ಬೆಂಗಳೂರು: ಹೊಸ ವರ್ಷದಂದು ಮದ್ಯದ ನಶೆಯಲ್ಲಿ ಎಣ್ಣೆ ಪ್ರಿಯರು ಮಿಂದೆದ್ದಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ನ್ಯೂ ಇಯರ್ ಅಂದೇ ರಾಜ್ಯಾಧ್ಯಂತ ಭರ್ಜರಿ ಭರ್ಜರಿ ಮದ್ಯ ಮಾರಾಟವಾಗಿರೋದಾಗಿ ( Liquor Sale ) ಅಬಕಾರಿ ಇಲಾಖೆಯಿಂದ ( Excise Department ) ತಿಳಿದು ಬಂದಿದೆ.
ಈ ಕುರಿತಂತೆ ಅಬಕಾರಿ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು, ಹೊಸ ವರ್ಷದಂದು ಲಕ್ಷ ಲಕ್ಷ ಲೀಟರ್ ಮದ್ಯ ಮಾರಾಟವಾಗಿದೆ. ಕಳೆದ ಐದಾರು ದಿನಗಳಿಂದ ಭರ್ಜರಿ ಮದ್ಯ ಮಾರಾಟವಾಗಿದೆ. ಇದರಿಂದ ನೂರಾರು ಕೋಟಿ ಆದಾಯ ಇಲಾಖೆಗೆ ಹರಿದು ಬಂದಿರೋದಾಗಿ ಹೇಳಿದೆ.
ಹೀಗಿದೆ ರಾಜ್ಯಾಧ್ಯಂತ ಮಾರಾಟವಾದಂತ ಡಿಸೆಂಬರ್ 27ರಿಂದ ಡಿ.31ರವರೆಗಿನ ಮದ್ಯ ಮಾರಾಟದ ವಿವರ
- ಡಿಸೆಂಬರ್.27ರಂದು 3.57 ಲಕ್ಷ ಲೀಟರ್ ಐಎಂಎಲ್( ಇಂಡಿಯನ್ ಮೇಡ್ ಲಿಕ್ಕರ್ ), 2.41 ಲಕ್ಷ ಲೀಟರ್ ಬಿಯರ್ ಮಾರಾಟ
- ಡಿಸೆಂಬರ್.28ರಂದು 2.31 ಲಕ್ಷ ಲೀಟರ್ ಐಎಂಎಲ್, 1.67 ಲಕ್ಷ ಲೀಟರ್ ಬಿಯರ್ ಮಾರಾಟ
- ಡಿಸೆಂಬರ್.29ರಂದು 2.31 ಲಕ್ಷ ಲೀಟರ್ ಐಎಂಎಲ್, 1.93 ಲಕ್ಷ ಲೀಟರ್ ಬಿಯರ್ ಮಾರಾಟ
- ಡಿಸೆಂಬರ್.30ರಂದು 2.93 ಲಕ್ಷ ಲೀಟರ್ ಐಎಂಎಲ್, 2.59 ಲಕ್ಷ ಲೀಟರ್ ಬಿಯರ್ ಮಾರಾಟ
- ಡಿಸೆಂಬರ್.31ರಂದು 3.00 ಲಕ್ಷ ಲೀಟರ್ ಐಎಂಎಲ್, 2.41 ಲಕ್ಷ ಲೀಟರ್ ಬಿಯರ್ ಮಾರಾಟ
- ಡಿಸೆಂಬರ್ 31ರಂದು ಒಂದೇ ದಿನ ಮೂರು ಲಕ್ಷ ಲೀಟರ್ ಐಎಂಎಲ್ ಮದ್ಯ ಮಾರಾಟ, 2.41 ಲಕ್ಷ ಲೀಟರ್ ಬಿಯರ್ ಸೇಲ್ ಆಗಿದೆ.
ಅಂದಹಾಗೇ ಡಿಸೆಂಬರ್ 31 ರ ಒಂದು ದಿನದ ಮಾರಾಟವಾದಂತ ಮದ್ಯದಿಂದಾಗಿ ಬರೋಬ್ಬರಿ 181 ಕೋಟಿ ಆದಾಯ ಹರಿದು ಬಂದಿದೆ. ಕಳೆದ ಒಂಭತ್ತು ದಿನ ಅಂದ್ರೆ, ಡಿ. 23 ರಿಂದ ಡಿ.31ರ ಸೇಲ್ ವ್ಯಾಲ್ಯೂ 1262 ಕೋಟಿ ಆಗಿದೆ. ಹೀಗಾಗಿ ಅಬಕಾರಿ ಇಲಾಖೆ ಬೊಕ್ಕಸಕ್ಕೆ ಹರಿದು ಬಂದ ಹಣ ಬರೋಬ್ಬರಿ 657 ಕೋಟಿ ಆಗಿದೆ.
ಇನ್ನೂ ಕಳೆದ ಡಿ.23 ರಿಂದ ಡಿ.31 ರವರೆಗೆ 20.66 ಲಕ್ಷ ಲೀಟರ್ ಐಎಂಎಲ್ ಮದ್ಯ ಮಾರಾಟವಾಗಿದೆ. ಅಲ್ಲದೇ 15.04 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಈ ಮೂಲಕ ಪಾನಪ್ರಿಯರಿಂದ ಅಬಕಾರಿ ಇಲಾಖೆಗೆ ಭರ್ಜರಿ ಆದಾಯ ಹರಿದು ಬಂದಿದೆ.
ಬೆಚ್ಚಿಬಿದ್ದ ಬೆಂಗಳೂರು ಜನತೆ: ‘ಏರ್ ಪೋನ್’ಗಾಗಿ ಸ್ನೇಹಿತನ ಮೇಲೆ ಹಲ್ಲೆ ಮಾಡಿ ಕೊಲೆ