ನವದೆಹಲಿ: ದೆಹಲಿಯಲ್ಲಿ ಹೊಸ ವರ್ಷದಂದೇ ಘೋರ ದುರಂತ ನಡೆದಿದೆ. ನಿನ್ನೆ ಬೆಳಿಗ್ಗೆ 20 ವರ್ಷದ ಯುವತಿಯೊಬ್ಬರ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದು ವಾಹನದ ಕೆಳಗೆ 12 ಕಿಲೋಮೀಟರ್ ಎಳೆದೊಯ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಳನ್ನು 20 ವರ್ಷದ ಅಂಜಲಿ ಎಂದು ಗುರುತಿಸಲಾಗಿದೆ. ಸ್ಕೂಟರ್ ಅಪಘಾತಕ್ಕೀಡಾಗಿ ಕಾರಿನ ಚಕ್ರಕ್ಕೆ ಬಟ್ಟೆ ಸಿಕ್ಕಿಹಾಕಿಕೊಂಡ ಪರಿಣಾಮ ಆಕೆಯನ್ನು ಕಾರು 12 ಕಿಮೀವರೆಗೆ ಎಳೆದೊಯ್ದ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ. ಈ ಮೊದಲು, ಆಕೆಯ ಮೇಲೆ ಅತ್ಯಾಚಾರ ಎಸಗಿ ನಂತರ, ಕಾರಿನಲ್ಲಿ ಎಳೆದೊಯ್ದು ಕೊಂದು ಹಾಕಲಾಗಿದೆ ಎಂದು ಶಂಕಿಸಲಾಗಿತ್ತು. ಆದರೆ, ಪೊಲೀಸರು ಈಗ ಆಕೆ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ ಮತ್ತು ಆಕೆಯ ದೇಹವು ಕಾರಿಗೆ ಸಿಕ್ಕಿಹಾಕಿಕೊಂಡಿದ್ದರಿಂದ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ.
ಮಧ್ಯರಾತ್ರಿ ಹೊಸ ವರ್ಷಾಚರಣೆ ಆರಂಭವಾದ ಕೆಲವೇ ಗಂಟೆಗಳಲ್ಲಿ ದೆಹಲಿಯ ಸುಲ್ತಾನ್ಪುರಿಯಲ್ಲಿ ಈ ಘಟನೆ ನಡೆದಿದೆ. ಅಂಜಲಿಯ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದ ನಂತರ, ಆಕೆಯ ಕೈಕಾಲುಗಳು ವಾಹನದ ಒಳಭಾಗಕ್ಕೆ ಸಿಕ್ಕಿಹಾಕಿಕೊಂಡಾಗಲೂ ಕಾರಿನಲ್ಲಿದ್ದವರಿಗೆತಿಳಿಯದೇ, ಕಾರು 10-12 ಕಿ.ಮೀ ದೂರ ಸಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
BREAKING NEWS: ಆಂದ್ರದಲ್ಲಿ ಮತ್ತೊಂದು ಘೋರ ದುರಂತ, ಚಂದ್ರಬಾಬು ನಾಯ್ಡು ಸಭೆಯಲ್ಲಿ ಕಾಲ್ತುಳಿತಕ್ಕೆ 3 ಸಾವು
BREAKING NEWS: ಆಂದ್ರದಲ್ಲಿ ಮತ್ತೊಂದು ಘೋರ ದುರಂತ, ಚಂದ್ರಬಾಬು ನಾಯ್ಡು ಸಭೆಯಲ್ಲಿ ಕಾಲ್ತುಳಿತಕ್ಕೆ 3 ಸಾವು