ಶಿವಮೊಗ್ಗ : ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಶ್ರೀಗಂಧ ಸಂಕೀರ್ಣದ ಆವರಣದಲ್ಲಿ ಕರಕುಶಲ ಕರ್ಮಿಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ಸ್ಥಳಕ್ಕೆ ತೆರಳಿದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಮನೆ ಮಂಜೂರಾತಿ ಸೇರಿದಂತೆ ಇತರೆ ಬೇಡಿಕೆ ಈಡೇರಿಸಲು ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳೋದಾಗಿ ಭರವಸೆ ನೀಡಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಕರಕುಶಲ ಕ್ರಮಿಗಳ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಮಿತಿ ಅಧ್ಯಕ್ಷ ಲೋಕೇಶ ಕುಮಾರ್ ಗುಡಿಗಾರ್, ಕರಕುಶಲ ಕಲೆಯನ್ನು ನಂಬಿಕೊಂಡು ಜೀವನ ನಡೆಸುತ್ತಿರುವ ಕುಶಲಕರ್ಮಿಗಳ ಬದುಕು ಸಂಕಷ್ಟದಲ್ಲಿದೆ. ಕೆಲಸ ಮಾಡಲು ಶ್ರೀಗಂಧ ಸಿಗುತ್ತಿಲ್ಲ. ಜೊತೆಗೆ ಸರ್ಕಾರದ ಯಾವ ಸೌಲಭ್ಯವೂ ಕುಶಲಕರ್ಮಿಗಳನ್ನು ತಲುಪುತ್ತಿಲ್ಲ ಎಂಬುದಾಗಿ ಅಳಲು ತೋಡಿಕೊಂಡರು.
ವಿಶ್ವ 1, ವಿಶ್ವ 2 ಹಾಗೂ ಪಶ್ಚಿಮಘಟ್ಟ ಡಿಸಿಎಚ್ ಯೋಜನೆಯಡಿ ಕುಶಲಕರ್ಮಿಗಳು, ಸರ್ಕಾರ ಜಂಟಿಯಾಗಿ ನಿರ್ಮಿಸಿದ್ದ ವಸತಿ ಯೋಜನೆ ತಲುಪುತ್ತಿಲ್ಲ. 22 ವರ್ಷಗಳ ಗುತ್ತಿಗೆ ಒಪ್ಪಂದ ಮಾಡಿಕೊಂಡು ಕುಶಲಕರ್ಮಿಗಳಿಗೆ ಮನೆ ನಿರ್ಮಿಸಿಕೊಟ್ಟಿತ್ತು. ಅವಧಿ ಮುಗಿದಿದ್ದರೂ ಈತನಕ ಕುಶಲಕರ್ಮಿಗಳಿಗೆ ಸರ್ಕಾರ ಮನೆಹಕ್ಕುಪತ್ರ ಹಸ್ತಾಂತರ ಮಾಡಿಲ್ಲ. ಸಾಗರ, ಸೊರಬ, ಶಿರಸಿಯಲ್ಲಿ ವಸತಿಗೃಹಗಳು ನಿರ್ಮಾಣವಾಗಿದ್ದರೂ ಅದು ಫಲಾನುಭವಿಗಳಿಗೆ ಸಿಕ್ಕಿಲ್ಲ ಎಂದರು.
ಸಾಗರದಲ್ಲಿ ಶಾಸಕರ ಆಸಕ್ತಿಯಿಂದಾಗಿ ಒಂದಷ್ಟು ಮೂಲಭೂತ ಸೌಲಭ್ಯ ದೊರೆತಿದೆ. ಆದರೆ ಸೊರಬ, ಸಿರಸಿ ಸಂಕೀರ್ಣಗಳು ಮೂಲಭೂತ ಸೌಲಭ್ಯವಿಲ್ಲದೆ ಪಾಳುಬಿದ್ದು ಹೋಗಿದೆ. 60ವರ್ಷ ಮೇಲ್ಪಟ್ಟ ನೋಂದಾಯಿತ ಕುಶಲಕರ್ಮಿಗಳಿಗೆ ಕೆಲಸ ಮಾಡಲು ಕಣ್ಣಿನ ದೃಷ್ಟಿ ಮಂದವಾಗಿದೆ. ಸರ್ಕಾರ ಅವರಿಗೆ ಮಾಶಾಸನ ನೀಡಬೇಕು. ಸಿರಸಿ ಸೊರಬ ಸಂಕೀರ್ಣವನ್ನು ಅಭಿವೃದ್ದಿಪಡಿಸಬೇಕು ಎಂದು ಒತ್ತಾಯಿಸಿದರು.
ಕುಶಲಕರ್ಮಿಗಳಿಗೆ ವಿಮಾ ಯೋಜನೆ ಪುನರಾರಂಭಿಸಬೇಕು. ಕುಶಲಕರ್ಮಿಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು. ಮೃತರಾದ ನೊಂದಾಯಿತ ಕುಶಲಕರ್ಮಿಗಳ ಗುರುತಿನಪತ್ರವನ್ನು ಕುಟುಂಬದ ಸದಸ್ಯರಿಗೆ ವರ್ಗಾಯಿಸಿ ಕೊಡಬೇಕು. ನಮ್ಮ ಬೇಡಿಕೆಗಳಿಗಾಗಿ ಸರ್ಕಾರದ ಎದುರು ಕೈಚಾಚುವ ದುಸ್ಥಿತಿ ಕುಶಲಕರ್ಮಿಗಳಾದ್ದಾಗಿರುವುದು ತೀರ ಬೇಸರದ ಸಂಗತಿ ಎಂದು ಹೇಳಿದರು.
ಪ್ರತಿಭಟನಾ ಸ್ಥಳಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ
ಸಾಗರದ ಕುಶಲ ಕರ್ಮಿಗಳ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸುತ್ತಿರುವಂತ ವಿಷಯ ತಿಳಿದಂತ ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳಕ್ಕೆ ಭೇಟಿ ನೀಡಿ ಬೇಡಿಕೆಗಳನ್ನು ಆಲಿಸಿದರು. ಅಲ್ಲದೇ ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿದರು.
ಈ ಬಳಿಕ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು ಕುಶಲಕರ್ಮಿಗಳು ಬೇಡಿಕೆಗಾಗಿ ಹೋರಾಟ ಮಾಡುವ ಸ್ಥಿತಿ ಬರಬಾರದು. ಸರ್ಕಾರ ನಿಮ್ಮ ಪರವಾಗಿ ಇದೆ. ವಿಶ್ವ ಯೋಜನೆಯಡಿ ಮಂಜೂರಾದ ಮನೆಗಳನ್ನು ನಿಮಗೆ ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಿರಸಿ ಮತ್ತು ಸೊರಬ ಸಂಕೀರ್ಣಕ್ಕೆ ಮೂಲಭೂತ ಸೌಲಭ್ಯ ಕಲ್ಪಸಲು ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆಯಲಾಗುತ್ತದೆ. ಕುಶಲಕರ್ಮಿಗಳನ್ನು ಕಲಾವಿದರು ಎಂಬ ಪಟ್ಟಿಗೆ ಸೇರಿಸಿರುವುದರಿಂದ ಅನೇಕ ಸೌಲಭ್ಯ ಸಿಗುತ್ತಿಲ್ಲ. ನಿಮ್ಮನ್ನು ಕಾರ್ಮಿಕರ ಪಟ್ಟಿಗೆ ಸೇರಿಸಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಮಾಡಲಾಗುತ್ತದೆ. ಸದ್ಯದಲ್ಲಿಯೆ ಸಚಿವರು, ನಿಗಮದ ವ್ಯವಸ್ಥಾಪಕರು, ಅಧ್ಯಕ್ಷರನ್ನು ಸಾಗರಕ್ಕೆ ಕರೆಸಿ ಸಮಾಲೋಚನಾ ಸಭೆ ಏರ್ಪಡಿಸಿ ನಿಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.
ಈ ವೇಳೆ ಸಾಗರ ತಹಶಿಲ್ದಾರ್ ರಶ್ಮಿ, ಯೋಜನಾಧಿಕಾರಿ ಗಣೇಶ್ ಸಿಂಗ್, ಅಣ್ಣಪ್ಪ, ದೀಪಕ್, ನಾಗರಾಜ್, ಶಿವಾನಂದ್, ತಿರುಮಲೇಶ್, ನಾಗೇಶ್ ಸಿರಸಿ, ಗುರುಪ್ರಸಾದ್, ದಿವಾಕರ್, ಧರ್ಮರಾಜ್, ಮೀನಾಕ್ಷಿ ರಾಮಚಂದ್ರ, ಆಶಾ ಎಂ.ಎನ್., ಸವಿತಾ, ಜಯಂತಿ, ಶಕುಂತಲಾ, ವಿನಾಯಕ ಗುಡಿಗಾರ್, ಅಣ್ಣಪ್ಪ ಕೆ.ಜಿ., ಲಕ್ಷ್ಮಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಾರಿಕಾಂಬಾ ಜಾತ್ರೆ ಹಿನ್ನೆಲೆ: ಸಾಗರ ಪ್ರಮುಖ ರಸ್ತೆಗಳ ಢಾಂಬಾರೀಕರಣಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ
ರಾಜ್ಯ ಸರ್ಕಾರದಿಂದ ‘ಬಳ್ಳಾರಿ ಶೂಟೌಟ್’ ಮುಚ್ಚಿ ಹಾಕಲು ಷಡ್ಯಂತ್ರ್ಯ: HDK ಗಂಭೀರ ಆರೋಪ
‘ವೀಕೆಂಡ್ ವಿತ್ ರಮೇಶ್’ ಪಾಠವಾಗಿ ಇಡಿ, ‘ಶಿಕ್ಷಣ ವ್ಯವಸ್ಥೆ’ ಬದಲಾಯಿಸಿ: ‘ಡೆತ್ ನೋಟ್’ ಬರೆದಿಟ್ಟು ಯುವಕ ಆತ್ಮಹತ್ಯೆ








