ಹುಬ್ಬಳ್ಳಿ : ಒಂದೇ ತಿಂಗಳಿನಲ್ಲಿ ಹುಬ್ಬಳ್ಳಿಯಲ್ಲಿ ಎರಡು ಯುವತಿಯರ ಭೀಕರ ಕೊಲೆ ನಡೆದಿವೆ. ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್ ಹಿತೇಂದ್ರ ಅವರು ಹುಬ್ಬಳ್ಳಿ ನಗರಕ್ಕೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳಿಗೆ ಸರಿಯಾದ ರೀತಿ ಕ್ಲಾಸ್ ತೆಗೆದುಕೊಂಡಿರುವ ಘಟನೆ ನಡೆಯಿತು.
ಹೌದು ಕಾನೂನು ಮತ್ತು ಸುವ್ಯವಸ್ಥೆಯ ವಿಭಾಗದ ಎಡಿಜಿಪಿ ಹಿತೇಂದ್ರ ಗೌಪ್ಯ ಸಭೆ ನಡೆಸುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಈ ಒಂದು ಸಭೆ ನಡೆಯುತ್ತಿದೆ. ಈ ವೇಳೆ ಕೊಲೆ ಪ್ರಕರಣ ಸೇರಿದಂತೆ ಅಕ್ರಮ ಚಟುವಟಿಕೆಗಳ ಸಂಬಂಧ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ನೇಹಾ ಹಿರೇಮಠ್ ಹಾಗೂ ಅಂಜಲಿ ಅಂಬಿಗೇರ ಕೇಸಿನ ಪಿಂಟು ಪಿನ್ ಮಾಹಿತಿಯನ್ನು ಕೇಳಿದ್ದಾರೆ. ಸಭೆಯಲ್ಲಿ ಅವಳಿ ನಗರದ ಕ್ರೈಂ ಕುರಿತು ಎಡಿಜಿಪಿ ಹಿತೇಂದ್ರ ಅವರು ಮಾಹಿತಿ ಪಡೆಯುತ್ತಿದ್ದಾರೆ. ಅವಳಿ ನಗರದಲ್ಲಿ ಇಲಾಖೆ ಕೈಗೊಂಡ ಕ್ರಮಗಳ ಸಂಬಂಧ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಯಾವ ಪ್ರಕರಣದಲ್ಲಿ ಏನೆಲ್ಲಾ ಕ್ರಮ ಆಗಿದೆ ಎನ್ನುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ಅಪರಾಧ ಪ್ರಕರಣಗಳು ಹೆಚ್ಚಾಗಲು ಏನು ಕಾರಣ ಏನೆಲ್ಲಾ ಕ್ರಮ ಕೈಗೊಂಡಿದ್ದೀರಿ? ಅಪರಾಧಿಗಳ ಮೇಲೆ ನಿಗಾ ಇಟ್ಟಿದ್ದಾರಾ? ರೌಡಿಶೀಟರ್ ವಿರುದ್ಧ ಕಾಲಕಾಲಕ್ಕೆ ಕ್ರಮ ಆಗಿದೆಯಾ? ಹುಬ್ಬಳ್ಳಿ ಧಾರವಾಡ ನಗರದಲ್ಲಿ ಅಕ್ರಮ ಚಟುವಟಿಕೆ ಹೆಚ್ಚಾಗಲು ಏನು ಕಾರಣ? ಠಾಣೆಗೆ ಬರುವಂತಹ ಜನರ ದೂರು ಆಲಿಸುವಲ್ಲಿ ಸಿಬ್ಬಂದಿಯ ವರ್ತನೆ ಹೇಗಿದೆ? ಸಭೆಯಲ್ಲಿ ಹೀಗೆ ಹತ್ತಾರು ಪ್ರಶ್ನೆಗಳನ್ನು ಕೇಳಿದರು.
ಕಳೆದ ಒಂದು ವರ್ಷದ ಅಪರಾಧ ಚಟುವಟಿಕೆ ಕ್ರಮದ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಅಪರಾಧ ಚಟುವಟಿಕೆ ಪ್ರಕರಣದ ಕುರಿತಂತೆ ಸಂಪೂರ್ಣ ವಾದಂತಹ ಮಾಹಿತಿಯನ್ನು ಆರ್ ಹಿತೇಂದ್ರ ಅವರಿಗೆ ನೀಡಿದರು.