ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಜನತೆ ಹೊಸ ವರ್ಷಾಚರಣೆಗೆ ಸಿದ್ದರಾಗಿದ್ದಾರೆ. ಇವರ ಅನುಕೂಲಕ್ಕಾಗಿ ಬಿ ಎರ್ ಆರ್ ಸಿ ಎಲ್ ಡಿಸೆಂಬರ್.31ರಂದು ತಡರಾತ್ರಿ 2.40ರವರೆಗೆ ನಮ್ಮ ಮೆಟ್ರೋ ರೈಲು ಸಂಚಾರವನ್ನು ವಿಸ್ತರಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಜನತೆ ಹೊಸ ವರ್ಷಾಚರಣೆಗೆ ಸಿದ್ದರಾಗಿದ್ದಾರೆ. ಇವರ ಅನುಕೂಲಕ್ಕಾಗಿ ಬಿ ಎರ್ ಆರ್ ಸಿ ಎಲ್ ಡಿಸೆಂಬರ್.31ರಂದು ತಡರಾತ್ರಿ 2.40ರವರೆಗೆ ನಮ್ಮ ಮೆಟ್ರೋ ರೈಲು ಸಂಚಾರವನ್ನು ವಿಸ್ತರಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ನಮ್ಮ ಮೆಟ್ರೋ ರೈಲು ಸಂಚಾರದ ಅವಧಿಯನ್ನು ಜನವರಿ.1ರ ಮುಂಜಾನೆ 2.40ರವರೆಗೆ ವಿಸ್ತರಿಸಲಾಗಿದೆ. ಎಲ್ಲಾ ಟರ್ಮಿನಲ್ ಗಳಿಂದ ಮಧ್ಯರಾತ್ರಿ 2 ಗಂಟೆಗೆ ಹಾಗೂ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ 2.40ಕ್ಕೆ ಕೊನೆಯ ರೈಲು ಸಂಚರಿಸಲಿದೆ ಅಂತ ತಿಳಿಸಿದೆ.
ಡಿಸೆಂಬರ್.31ರಂದು ರಾತ್ರಿ 11 ಗಂಟೆಯಿಂದ ಪ್ರತಿ 10 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚರಿಸಲಿದ್ದಾವೆ. ಹೊಸ ವರ್ಷಾಚರಣೆಗಾಗಿ ಎಂ.ಜಿ ರಸ್ತೆಗೆ ಬರುವವರ ಸಂಖ್ಯೆ ಹೆಚ್ಚಾಗುವ ಕಾರಣ ರಾತ್ರಿ 11 ಗಂಟೆಗೆ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗುತ್ತದೆ. ಅದರ ಬದಲು ಟ್ರಿನಿಟಿ ವೃತ್ತ ಮತ್ತು ಕಬ್ಬನ್ ಉದ್ಯಾನದ ಮೆಟ್ರೋ ನಿಲ್ದಾಣಗಳಲ್ಲಿ ರೈಲು ಹತ್ತಬಹುದು ಅಂತ ಹೇಳಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿ.ಎಸ್ ಷಡಕ್ಷರಿ ಮರುಆಯ್ಕೆ
BIG NEWS: ಶಾಸಕ ಮುನಿರತ್ನ ರೇಪ್, ಏಡ್ಸ್ ಟ್ರ್ಯಾಪ್ ಮಾಡಿದ್ದು ನಿಜ: SIT ಚಾರ್ಜ್ ಶೀಟ್