ಬೆಂಗಳೂರು: ಮಲೆನಾಡಿನ ಭಾಗದಲ್ಲಿ ಹರಡುತ್ತಿರುವಂತ ಮಂಗನ ಕಾಯಿಲೆ ನಿಯಂತ್ರಣಕ್ಕೆ ಮುಂದಿನ ವರ್ಷ ಹೊಸ ಲಸಿಕೆ ಬರುವ ನಿರೀಕ್ಷೆಯಿದೆ ಎಂಬುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಗುರುವಾರದಂದು ವಿಧಾನಸಭೆಯಲ್ಲಿ ಬಿಜೆಪಿಯ ಅರಗ ಜ್ಞಾನೇಂದ್ರ ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಅವರು ಪುಣೆ ಪ್ರಯೋಗಾಲಯ 1989ರಲ್ಲಿ ಸಂಶೋಧಿಸಿದ್ದ ಲಸಿಕೆಯ ಕ್ಷಮತೆ ತಗ್ಗಿದೆ ಎಂಬುದಾಗಿ ತಜ್ಞರು ಖಚಿತ ಪಡಿಸಿದ್ದಾರೆ. ಹೊಸ ಲಸಿಕೆಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಜೊತೆಗೆ ಚರ್ಚಿಸಿ ಒಪ್ಪಿಸಲಾಗಿದೆ. ಹೈದರಾಬಾದ್ ಪ್ರಯೋಗಾಲಯದಲ್ಲಿ ಸಂಶೋಧನೆ ಪ್ರಗತಿಯಲ್ಲಿದೆ ಎಂದರು.
ಮಂಗನ ಕಾಯಿಲೆ ಅಂದರೆ ಕ್ಯಾಸನೂರು ಅರಣ್ಯ ರೋಗಕ್ಕೆ ಮುಂದಿನ ವರ್ಷ ಹೊಸ ಲಸಿಕೆ ಬರುವ ನಿರೀಕ್ಷೆಯಿದೆ. ಬೇಸಿಗೆಯಲ್ಲಿ ಈ ರೋಗ ಹೆಚ್ಚು ಬಾಧಿಸುವ ಸಾಧ್ಯತೆಗಳಿರುವ ಕಾರಣ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಗಲಭೆ ಸೃಷ್ಟಿಸಿದರೇ ಸ್ವಯಂಪ್ರೇರಿತ ಕೇಸ್ ದಾಖಲು: ಗೃಹ ಸಚಿವ ಡಾ.ಜಿ ಪರಮೇಶ್ವರ್ ಎಚ್ಚರಿಕೆ