ನವದೆಹಲಿ: ರಾಷ್ಟ್ರ ರಾಜಧಾನಿಯ ರಾಮ್ ಲೀಲಾ ಮೈದಾನದಲ್ಲಿ ನಡೆದ ಭವ್ಯ ಪ್ರಮಾಣವಚನ ಸಮಾರಂಭದ ನಂತರ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಗುರುವಾರ ಅಧಿಕಾರ ವಹಿಸಿಕೊಂಡರು. ಗುಪ್ತಾ ಅವರೊಂದಿಗೆ ಪರ್ವೇಶ್ ವರ್ಮಾ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಇತರ ಐವರು ಶಾಸಕರು ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ, ಗುಪ್ತಾ ಅವರಿಗೆ ಗೃಹ ಮತ್ತು ಹಣಕಾಸು ಖಾತೆಗಳನ್ನು ನೀಡುವುದರೊಂದಿಗೆ ದೆಹಲಿ ಕ್ಯಾಬಿನೆಟ್ ತನ್ನ ರೂಪವನ್ನು ಪಡೆದುಕೊಂಡಿದೆ. ಪರ್ವೇಶ್ ವರ್ಮಾ ಅವರಿಗೆ ಶಿಕ್ಷಣ ಮತ್ತು ಮಂಜಿಂದರ್ ಸಿಂಗ್ ಸಿರ್ಸಾ ಅವರಿಗೆ ಆರೋಗ್ಯ ಇಲಾಖೆಯನ್ನು ನೀಡಲಾಗಿದೆ.
ಯಾರಿಗೆ ಯಾವ ಸಚಿವ ಸ್ಥಾನ? ಇಲ್ಲಿದೆ ಪಟ್ಟಿ
1. ರೇಖಾ ಗುಪ್ತಾ (ಮುಖ್ಯಮಂತ್ರಿ) – ಗೃಹ, ಹಣಕಾಸು, ಸೇವೆಗಳು, ವಿಚಕ್ಷಣೆ, ಯೋಜನೆ
2. ಪರ್ವೇಶ್ ವರ್ಮಾ (ಉಪ ಮುಖ್ಯಮಂತ್ರಿ) – ಶಿಕ್ಷಣ, ಲೋಕೋಪಯೋಗಿ, ಸಾರಿಗೆ
3. ಮಂಜಿಂದರ್ ಸಿಂಗ್ ಸಿರ್ಸಾ – ಆರೋಗ್ಯ, ನಗರಾಭಿವೃದ್ಧಿ, ಕೈಗಾರಿಕೆ
4. ರವೀಂದ್ರ ಕುಮಾರ್ ಇಂದ್ರಜ್ – ಸಮಾಜ ಕಲ್ಯಾಣ, ಎಸ್ಸಿ/ಎಸ್ಟಿ ವ್ಯವಹಾರ, ಕಾರ್ಮಿಕ
5. ಕಪಿಲ್ ಮಿಶ್ರಾ – ಜಲ, ಪ್ರವಾಸೋದ್ಯಮ, ಸಂಸ್ಕೃತಿ
6. ಆಶಿಶ್ ಸೂದ್ – ಕಂದಾಯ, ಪರಿಸರ, ಆಹಾರ ಮತ್ತು ನಾಗರಿಕ ಸರಬರಾಜು
7. ಪಂಕಜ್ ಕುಮಾರ್ ಸಿಂಗ್ – ಕಾನೂನು, ಶಾಸಕಾಂಗ ವ್ಯವಹಾರ, ವಸತಿ