Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಾಮಾಲೆ ಬಂದಾಗ ‘ಕಣ್ಣು ಮತ್ತು ಉಗುರು’ಗಳು ‘ಹಳದಿ ಬಣ್ಣ’ಕ್ಕೆ ತಿರುಗಲು ಕಾರಣವೇನು ಗೊತ್ತಾ.?

21/06/2025 10:02 PM

ಮಜ್ಜಿಗೆಯಲ್ಲಿ ಒಂದು ಚಿಟಿಕೆ ‘ಇಂಗು’ ಬೆರೆಸಿ ಕುಡಿಯೋದು ಎಷ್ಟೆಲ್ಲಾ ಪ್ರಯೋಜನಕಾರಿ ಗೊತ್ತಾ.?

21/06/2025 9:48 PM

ಧಾರವಾಡ : ಕರ್ತವ್ಯ ಲೋಪ ಆರೋಪದಡಿ ಗುಡಿನಕಟ್ಟಿ ಗ್ರಾಮ ಪಂಚಾಯಿತಿ ಪಿಡಿಓ ಸಸ್ಪೆಂಡ್

21/06/2025 9:27 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಚಿತ್ರದುರ್ಗದ ಚಳ್ಳಕೆರೆಯ ನೇರಲಗುಂಟೆ ಗ್ರಾಮ ಪಂಚಾಯ್ತಿ ‘PDO ಹನುಮಂತ ಕುಮಾರ್’ ಅಮಾನತು
KARNATAKA

BREAKING: ಚಿತ್ರದುರ್ಗದ ಚಳ್ಳಕೆರೆಯ ನೇರಲಗುಂಟೆ ಗ್ರಾಮ ಪಂಚಾಯ್ತಿ ‘PDO ಹನುಮಂತ ಕುಮಾರ್’ ಅಮಾನತು

By kannadanewsnow0922/10/2024 6:07 PM

ಚಿತ್ರದುರ್ಗ: ಮೇಲಧಿಕಾರಿಗಳ ಅನುಮತಿಯಿಲ್ಲದೇ ಕರ್ತವ್ಯಕ್ಕೆ ಗೈರು ಹಾಜರಾಗಿ, ಕರ್ತವ್ಯದ ವೇಳೆಯಲ್ಲೇ ಅಶಿಸ್ತು ವರ್ತನೆ ತೋರಿದ ಕಾರಣ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನೇರಲಗುಂಟೆ ಗ್ರಾಮ ಪಂಚಾಯ್ತಿ ಪಿಡಿಒ ಹನುಮಂತ ಕುಮಾರ್ ಅಮಾನತುಗೊಳಿಸಿ ಜಿಲ್ಲಾ ಪಂಚಾಯ್ತಿ ಸಿಇಒ ಆದೇಶಿಸಿದ್ದಾರೆ.

ಇಂದು ಆದೇಶ ಹೊರಡಿಸಿರುವಂತ ಚಿತ್ರದುರ್ಗ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿ ಎಸ್.ಜೆ ಸೋಮಶೇಖರ್ ಅವರು, ಹನುಮಂತ ಕುಮಾರ್.ಎಸ್ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ನೇರಲಗುಂಟೆ ಗ್ರಾಮ ಪಂಚಾಯತಿ, ಇವರು ಗ್ರಾಮ ಪಂಚಾಯತಿ ಕಛೇರಿ ಕರ್ತವ್ಯಕ್ಕೆ ದಿನಾಂಕ:30-09-2024 ರಿಂದ ಅನಧಿಕೃತವಾಗಿ ಗೈರು ಹಾಜರಾಗಿರುತ್ತಾರೆ ಎಂದಿದ್ದಾರೆ.

ಸಾರ್ವಜನಿಕರ ಕುಂದುಕೊರತೆಗಳಿಗೆ ಸಾರ್ವಜನಿಕರು ಮತ್ತು ಜನ ಪ್ರತಿನಿದಿಗಳು ದೂರವಾಣಿ ಕರೆ ಮಾಡಿದರೂ ಸಹ ಸ್ವೀಕರಿಸದೆ ಇರುವುದರಿಂದ ಸರ್ಕಾರಿ ಯೋಜನೆಗಳ ಅನುಷ್ಟಾನದಲ್ಲಿ ಅಡಚಣೆ ಉಂಟಾಗಿದ್ದು, ಸದರಿಯವರನ್ನು ಬದಲಾವಣೆ ಮಾಡಿ ಅದೇ ಗ್ರಾಮ ಪಂಚಾಯತಿಯ ಗ್ರೇಡ್-1 ಕಾರ್ಯದರ್ಶಿಯಾದ ಕೆ.ಎಸ್.ಜಯಣ್ಣ ಇವರಿಗೆ ಪ್ರಭಾರ ವ್ಯವಸ್ಥೆ ಮಾಡಿಕೊಡಲು ಸದರಿ ಪಂಚಾಯತಿಯ ಅಧ್ಯಕ್ಷರು ಮತ್ತು ಸದಸ್ಯರು ಕೋರಿರುತ್ತಾರೆ ಎಂದು ಹೇಳಿದ್ದಾರೆ.

ಅದರಂತೆ ನೇರಲಗುಂಟೆ ಗ್ರಾಮ ಪಂಚಾಯತಿಯ ಹಾಜರಾತಿಯನ್ನು ಪರಿಶೀಲಿಸಲಾಗಿ ಸದರಿ ನೌಕರರು ದಿ:30-09-2024 ರಿಂದ ಇಲ್ಲಿಯವರೆಗೂ ಪೂರ್ವಾನುಮತಿ ಪಡೆಯದೆ ಕಚೇರಿ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿರುವುದು ಕಂಡುಬಂದಿರುತ್ತದೆ. ಈ ಹಿಂದೆಯೂ ಸಹ ಅನಧಿಕೃತ ಗೈರು ಹಾಜರಾಗಿದ್ದು, ಅದೇ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಬಂದಿರುತ್ತಾರೆ. ಆದ್ದರಿಂದ ಹನುಮಂತಕುಮಾರ್.ಎಸ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ನೇರಲಗುಂಟೆ ಗ್ರಾಮ ಪಂಚಾಯತಿ ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮತ್ತೊಮ್ಮೆ ಕೋರುತ್ತಾ ಆಡಳಿತಾತ್ಮಕ ಹಿತದೃಷ್ಟಿಯಿಂದ ಕೆ.ಎಸ್.ಜಯಣ್ಣ ಗ್ರೇಡ್-1 ಕಾರ್ಯದರ್ಶಿ, ನೇರಲಗುಂಟೆ ಗ್ರಾಮ ಪಂಚಾಯತಿ ಇವರಿಗೆ ನೇರಲಗುಂಟೆ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಯ ಪ್ರಭಾರ ವ್ಯವಸ್ಥೆ ಮಾಡುವಂತೆ ಕೋರಿರುತ್ತಾರೆ ಎಂದಿದ್ದಾರೆ.

ಮೇಲ್ಕಂಡ ಎಲ್ಲಾ ಅಂಶಗಳನ್ನು ಪರಿಶೀಲಿಸಿದಂತೆ ಹನುಮಂತಕುಮಾರ್.ಎಸ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ನೇರಲಗುಂಟೆ ಗ್ರಾಮ ಪಂಚಾಯತಿ ಇವರು ಒಬ್ಬ ಜವಾಬ್ದಾರಿಯುತ, ಸರ್ಕಾರಿ ನೌಕರರಾಗಿದ್ದುಕೊಂಡು, ಮೇಲಾಧಿಕಾರಿಗಳ ಅನುಮತಿ ಪಡೆಯದೇ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿ ಕಛೇರಿಯ ದೈನಂದಿನ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟುಮಾಡುವ ಮೂಲಕ, ಸರ್ಕಾರಿ ನೌಕರರ ವೃತ್ತಿಗೆ ತರವಲ್ಲದ ರೀತಿ ವರ್ತಿಸಿ, ಕರ್ನಾಟಕ ನಾಗರೀಕ ಸೇವಾ (ನಡವಳಿ) ನಿಯಮಾವಳಿಗಳು-1966ರ, ನಿಯಮ-3(i) (ii)&(ii)ನ್ನು, ಉಲ್ಲಂಘಿಸಿರುವುದು, ಕಂಡು ಬಂದಿರುವ ಕಾರಣ ಸದರಿಯವರನ್ನು ಅಮಾನತ್ತುಗೊಳಿಸುವುದು ಸೂಕ್ತವೆಂದು ಪರಿಗಣಿಸಿ ಈ ಕೆಳಕಂಡಂತೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

ಆದೇಶ ನಂ:ಜಿ.ಪಂ.ಚಿ/ಆ(3)ಸಿಸಿಎ:ಸಿಆರ್-41/2024-25, ದಿನಾಂಕ:22.10.2024. ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಸೋಮಶೇಖ‌ ಭಾ.ಆ.ಸೇ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿ, ಜಿಲ್ಲಾ ಪಂಚಾಯತ್, ಚಿತ್ರದುರ್ಗ ಆದ ನಾನು, ಕೆ.ಸಿ.ಎಸ್ (ಸಿ.ಸಿ.ಎ.) ನಿಯಮಾವಳಿ-1957ರ ನಿಯಮ-10(1) ರನ್ವಯ ಹನುಮಂತ ಕುಮಾರ್.ಎಸ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ನೇರಲಗುಂಟೆ ಗ್ರಾಮ ಪಂಚಾಯತಿ, ಚಳ್ಳಕೆರ ತಾಲ್ಲೂಕು ಇವರ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ. ಸದರಿಯವರು ಅಮಾನತ್ತು ಅವಧಿಯಲ್ಲಿ, ಈ ಪ್ರಾಧಿಕಾರದ ಅನುಮತಿ ಪಡೆಯದೆ ಕೇಂದ್ರಸ್ಥಾನ ಬಿಡುವಂತಿಲ್ಲ. ಅನ್ಯ ಉದ್ಯೋಗದಲ್ಲಿ ತೊಡಗುವಂತಿಲ್ಲ ಹಾಗೂ ನಿಯಮಾನುಸಾರ ಜೀವನಾಧಾರ ಭತ್ಯೆಗೆ ಅರ್ಹರಿರುತ್ತಾರೆ ಎಂಬುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

BREAKING: ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಮೂವರು ದುರ್ಮರಣ

ಬೆಂಗಳೂರಿನ ಜನತೆ ಗಮನಕ್ಕೆ: ಅ.23ರ ನಾಳೆ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut In Bengaluru

BREAKING: ದೆಹಲಿ, ಹೈದರಾಬಾದ್ CRPF ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ | CRPF Schools Receive Bomb Threats

Share. Facebook Twitter LinkedIn WhatsApp Email

Related Posts

ಧಾರವಾಡ : ಕರ್ತವ್ಯ ಲೋಪ ಆರೋಪದಡಿ ಗುಡಿನಕಟ್ಟಿ ಗ್ರಾಮ ಪಂಚಾಯಿತಿ ಪಿಡಿಓ ಸಸ್ಪೆಂಡ್

21/06/2025 9:27 PM1 Min Read

BREAKING : ರಾಜ್ಯದ ಎಲ್ಲಾ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ‘ಯೋಗ ಮಂದಿರ’ ಸ್ಥಾಪನೆ : ದಿನೇಶ್ ಗುಂಡೂರಾವ್ ಘೋಷಣೆ

21/06/2025 9:20 PM1 Min Read

BREAKING : ಬೆಳಗಾವಿಯಲ್ಲಿ ಭೀಕರ ಹತ್ಯೆ : ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆ, ಓರ್ವ ಯುವಕನ ಕೊಲೆಯಲ್ಲಿ ಅಂತ್ಯ

21/06/2025 8:29 PM1 Min Read
Recent News

ಕಾಮಾಲೆ ಬಂದಾಗ ‘ಕಣ್ಣು ಮತ್ತು ಉಗುರು’ಗಳು ‘ಹಳದಿ ಬಣ್ಣ’ಕ್ಕೆ ತಿರುಗಲು ಕಾರಣವೇನು ಗೊತ್ತಾ.?

21/06/2025 10:02 PM

ಮಜ್ಜಿಗೆಯಲ್ಲಿ ಒಂದು ಚಿಟಿಕೆ ‘ಇಂಗು’ ಬೆರೆಸಿ ಕುಡಿಯೋದು ಎಷ್ಟೆಲ್ಲಾ ಪ್ರಯೋಜನಕಾರಿ ಗೊತ್ತಾ.?

21/06/2025 9:48 PM

ಧಾರವಾಡ : ಕರ್ತವ್ಯ ಲೋಪ ಆರೋಪದಡಿ ಗುಡಿನಕಟ್ಟಿ ಗ್ರಾಮ ಪಂಚಾಯಿತಿ ಪಿಡಿಓ ಸಸ್ಪೆಂಡ್

21/06/2025 9:27 PM

BREAKING : ರಾಜ್ಯದ ಎಲ್ಲಾ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ‘ಯೋಗ ಮಂದಿರ’ ಸ್ಥಾಪನೆ : ದಿನೇಶ್ ಗುಂಡೂರಾವ್ ಘೋಷಣೆ

21/06/2025 9:20 PM
State News
KARNATAKA

ಧಾರವಾಡ : ಕರ್ತವ್ಯ ಲೋಪ ಆರೋಪದಡಿ ಗುಡಿನಕಟ್ಟಿ ಗ್ರಾಮ ಪಂಚಾಯಿತಿ ಪಿಡಿಓ ಸಸ್ಪೆಂಡ್

By kannadanewsnow0521/06/2025 9:27 PM KARNATAKA 1 Min Read

ಧಾರವಾಡ : ಕರ್ತವ್ಯ ಲೋಪ ಆರೋಪದಡಿ ಗುಡಿನಕಟ್ಟಿ ಗ್ರಾಮ ಪಂಚಾಯಿತಿ ಪಿಡಿಓ ಅಮಾನತುಕೊಂಡಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಿನಕಟ್ಟಿ…

BREAKING : ರಾಜ್ಯದ ಎಲ್ಲಾ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ‘ಯೋಗ ಮಂದಿರ’ ಸ್ಥಾಪನೆ : ದಿನೇಶ್ ಗುಂಡೂರಾವ್ ಘೋಷಣೆ

21/06/2025 9:20 PM

BREAKING : ಬೆಳಗಾವಿಯಲ್ಲಿ ಭೀಕರ ಹತ್ಯೆ : ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆ, ಓರ್ವ ಯುವಕನ ಕೊಲೆಯಲ್ಲಿ ಅಂತ್ಯ

21/06/2025 8:29 PM

BIG NEWS : ಮೈಸೂರಲ್ಲಿ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವು!

21/06/2025 8:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.