿಂದ ತಾಯಿ ಮತ್ತು ಮಗುವನ್ನು 5 ಆಂಬ್ಯುಲೆನ್ಸ್ಗಳ ಮೂಲಕ ಹುಬ್ಬಳ್ಳಿಗೆ ಝೀರೋ ಟ್ರಾಫಿಕ್ನಲ್ಲಿ ರವಾನಿಸಲಾಗಿತ್ತು.
ಮಗುವಿಗೆ ಕರಳು ಸಮಸ್ಯೆ ಇರುವ ಹಿನ್ನಲೆ ವೈದ್ಯರು ತುರ್ತಾಗಿ ಆಪರೇಷನ್ ಮಾಡಬೇಕು ಎಂದು ಕಿಮ್ಸ್ಗೆ ರೆಫರ್ ಮಾಡಿದ್ದರು. ಅಲ್ಲದೆ ನವಜಾತ ಶಿಶುವಿಗೆ ಕಿಡ್ನಿ ಸಮಸ್ಯೆ ಕೂಡ ಇದೆ. ಈ ಕಾರಣಕ್ಕೆ ಮಗುವಿನ ಪ್ರಾಣ ಉಳಿಸಲು ಕೊಪ್ಪಳ ವೈದ್ಯರು ಸಾಕಷ್ಟು ಹರಸಾಹಸ ಪಟ್ಟರು. ಹತ್ತು ಗಂಟೆ ಹಿಂದೆ ಜನಿಸಿದ ಮಗುವನ್ನ ಆಂಬ್ಯುಲೆನ್ಸ್ ಚಾಲಕ ಪ್ರಕಾಶ್ ಝೀರೋ ಟ್ರಾಫಿಕ್ನಲ್ಲಿ ಹುಬ್ಬಳ್ಳಿಗೆ ಕರೆದುಕೊಂಡು ಹೋಗಿದ್ದಾರೆ. ನವಜಾತ ಶಿಶು ಪ್ರಾಣ ಉಳಿಸಲು ಪೊಲೀಸರು ಕೂಡ ಸಾಥ್ ನೀಡಿದ್ದರು.








