ಟೋಕಿಯೊ (ಜಪಾನ್): ನ್ಯೂ ಜಪಾನ್ ಪ್ರೊ ವ್ರೆಸ್ಲಿಂಗ್ (NJPW) ಸಂಸ್ಥಾಪಕ ಮತ್ತು ಮಾಜಿ ವೃತ್ತಿಪರ ಕುಸ್ತಿಪಟು ಆಂಟೋನಿಯೊ ಇನೋಕಿ(Antonio Inoki-79) ಇಂದು ನಿಧನರಾದರು ಎಂದು ವರದಿಯಾಗಿದೆ.
ಕನಗಾವಾ ಪ್ರಾಂತ್ಯದ ಯೊಕೊಹೊಮಾ ನಗರದ ಇನೋಕಿ ಅವರು ಫೆಬ್ರವರಿ 20, 1943 ರಂದು ಜನಿಸಿದ ಅವರು ತಮ್ಮ 13 ನೇ ವಯಸ್ಸಿನಲ್ಲಿ ತಮ್ಮ ಕುಟುಂಬದೊಂದಿಗೆ ಬ್ರೆಜಿಲ್ಗೆ ತೆರಳಿದರು ಮತ್ತು ಕಾಫಿ ತೋಟದಲ್ಲಿ ಕೆಲಸ ಮಾಡಿದರು. ಇನೋಕಿ ತಮ್ಮ 17 ನೇ ವಯಸ್ಸಿನಲ್ಲಿ ಟೋಕಿಯೊದಲ್ಲಿ ಟೈಟೊ ವಾರ್ಡ್ ಜಿಮ್ನಾಷಿಯಂನಲ್ಲಿ ತಮ್ಮ ನಿಜವಾದ ಹೆಸರಿನಲ್ಲಿ ಜಪಾನಿನ ವೃತ್ತಿಪರ ಕುಸ್ತಿಯ ಜಗತ್ತನ್ನು ಪ್ರವೇಶಿಸಿದರು. ನಂತ್ರ, 1962 ರಲ್ಲಿ ತಮ್ಮ ಹೆಸರನ್ನು ‘ಆಂಟೋನಿಯೊ ಇನೋಕಿ’ ಎಂದು ಬದಲಾಯಿಸಿಕೊಂಡರು.
New Japan Pro Wrestling founder Antonio Inoki passes away at 79
Read @ANI Story | https://t.co/vWk1kRy4Sr#wrestling #AntonioInoki #antonio pic.twitter.com/FJn69BLlPH
— ANI Digital (@ani_digital) October 1, 2022
ಜಪಾನ್ ಪ್ರೊ-ವ್ರೆಸ್ಲಿಂಗ್ನೊಂದಿಗಿನ ವೈಷಮ್ಯದ ನಂತರ, ಅವರು ನ್ಯೂ ಜಪಾನ್ ಪ್ರೊ ವ್ರೆಸ್ಲಿಂಗ್ ಅನ್ನು ಸ್ಥಾಪಿಸಿದರು. ಇದು ಪ್ರಸ್ತುತ ಕ್ರೀಡೆಯ ಹಾರ್ಡ್ಕೋರ್ ಅಭಿಮಾನಿಗಳಲ್ಲಿ ಹೆಚ್ಚು ಜನಪ್ರಿಯವಾದ ಕುಸ್ತಿಯಾಗಿದೆ. ಇನೋಕಿ ಮೊದಲ IWGP ಹೆವಿವೇಟ್ ಚಾಂಪಿಯನ್ ಆದರು. NJPW ಏಷ್ಯಾದಲ್ಲಿ ಅತ್ಯಂತ ಯಶಸ್ವಿ ಕುಸ್ತಿಗಳಲ್ಲಿ ಒಂದಾಗಿದೆ.