ಬೆಂಗಳೂರು : ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ಹಾಗೂ ಫೀಡರ್ ಬಸ್ ಗಳ ಸೇವೆಗಳ ಕುರಿತು ಮಾಹಿತಿ ದೊರೆಯುವಂತೆ ನೂತನ ವಿಧಾನವನ್ನು ಅನುಸರಿಸುತ್ತಿದ್ದು ಕ್ಯೂಆರ್ ಕೋಡ್ ಗಳನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದರೆ ಸಾಕು ಫೀಡರ್ ಬಸ್ಗಳ ಕುರಿತು ಸಂಪೂರ್ಣ ವಾದಂತಹ ಮಾಹಿತಿಗಳನ್ನು ಪ್ರಯಾಣಿಕರು ಪಡೆಯಬಹುದಾಗಿದೆ.
One Nation One Election: ‘ಕೋವಿಂದ್ ಸಮಿತಿ’ಯಿಂದ ಉನ್ನತ ಮಟ್ಟದ ಸಭೆ
ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಕೋಡ್ ಸ್ಕ್ಯಾನ್ ಮಾಡಿದರೆ, ಆ ನಿಲ್ದಾಣದಿಂದ ಯಾವೆಲ್ಲ ಮಾರ್ಗದಲ್ಲಿ ಬಿಎಂಟಿಸಿ ಫೀಡರ್ ಬಸ್ ಸೇವೆ ನೀಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ದೊರೆಯಲಿದೆ. ಅಲ್ಲದೆ, ಬಸ್ ಎಷ್ಟು ಸಮಯಕ್ಕೆ ಹೊರಡಲಿದೆ ಮತ್ತು ಯಾವ ಸಮಯದಲ್ಲಿ ನಿಗದಿತ ನಿಲ್ದಾಣಕ್ಕೆ ಹೋಗಲಿದೆ ಎಂಬುದನ್ನೂ ತಿಳಿಸಲಾಗುತ್ತದೆ.
ಮಾರಣಾಂತಿಕ ಹಾವು ಕಚ್ಚಿದ ವಿಷವನ್ನು ತಟಸ್ಥಗೊಳಿಸಲು ಹೊಸ ಪ್ರತಿಕಾಯ ಕಂಡುಹಿಡಿದ IISc ವಿಜ್ಞಾನಿಗಳು!
ಸದ್ಯ ಬಿಎಂಟಿಸಿಯು 66 ಮೆಟ್ರೋ ನಿಲ್ದಾಣಗಳ ಪೈಕಿ 43 ಮೆಟ್ರೋ ನಿಲ್ದಾಣಗಳಿಂದ ಒಟ್ಟು 151 ಬಸ್‌ಗಳ ಮೂಲಕ ಮೆಟ್ರೋ ಫೀಡರ್ ಸೇವೆ ನೀಡುತ್ತಿದೆ. ಅದನ್ನು ಶೀಘ್ರದಲ್ಲಿ 300ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಅದಕ್ಕಾಗಿ ಯಾವೆಲ್ಲ ನಿಲ್ದಾಣಗಳಿಂದ ಯಾವ ಮಾರ್ಗದಲ್ಲಿ ಬಸ್‌ಗಳ ಅವಶ್ಯಕತೆಯಿದೆ ಎಂಬ ಬಗ್ಗೆ ಚರ್ಚಿಸಲಾಗುತ್ತಿದೆ.
BREAKING : ಯಾದಗಿರಿ : ಪತ್ನಿಯ ಶೀಲ ಶಂಕಿಸಿ ಕುತ್ತಿಗೆ ಬಿಗಿದು ಭೀಕರವಾಗಿ ಕೊಲೆಗೈದ ಪತಿ