ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಓಡಾಡುವ ವಾಹನ ಸವಾರರೂ ಎಷ್ಟೇ ಹುಷಾರಾಗಿದ್ರೂ ಸಾಲದು ಅನ್ನೋದರಲ್ಲಿ ತಪ್ಪೇನಿಲ್ಲ. ಕಳೆದು ಹಲವು ದಿನಗಳಿಂದ ರಸ್ತೆ ಗುಂಡಿ ಸಮಸ್ಯೆಯಿದ್ರೆ ಇದೀಗ ಮರಗಳ ಕೊಂಬೆಗಳಿಂದ ಜೀವ ಬಲಿಯಾಗುವ ಸಾಧ್ಯತೆ ಹೆಚ್ಚಾಗಿದ್ದು. ಇತ್ತಿಚೇಗೆ ಒಣಗಿದ ಮರದ ಕೊಂಬೆಗಳು, ಕಾರು, ಬೈಕ್, ಪಾದಾಚಾರಿಗಳ ತಲೆ ಮೇಲೆ ಬೀಳುವ ಪ್ರಕರಣಗಳು ಹೆಚ್ಚಾಗಿದೆ ಎಂದು ವರದಿಯಾಗುತ್ತಿದೆ.
ಶಿವಮೊಗ್ಗ: ಡಿ.7ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut
ಕಳೆದ ಒಂದು ವಾರದ ಹಿಂದೆ ಬಸವೇಶ್ವರ ನಗರದಲ್ಲಿ ವ್ಯಕ್ತಿಯೊಬ್ಬರು ಬೈಕ್ ಮೇಲೆ ಹೋಗುವಾಗ, ಮರದ ಕೊಂಬೆಯೊಂದು ಬೈಕ್ ಮೇಲೆ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಿವಮೊಗ್ಗ: ಡಿ.7ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut
ಮರಗಳ ರೆಂಬೆಗಳನ್ನು ಕಟ್ ಮಾಡೋದಕ್ಕೆ ಬಿಬಿಎಂಪಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ, ಮರದ ಪೋಷಣೆಯೂ ಸರಿಯಿಲ್ಲ. ಬಿಬಿಎಂಪಿ ಯ ನಿರ್ಲಕ್ಷ್ಯಕ್ಕೆ ಒಣಗಿದ ಮರಗಳು ನಗರದಲ್ಲಿ ಅವಾಂತಾರಗಳನ್ನ ಸೃಷ್ಟಿಸ್ತಿದೆ. ಮಕ್ಕಳನ್ನ ಶಾಲೆಗೆ ಬಿಟ್ಟು ಬರುವಾಗ, ಬೈಕ್ ಸವಾರರು ಹೆಲ್ಮೆಟ್ ಇಲ್ದೇ ಓಡಾಡಿದ ವೇಲೆ ತಲೆ ಮೇಲೆ ಏನದ್ರೂ ಈ ಕೊಂಬೆಗಳು ಬಿದ್ರೆ, ಸ್ಪಾಟ್ನಲ್ಲೇ ಜೀವ ಹೋಗುತ್ತೆ. ಮರಗಳ ಟ್ರಿಮ್ಮಿಂಗ್, ಪೋಷಣೆಗಿಂತ ಪಾಲಿಕೆಗೆ ಕೋಟಿ ಕೋಟಿ ಅನುದಾನ ಸುರಿದ್ರೂ ಈ ಸಮಸ್ಯೆಗೆ ಈವರೆಗೂ ಸಮಸ್ಯೆ ಮುಗಿದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಪಾಲಿಕೆ ಅಧಿಕಾರಿಗಳ ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ
ಶಿವಮೊಗ್ಗ: ಡಿ.7ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut