ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜು ಒಂದರ ಹಿಂಭಾಗದಲ್ಲೇ ನವಜಾತ ಶಿಶುವೊಂದು ಪತ್ತೆಯಾಗಿರುವಂತ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಮಾಗಡಿ ರಸ್ತೆಯ ಎಎಸ್ ಸಿ ಕಾಲೇಜು ಹಿಂಭಾಗದಲ್ಲಿ ನವಜಾತ ಶಿಶು ಪತ್ತೆಯಾಗಿದೆ. ನಿನ್ನೆ ಜನಿಸಿರುವಂತ ಮಗುವನ್ನು ಎಸೆದು ಹೋಗಿರೋದಾಗಿ ಹೇಳಲಾಗುತ್ತಿದೆ.
ಮಾಗಡಿ ರಸ್ತೆ ಪೊಲೀಸರಿಂದ ನವಜಾತ ಶಿಶುವನ್ನು ರಕ್ಷಣೆ ಮಾಡಲಾಗಿದೆ. ವಾಣಿ ವಿಲಾಸ ಆಸ್ಪತ್ರೆಗೆ ಶಿಶುವನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ತಮ್ಮ ಜಮೀನು ನೀಡಲು ’25 ತಳಕಳಲೆ ಗ್ರಾಮಸ್ಥರು’ ಒಪ್ಪಿಗೆ, ಶಾಸಕರಿಗೆ ಪತ್ರ








