ಬೆಂಗಳೂರು: ರಾಜ್ಯ ಸರ್ಕಾರದಿಂದ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತ ಎನ್ ಹೆಚ್ ಎಂ ಹಾಗೂ ನಮ್ಮ ಕ್ಲಿನಿಕ್ ಸಿಬ್ಬಂದಿಗಳಿಗೆ ಹೊಸ ವರ್ಷದ ಗಿಫ್ಟ್ ನೀಡಿದೆ. ಅದೇ ಆರೋಗ್ಯ ಇಲಾಖೆಯ ಗುತ್ತಿಗೆ ಸಿಬ್ಬಂದಿಗಳಿಗೆ ಟರ್ಮ್ ಇನ್ಸೂರೆನ್ಸ್ ಯೋಜನೆಯನ್ನು ಜಾರಿಗೊಳಿಸಿ ಆದೇಶಿಸಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ ( KSHCOEA) ಮಾಹಿತಿ ಹಂಚಿಕೊಂಡಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಹಾಗೂ ನಮ್ಮ ಕ್ಲೀನಿಕ್ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಆರೋಗ್ಯ ವಿಮೆ ಹಾಗೂ ಟರ್ಮ್ ಇನ್ಸೂರೆನ್ಸ್ ನೀಡುವಂತೆ ಆರೋಗ್ಯ ಸಚಿವರಿಗೆ ಈ ಹಿಂದೆ KSHCOEA BMS ಸಂಘದಿಂದ ಒತ್ತಾಯಿಸಲಾಗಿತ್ತು ಎಂದಿದೆ.
ಆದರೇ ರಾಜ್ಯಮಟ್ಟದಿಂದ ಜಾರಿ ಆಗದ ಕಾರಣ ಉಡುಪಿ ಜಿಲ್ಲಾ KSHCOEA ಸಂಘದಿಂದ ಅಂದಿನ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಡಾ. ನವೀನ್ ಭಟ್ ವೈ IAS ಇವರನ್ನು ಗಿರೀಶ್ ಕಡ್ಡಿಪುಡಿ, ಪ್ರೀತಮ್ ಬಿ.ಎಸ್, ಗುರುರಾಜ್ ಗಂಗಾಣಿ ಹಾಗೂ ಜಿಲ್ಲಾ ಮುಖಂಡರಿಂದ ಬೇಟಿ ಮಾಡಿ ಜಿಲ್ಲೆಯಲ್ಲಿಯೇ ಒಂದು ಯೋಜನೆ ರೂಪಿಸಲು ವಿನಂತಿಸಿದಾಗ ಇದಕ್ಕೆ ಉಡುಪಿ ಜಿಲ್ಲೆಯ ವಿವಿಧ ಬ್ಯಾಂಕ್ ಗಳನ್ನು ಕರೆದು ದಿನಾಂಕ 21.12.21 ರಂದು ಸಭೆ ಮಾಡಿದ್ದರು ಎಂದು ಹೇಳಿದೆ.
ಈ ಪ್ರಸ್ತಾವನೆಗಳನ್ನು ಪರಿಶಿಸುವಾಗಲೇ ಡಾ.ನವೀನ್ ಭಟ್ ಇವರಿಗೆ KSRTC ನಿರ್ದೇಶಕರಾಗಿ ವರ್ಗಾವಣೆಗೊಂಡರು. ಉಡುಪಿ ಜಿಲ್ಲೆಯಿಂದ ಆರಂಭವಾದ ಈ ವಿಮೆ ಯೋಜನೆಯು ಅನುಷ್ಠಾನ ಆಗಿದ್ದೂ ಮಾತ್ರ KSRTC ಸಿಬ್ಬಂದಿಗಳಿಗೆ ಅದೂ ಕೂಡ ಡಾ. ನವೀನ್ ಭಟ್ ವೈ IAS ಅಧಿಕಾರಿಯವರಿಂದ ಎಂದು ಸ್ಮರಿಸಬಹುದು ಎಂದಿದೆ.
ಇವರು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಾಗಿ ವರ್ಗಾವಣೆಗೊಂಡು ಅಧಿಕಾರ ಸ್ವೀಕರಿಸಿ ಈಗ ಈ ಅಭಿಯಾನದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 28000 ಸಿಬ್ಬಂದಿಗಳಿಗೆ ಟರ್ಮ್ ಇನ್ಸೂರೆನ್ಸ್ ಯೋಜನೆಯನ್ನು ದಿನಾಂಕ 21.12.24 ರಂದು ಆರೋಗ್ಯ ಸಚಿವರಿಂದ ಅನುಮೋದನೆ ಪಡೆದು ದಿನಾಂಕ 01.01.2025ರಂದು AXIS BANK ಜೊತೆ ಒಡಂಬಡಿಕೆಗೆ ಸಹಿ ಮಾಡಿ ಜಿಲ್ಲೆಗಳಿಗೆ ಆದೇಶ ಹೊರಡಿಸಿರುತ್ತಾರೆ ಎಂದು ತಿಳಿಸಿದೆ.
ಈ ಯೋಜನೆಯ ಹರಿಕಾರ ಡಾ. ನವೀನ್ ಭಟ್ ವೈ, IAS, ಎಂದರೇ ತಪ್ಪಾಗಲಾರದು ಇವರಿಗೆ ಹಾಗೂ ಈ ಯೋಜನೆಗೆ ಸಹಕರಿಸಿದ ಹಿಂದಿನ NHM-CAO ವಂದನಾ ಭಟ್, ನಟರಾಜ, ಡಾ.ವಾಣಿ ಮತ್ತು ನಾಗಹನುಮಯ್ಯ ಹಾಗೂ NHM CFO ಡಾ.ಹನುಮಂತೆಗೌಡ, ಪ್ರಿಯಾಂಕಾ, ಹಾಗೂ ಇಲಾಖೆಯ ಇತರೇ ಎಲ್ಲಾ ಅಧಿಕಾರಿಗಳೂ ಮತ್ತು ಸಿಬ್ಬಂದಿಗಳಿಗೂ ತುಂಬು ಹೃದಯದ ಧನ್ಯವಾದಗಳನ್ನು KSHCOEA BMS ಸಂಘದ ಅಧ್ಯಕ್ಷರಾದ ಶ್ರೀಕಾಂತ ಸ್ವಾಮೀ ತಿಳಿಸಿದ್ದಾರೆ.
ಹಾಗೇ ಉಡುಪಿ ಜಿಲ್ಲೆಯಿಂದ ಆರಂಭವಾದ ಈ ಯೋಜನೆಯನ್ನು ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಿಂದ ಅಂತಿಮ ಆಗುವವರೆಗೂ ಛಲ ಬಿಡದೇ ಆದೇಶಕ್ಕೆ ಕಾರಣವಾದವರು ಸಂಘದ ಕಾರ್ಯಾಧ್ಯಕ್ಷರಾದ ಗಿರೀಶ್ ಜೆ ಕಡ್ಡಿಪುಡಿಯವರು ಹಾಗೂ ಈ ಯೋಜನೆಯನ್ನು ಸರ್ವ ನೌಕರರು ಮಾಹಿತಿಯನ್ನು ತಿಳಿದುಕೊಳ್ಳಬೇಕು. ಸರ್ಕಾರ ಕೂಡಲೇ ಬಾಕಿ ಉಳಿದ ಬೇಡಿಕೆಗಳನ್ನು ಈಡೇರಿಸುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಗವಿಸಿದ್ದಪ್ಪ ಉಪ್ಪಾರ ವಿನಂತಿ ಮಾಡಿಕೊಂಡಿದ್ದಾರೆ.
ಇನ್ನೂ ಮುಂದಿನ ದಿನಗಳಲ್ಲಿ ಎನ್ ಹೆಚ್ ಎಂ ಗುತ್ತಿಗೆ ನೌಕರರಿಗೆ ಜಾರಿಗೊಳಿಸುರಂವತ ಈ ಟರ್ಮ್ ಇನ್ಸೂರೆನ್ಸ್ ಯೋಜನೆಯನ್ನು ಹೊರಗುತ್ತಿಗೆ ನೌಕರರಿಗೂ ಜಾರಿಗೊಳಿಸುವಂತೆ ಸರ್ಕಾರಕ್ಕೆ ಸಂಘ ಮನವಿ ಮಾಡಿದೆ. ಜೊತೆಗೆ ಅವರಿಗೂ ಜಾರಿಯಾಗುವ ನಿರೀಕ್ಷೆಯಲ್ಲಿದ್ದೇವೆ ಅಂತ ತಿಳಿಸಿದೆ.
ಟರ್ಮ್ ಇನ್ಸೂರೆನ್ಸ್ ಯೋಜನೆಯಿಂದ ಏನೆಲ್ಲ ಪ್ರಯೋಜನೆ?
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು