ನವದೆಹಲಿ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿಗಾಗಿ ಕಾಯುತ್ತಿರುವ ರೈತರಿಗೆ ಸಂತಸದ ಸುದ್ದಿ ಸಿಕ್ಕಿದೆ. ಯಾಕಂದ್ರೆ, ಅವರ ಆಶಯ ಶೀಘ್ರದಲ್ಲೇ ಈಡೇರಲಿದೆ. 2023ರ ಆರಂಭದಲ್ಲಿ ರೈತರಿಗೆ ಹೊಸ ವರ್ಷದ ಕೊಡುಗೆಯಾಗಿ 13ನೇ ಕಂತಿನ ಹಣವನ್ನ ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಅದ್ರಂತೆ, 2023ರ ಜನವರಿ 1ರಂದು ರೈತರ ಖಾತೆಗೆ ಹಣ ವರ್ಗಾವಣೆಯಾಗಲಿದೆ ಎಂದು ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಅಂದ್ಹಾಗೆ, ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಹಣಕ್ಕಾಗಿ ರೈತರು KYC ಮಾಡಬೇಕಿರೋದು ಕಡ್ಡಾಯವಾಗಿದ್ದು, ಯಾರಾದರೂ ಇನ್ನೂ KYC ಮಾಡದಿದ್ದರೆ, ತಕ್ಷಣ ಮಾಡಿ. ಇನ್ನು ಇದಕ್ಕಾಗಿ ನೀವು ಪಿಎಂ ಕಿಸಾನ್ ವೆಬ್ಸೈಟ್ಗೆ ಹೋಗಿ ವಿವರಗಳನ್ನ ನೀಡಬಹುದು.
ಈ ರೀತಿ ಇ-ಕೆವೈಸಿ ಮಾಡಿ.!
* ಮೊದಲು ನೀವು ಅಧಿಕೃತ ವೆಬ್ಸೈಟ್ಗೆ ಹೋಗಬೇಕು (https://pmkisan.gov.in).
* ಇ-ಕೆವೈಸಿ ಆಯ್ಕೆ ಕಾಣಿಸಿಕೊಳ್ಳುತ್ತೆ, ಅದರ ಮೇಲೆ ಕ್ಲಿಕ್ ಮಾಡಿ.
* ಅಲ್ಲಿ ಆಧಾರ್ ಸಂಖ್ಯೆಯನ್ನ ನಮೂದಿಸಿ.
* ಇಮೇಜ್ ಕೋಡ್ ನಮೂದಿಸಿ ಮತ್ತು ಸಿಇಆರ್ಟಿ ಬಟನ್ ಕ್ಲಿಕ್ ಮಾಡಿ.
* ನಂತರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಒಟಿಪಿಯನ್ನ ಬೆರಳಚ್ಚಿಸಿ.
* ನೀವು ನೀಡಿದ ಎಲ್ಲಾ ವಿವರಗಳು ಸರಿಯಾಗಿದ್ದರೆ, ಇ-ಕೆವೈಸಿ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.
* ವಿವರಗಳು ಸರಿಯಾಗಿಲ್ಲದಿದ್ದರೆ ಇ-ಕೆವೈಸಿ ಪೂರ್ಣಗೊಳ್ಳುವುದಿಲ್ಲ.
BREAKING NEWS : ವಾಹನ ಖರೀದಿಸೋ ಪ್ಲ್ಯಾನ್’ನಲ್ಲಿ ಇದ್ದವರಿಗೆ ಬಿಗ್ ಶಾಕ್ ; ‘ಮಾರುತಿ ಸುಜುಕಿ ವಾಹನ’ಗಳ ಬೆಲೆ ಹೆಚ್ಚಳ
ಗಡಿಭಾಗದ ಜಿಲ್ಲೆಗಳ ಶಾಲೆಗಳ ಅಭಿವೃದ್ಧಿಗೆ 100 ಕೋಟಿ ಘೋಷಿಸಿದ ಸಿಎಂ ಬೊಮ್ಮಾಯಿ