ಕಲಬುರಗಿ : ಚುನಾವಣಾ ಪ್ರಚಾರದ ವೇಳೆ ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ ಯತ್ನಾಳ್ ಹುಬ್ಬಳ್ಳಿಯಲ್ಲಿ ನ್ಯಾಯ ಹಿರೇಮಠ ಹತ್ತೆಯ ಆಗಿದೆ ಅಂತ ಸುಮ್ಮನಾದರೆ ನಾಳೆ ಕಲಬುರ್ಗಿಯಲ್ಲೂ ಆಗಬಹುದು ನಿಮ್ಮ ಮನೆಯಲ್ಲಿ ಆಗಬಹುದು ಎಂದು ಚುನಾವಣೆ ಪ್ರಚಾರದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದರು.
ಕಲ್ಬುರ್ಗಿಯ ಗಂಜ್ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ನೇಹ ಹಿರೇಮಠ ಕೊಲೆ ಹುಬ್ಬಳ್ಳಿಯಲ್ಲಿ ಆಗಿದೆ ಅಂತ ಸುಮ್ಮನಾದರೆ ನಾಳೆ ಕಲಬುರ್ಗಿಯಲ್ಲೂ ಆಗಬಹುದು ನಿಮ್ಮ ಮನೆಯಲ್ಲಿಯೂ ಆಗಬಹುದು ಎಂದು ಕಲ್ಬುರ್ಗಿಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಹೇಳಿಕೆ ನೀಡಿದರು.
ಗಾಡಿ ತಗೊಂಡು ಕೊರಳಲ್ಲಿ ಚೈನ್ ಹಾಕಿ ನಿಮ್ಮ ಕಾಲೋನಿಗೂ ಬರುತ್ತಾರೆ ರೂ.50 ಹಾಕಿಕೊಂಡು ಬರುತ್ತಾರೆ ಸೂ…ಮಕ್ಕಳು. ಅವರು ಬಂದಾಗ ಮನೆಯ ಮೇಲೆ ಕಲ್ಲು ಸಂಗ್ರಹ ಮಾಡಿಕೊಂಡು ಇರಿ ಎಂದು ಶಾಸಕ ಹೇಳಿದರು.
ನೇಹಾ ಕೊಲೆ ಪ್ರಕರಣದಂತಹ ಘಟನೆ ನಡೆಯಬಾರದು ಅಂದರೆ ಜಾಗೃತರಾಗಿ ಮತ ಹಾಕಿ ಆಶೀರ್ವಾದ ಮಾಡಿ. ನಾವು ನೀವು ಸುರಕ್ಷತೆಯಿಂದ ಇರುತ್ತೇವೆ ಎಂದು ಕಲ್ಬುರ್ಗಿ ಗಂಜ್ ಪ್ರದೇಶದಲ್ಲಿ ನಡೆದ ಪ್ರಚಾರದ ವೇಳೆ ಯತ್ನಾಳ ಭಾಷಣದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದರು.