ಬೆಂಗಳೂರು: ಕ್ರಿಸ್ ಮಸ್ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆ ಕುಡಿದು ವಾಹನ ಚಾಲನೆ ಮಾಡದಂತೆ ಬೆಂಗಳೂರು ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದರು. ಆದರೂ ಕೂಡ ಜನರು ಕ್ಯಾರೇ ಎನ್ನದೇ ಮದ್ಯ ಸೇವಿಸಿ ವಾಹನ ಚಲಾಯಿಸಿ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ.
ಕ್ರಿಸ್ಮಸ್ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ಒಂದೇ ದಿನ 146 ಡ್ರಂಕ್ ಅಂಡ್ ಡ್ರೈವ್ ಕೇಸ್ ದಾಖಲಾದರೆ, ಡಿಸೆಂಬರ್ 31ರ ರಾತ್ರಿ ಕೇವಲ 78 ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ. 2022ರ ನವೆಂಬರ್ ತನಕ ನಗರದಲ್ಲಿ ಮದ್ಯ ಸೇವಿಸಿ ವಾಹನ ಓಡಿಸಿದವರ ಸಂಖ್ಯೆ 26,017 ಹಾಗೂ ತಪಾಸಣೆ ವೇಳೆ ಕಟ್ಟಿದ ದಂಡದಿಂದಲೇ ಸುಮಾರು 26 ಕೋಟಿ ರೂ. ಆದಾಯ ಸಂಗ್ರಹವಾಗಿದೆ.
ಇನ್ನೂ, ಜವಾಬ್ದಾರಿಯುತವಾಗಿ ಕುಡಿಯದೇ ವಾಹನ ಚಲಾಯಿಸಿದ ಬೆಂಗಳೂರಿಗರಿಗೆ ಸಂಚಾರಿ ಪೊಲೀಸರು ಧನ್ಯವಾದ ಅರ್ಪಿಸಿದ್ದಾರೆ.
ರಾಜ್ಯದಲ್ಲಿ ಭರ್ಜರಿ ಮದ್ಯ ಮಾರಾಟ
ಹೊಸ ವರ್ಷ 2023 ರನ್ನು ರಾಜ್ಯದ ಜನರು ಅದ್ದೂರಿಯಾಗಿ ಬರ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಎಂಜಿ ರೋಡ್, ಬ್ರಿಗೇಡ್ ರೋಡ್ ಸೇರಿ ಹಲವು ರಸ್ತೆಗಳಲ್ಲಿ ಜನ ಜಂಗುಳಿ ನೆರೆದಿತ್ತು. ಇನ್ನೂ, ಇಯರ್ ಎಂಡ್ ಹಿನ್ನೆಲೆ ರಾಜ್ಯದಲ್ಲಿ ಭರ್ಜರಿ ಮದ್ಯ ಮಾರಾಟವಾಗಿತ್ತು, ಅಬಕಾರಿ ಇಲಾಖೆಗೆ ಭಾರೀ ಆದಾಯ ತಂದುಕೊಟ್ಟಿದೆ.
ಡಿಸೆಂಬರ್ 27 ರಂದು 3.57 ಲಕ್ಷ ಲೀಟರ್ ಮದ್ಯ ಹಾಗೂ 2.41 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಡಿಸೆಂಬರ್ 28 ರಂದು 2.31 ಲಕ್ಷ ಲೀಟರ್ ಮದ್ಯ , 1.67 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಡಿಸೆಂಬರ್ 29 ರಂದು 2.31 ಲಕ್ಷ ಲೀಟರ್ ಮದ್ಯ, 1.93 ಲಕ್ಷ ಲೀಟರ್ ಬಿಯರ್ , ಡಿಸೆಂಬರ್ 30 ರಂದು .93 ಲಕ್ಷ ಲೀಟರ್ ಮದ್ಯ, 2.59 ಲಕ್ಷ ಲೀಟರ್ ಬಿಯರ್ , ಇನ್ನೂ 2022 ರ ಕೊನೆಯ ದಿನವಾದ ಡಿಸೆಂಬರ್ 31 ರಂದು 3 ಲಕ್ಷ ಲೀಟರ್ ಮದ್ಯ ಹಾಗೂ 2.41 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ ಎಂದು ಮೂಲಗಳು ಮಾಹಿತಿ ನೀಡಿದೆ.
ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ 2022-23 ನೇ ಸಾಲಿನಲ್ಲಿ 29 ಸಾವಿರ ಕೋಟಿ ರೂ ಗುರಿ ನೀಡಿತ್ತು, ಈ ವರ್ಷದ ಡಿ.29 ರವರೆಗೆ ರಾಜ್ಯಾದ್ಯಂತ ಮದ್ಯ ಮಾರಾಟದಿಂದ ಇಲಾಖೆಗೆ ಬರೋಬ್ಬರಿ 21,981 ಕೋಟಿ ರೂ ಆದಾಯ ಬಂದಿದೆ ಎಂದು ತಿಳಿದು ಬಂದಿದೆ.
Of all the persons checked yesterday night for Drink and Drive, only 78 were booked for DD violation. Thank you #Bengalurians for driving responsibly !
Wish you all a very happy, safe and prosperous New Year ! @BlrCityPolice @blrcitytraffic @SplCPTraffic @CPBlr— MN Anucheth, IPS (@jointcptraffic) January 1, 2023
BIG NEWS: ಸಂಕ್ರಾಂತಿ ಬಳಿಕ ಜೆಡಿಎಸ್ ಪಕ್ಷದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ – ಹೆಚ್ ಡಿ ಕುಮಾರಸ್ವಾಮಿ ಘೋಷಣೆ
2023ರಲ್ಲಿ ನಾವೇ ಸ್ವತಂತ್ರವಾಗಿ ಅಧಿಕಾರಕ್ಕೆ ಬರೋದು ಖಚಿತ – HDK ಭವಿಷ್ಯ | 2023 Election