ಹುಬ್ಬಳ್ಳಿ : ಹುಬ್ಬಳ್ಳಿಯ ಬಿ ವಿ ಬಿ ಕಾಲೇಜಿನಲ್ಲಿ ಭೀಕರವಾಗಿ ಕೊಲೆಯಾದ ನೇಹ ಹಿರೇಮಠ್ ತಂದೆ ನಿರಂಜನ ಹಿರೇಮಠ್ ಗೆ ಇದೀಗ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದರು.
ಹುಬ್ಬಳ್ಳಿಯಲ್ಲಿ ಸುದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆಯಾದ ವಿದ್ಯಾರ್ಥಿನಿಯ ತಂದೆಗೆ ಬೆದರಿಕೆ ಕರೆ ಬರುತ್ತಿವೆ. ಕಾಂಗ್ರೆಸ್ ಸರ್ಕಾರದ ಅಸಡ್ಡೆಯೇ ಇದಕ್ಕೆಲ್ಲಾ ಕಾರಣವಾಗಿದೆ ಬೆದರಿಕೆ ಕರೆಗಳ ಬಗ್ಗೆ ನಿರಂಜನ ಹಿರೇಮಠ ನನ್ನ ಮುಂದೆ ಹೇಳಿದ್ದಾರೆ. ಅನೇಕ ವಿಚಾರಗಳನ್ನು ಹೇಳಿದ್ದಾರೆ ಆದರೆ ಅವನಲ್ಲ ಹೇಳಲು ಆಗುವುದಿಲ್ಲ.
ಯುವತಿ ನೇಹಾ ಜೀವ ಹೋಗಿದೆ ಕುಟುಂಬಸ್ಥರು ದುಃಖದಲ್ಲಿದ್ದಾರೆ. ನೇಹಾಳನ್ನು ಮತಾಂತರ ಮಾಡಲು ಆರೋಪಿ ಫಯಾಜ್ ಯತ್ನಿಸಿದ್ದ. ಮತಾಂತರವನ್ನು ವಿರೋಧಿಸಿ ನೇಹಾ ಫಯಾಜ್ ನಿಂದ ದೂರವಾಗಿದ್ದಳು. ಇದೇ ಕಾರಣಕ್ಕೆ ಆರೋಪಿ ಫಯಾಜ್ ನೇಹಾಳನ್ನು ಕೊಂದಿದ್ದಾನೆ. ಎಂದರು.
ನಿಹಾಳ ಫೋಟೋಗಳನ್ನು ಪೊಲೀಸರೇ ವೈರಲ್ ಮಾಡಿದ್ದಾರೆ. ರಾಜ್ಯ ಸರ್ಕಾರವೇ ಮುಂದೆ ನಿಂತು ಫೋಟೋ ವೈರಲ್ ಮಾಡಿದೆ. ಸಿದ್ದರಾಮಯ್ಯ ಇಂತಹ ಚಿಲ್ಲರೆ ರಾಜಕಾರಣ ಮಾಡೋದಾ? ನೇಹಾ ಹಂತಕ ಫಯಾಜನ ಮೊಬೈಲ್ ಪೊಲೀಸರ ಬಳಿ ಇದೆ. ಯಾರ ತಪ್ಪು ಮಾಡಿದ್ದಾರೋ ಅವರನ್ನು ಒದ್ದು ಒಳಗೆ ಹಾಕಬೇಕು. ನಿಷ್ಪಕ್ಷಪಾತವಾಗಿ ನೇಹ ಅತ್ತೆ ತನಿಖೆ ನಡೆಸುವಂತೆ ಪ್ರಹ್ಲಾದ್ ಜೋಶಿ ಆಗ್ರಹಿಸಿದರು.