ಬೆಂಗಳೂರು: ಮಂಗಳೂರಿನ ಕೇಂದ್ರ ಕಾರಗೃಹವು ಮಂಗಳೂರಿನ ಹೃದಯಭಾಗದಲ್ಲಿದೆ. ಇಲ್ಲಿನ ಕಾಂಪೌಂಡ್ ಕಟ್ಟಡದ ಎತ್ತರವೂ ತೀರಾ ಕಡಿಮೆ ಇದೆ. ಕಾರಾಗೃಹದಲ್ಲಿ ನಡೆಯುವ ಚಟುವಟಿಕೆಗಳು ಸಹ ಹೊರಗಡೆ ಕಾಣುವಂತಾಗಿದೆ. ಎಲ್ಲಾ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಅಗಿಂದಾಗ್ಗೆ ಅಕ್ರಮ ಚಟುವಟಿಕೆಗಳು ನಡೆಯುವುದು ಕಂಡುಬಂದಿದೆ. ಈ ನಿಟ್ಟಿನಲ್ಲಿ ಈ ಕಾರಾಗೃಹವನ್ನು ಸ್ಥಳಾಂತರ ಮಾಡಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಐವಾನ್ ಡಿ ಸೋಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಂಗಳೂರು ಜಿಲ್ಲಾ ಕಾರಾಗೃಹವನ್ನು ಬಂಟ್ವಾಳ ತಾಲ್ಲೂಕು ಚೇಳೂರು ಮತ್ತು ಕುರ್ನಾಡು ಗ್ರಾಮಕ್ಕೆ ವರ್ಗಾಯಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮಂಗಳೂರು ಕೇಂದ್ರ ಕಾರಾಗೃಹವನ್ನು ನಿರ್ಮಾಣ ಮಾಡುವ ಸಂಬಂಧ ಜಿಲ್ಲಾಡಳಿತದಿಂದ ಬಂಟ್ವಾಳ ತಾಲ್ಲೂಕು ಚೇಳೂರು ಮತ್ತು ಕುರ್ನಾಡು ಗ್ರಾಮದಲ್ಲಿ 63 ಎಕರೆ 89 ಸೆಂಟ್ಸ್ ಜಮೀನು ಮಂಜೂರು ಮಾಡಲಾಗಿರುತ್ತದೆ. ಸದರಿ ನೂತನ ಜಮೀನಿನ ಸುತ್ತಲೂ ರೂ.211.66 ಲಕ್ಷಗಳ ವೆಚ್ಚದಲ್ಲಿ ಕಾಂಪೌಂಡ್ ಗೋಡೆ ನಿರ್ಮಿಸಲಾಗಿರುತ್ತದೆ.
ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಕುಖ್ಯಾತ ಮತ್ತು ಭೂಗತ ಜಗತ್ತಿನ ಜೊತೆ ಸಂಪರ್ಕ ಹೊಂದಿರುವ ಹಲವಾರು ಬಂದಿಗಳು ದಾಖಲಾಗುತ್ತಿದ್ದು, ಸದರಿ ಕಾರಾಗೃಹವನ್ನು ಅತಿ ಸೂಕ್ಷ್ಮ ಕಾರಾಗೃಹವೆಂದು ಪರಿಗಣಿಸಲಾಗಿದೆ. ಮೊದಲನೇ ಹಂತದ ಕಾಮಗಾರಿಗಳನ್ನು ರೂ. 110 ಕೋಟಿಗಳ ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಪ್ರಸ್ತುತ, ಮಂಗಳೂರು ನೂತನ ಕೇಂದ್ರ ಕಾರಾಗೃಹದ ಮೊದಲನೇ ಹಂತದ ಕಾಮಗಾರಿಗಳು ಪೂರ್ಣಗೊಂಡಿದ್ದು, ಲೋಕೋಪಯೋಗಿ ಇಲಾಖೆ, ಮಂಗಳೂರು ವಿಭಾಗ ಇವರು 2ನೇ ಹಂತದ ಕಾಮಗಾರಿಗಳಿಗೆ ರೂ.195.00 ಕೋಟಿಗಳ ಅಂದಾಜು ಪಟ್ಟಿಯನ್ನು ಸಲ್ಲಿಸಿರುತ್ತಾರೆ. ಅನುದಾನದ ಲಭ್ಯತೆಯನುಸಾರ ಕಾಮಗಾರಿಯನ್ನು ಪೂರ್ಣಗೊಳಿಸಿ, ಕಾರಾಗೃಹವನ್ನು ಸ್ಥಳಾಂತರಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಮಂಗಳೂರು ಕಾರಾಗೃಹದಲ್ಲಿ ಬಂದಿಗಳು ನಿμÉೀಧಿತ ವಸ್ತುಗಳ ಬಳಕೆಯನ್ನು ಮಾಡದಂತೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಈಗಾಗಲೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಾರಾಗೃಹಕ್ಕೆ ಮಾದಕ ವಸ್ತುಗಳ ಸರಬರಾಜು ಮತ್ತು ಬಂದಿಗಳ ಬಳಿ ತಪಾಸಣೆ ಸಮಯದಲ್ಲಿ ನಿμÉೀಧಿತ ವಸ್ತುಗಳು ದೊರೆತ ಕುರಿತು ಒಟ್ಟು 9 ಪ್ರಕರಣಗಳನ್ನು ಬರ್ಕೆ ಪೆÇಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು ತನಿಖೆ ಪ್ರಗತಿಯಲ್ಲಿರುತ್ತದೆ.
ಮಂಗಳೂರು ಜಿಲ್ಲಾ ಕಾರಾಗೃಹಕ್ಕೆ ಕೆ.ಎಸ್.ಐ.ಎಸ್.ಎಫ್. ಸಿಬ್ಬಂದಿಗಳನ್ನು ಕಾರಾಗೃಹದ ಸುತ್ತಲೂ ಗಸ್ತಿಗಾಗಿ ಮತ್ತು ಮುಖ್ಯದ್ವಾರ ಹಾಗೂ ಸಂದರ್ಶನ ವಿಭಾಗಗಳಲ್ಲಿ ಭದ್ರತೆ ತಪಾಸಣೆ ಹಾಗೂ ನಿರ್ವಹಣೆ ಕರ್ತವ್ಯಕ್ಕೆ ನಿಯೋಜಿಸಲಾಗಿರುತ್ತದೆ. ದಿನದ 24ಘಿ7 ಗಂಟೆಗಳ ಕಾಲ ಕಾರಾಗೃಹಕ್ಕೆ ಆಗಮಿಸುವ ಮತ್ತು ನಿರ್ಗಮಿಸುವ ಎಲ್ಲಾ ವ್ಯಕ್ತಿಗಳನ್ನು ಭದ್ರತಾ ಉಪಕರಣಗಳು ಮತ್ತು ಬ್ಯಾಗೇಜ್ ಸ್ಕ್ಯಾನರ್ ಮೂಲಕ ಹಾಗೂ ಸಿಬ್ಬಂದಿಗಳಿಂದ ಭೌತಿಕವಾಗಿ ತಪಾಸಣೆಯನ್ನು ಕೈಗೊಳ್ಳಲಾಗುತ್ತಿದೆ.
ಅಧಿಕಾರಿ / ಸಿಬ್ಬಂದಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ಮೇಲಿಂದ ಮೇಲೆ ಅನಿರೀಕ್ಷಿತ ತಪಾಸಣೆ ಕೈಗೊಳ್ಳಲು ಕ್ರಮ ವಹಿಸಲಾಗಿರುತ್ತದೆ. ಪ್ರತಿನಿತ್ಯ ಬಂಧಿಗಳನ್ನು ಹಾಗೂ ಬಂಧಿಗಳ ಕೊಠಡಿಗಳನ್ನು ಅನಿರೀಕ್ಷಿತವಾಗಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಬಂಧಿಗಳ ನಡುವಿನ ಗುಂಪು ಘರ್ಷಣೆಯನ್ನು ತಪ್ಪಿಸಲು ಬಂಧಿಯ ಹಿನ್ನೆಲೆಯನ್ನು ತಿಳಿದು ಸೂಕ್ತ ರೀತಿಯಲ್ಲಿ ನಿಗಾವಹಿಸಿ ಬಂಧಿಗಳ ನಡುವೆ ಘರ್ಷಣೆಯಾಗದಂತೆ ಕ್ರಮವಹಿಸಲು ಸೂಚಿಸಿದೆ.
ಮಂಗಳೂರು ಕಾರಾಗೃಹದಲ್ಲಿ ಅಳವಡಿಸಲಾಗಿರುವ 5 ಸಂಖ್ಯೆ ಮೊಬೈಲ್ ಜಾಮರ್‍ಗಳನ್ನು ದುರಸ್ಥಿ ಮತ್ತು ಮೇಲ್ಮಜೀಗೇರಿಸಲು ಕ್ರಮ ಕೈಗೊಳ್ಳಲಾಗಿದ್ದು ಜಾಮರ್‍ಗಳ ದುರಸ್ಥಿ ಮತ್ತು ಮೇಲ್ದರ್ಜೆಗೇರಿಸುವ ಕಾರ್ಯ ಪ್ರಗತಿಯಲ್ಲಿದ್ದು, ಟೆಸ್ಟಿಂಗ್ ಅಂಡ್ ರಿಕ್ಯಾಲಿಬ್ರೇಶನ್ ಹಂತದಲ್ಲಿರುತ್ತದೆ. ಕಾರಾಗೃಹದ ಒಳಭಾಗದಲ್ಲಿ ಯಾವುದೇ ನೆಟ್ವರ್ಕ್ ದೊರೆಯದಂತೆ ಹಾಗೂ ಕಾರಾಗೃಹದ ಹೊರಭಾಗದಲ್ಲಿ ಸಾರ್ವಜನಿಕರಿಗೆ ನೆಟ್ವರ್ಕ್ ತೊಂದರೆ ಯಾಗದಂತೆ ಅಗತ್ಯ ಕ್ರಮ ವಹಿಸಲಾಗುವುದು.
ಇತ್ತೀಚೆಗೆ ಅನಾರೋಗ್ಯಕ್ಕೊಳಗಾದ ಬಂದಿಗಳನ್ನು ತಕ್ಷಣವೇ ಜಿಲ್ಲಾ ಆರೋಗ್ಯ ಅಧಿಕಾರಿಗಳು / ತಾಲ್ಲೂಕು 4 ಜನ ವೈದ್ಯಾಧಿಕಾರಿಗಳ ತಂಡ ತಕ್ಷಣ ಕಾರಾಗೃಹಕ್ಕೆ ಆಗಮಿಸಿ ಬಂದಿಗಳನ್ನು ಪರೀಕ್ಷಿಸಿರುತ್ತಾರೆ. ಬಂದಿಗಳನ್ನು ಪರೀಕ್ಷಿಸಿದ ವೈದ್ಯಾಧಿಕಾರಿಗಳು ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲು ಸೂಚಿಸಿದರನ್ವಯ ಸದರಿ ವಿಷಯವಾಗಿ ಪೆÇಲೀಸ್ ಆಯುಕ್ತರು ಮಂಗಳೂರು ನಗರ ರವರಿಗೆ ಮತ್ತು ಕಾರಾಗೃಹ ವ್ಯಾಪ್ತಿಯ ಬರ್ಕ ಪೆÇಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ತಿಳಿಸಿ ಪೆÇಲೀಸ್ ಮತ್ತು ಕಾರಾಗೃಹದ ಸಿಬ್ಬಂದಿಗಳ ಬೆಂಗಾವಲಿನಲ್ಲಿ 59 ಜನ ಬಂದಿಗಳನ್ನು ಸರ್ಕಾರಿ ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ.
ಬಂದಿಗಳ ಆರೋಗ್ಯದ ಹಿತದೃಷ್ಟಿಯಿಂದ ವೈದ್ಯಾಧಿಕಾರಿಗಳು ಕಾರಾಗೃಹದಲ್ಲಿಯೇ ರಾತ್ರಿ ಸಹ ಕರ್ತವ್ಯ ನಿರ್ವಹಿಸಿರುತ್ತಾರೆ. ಮಹಾನಿರ್ದೇಶಕರು, ಕಾರಾಗೃಹ ಮತ್ತು ಸುಧಾರಣಾ ಸೇವೆ ರವರೊಂದಿಗೆ ಹೆಚ್ಚುವರಿ ಕಾರಾಗೃಹ ಮಹಾನಿರೀಕ್ಷಕರು ಹಾಗೂ ಕಾರಾಗೃಹಗಳ ಉಪಮಹಾನಿರೀಕ್ಷಕರು ದಕ್ಷಿಣ ವಲಯ ಬೆಂಗಳೂರು ರವರು ಮಂಗಳೂರು ಜಿಲ್ಲಾ ಸರ್ಕಾರಿ ವೆನ್ ಲಾಕ್ ಆಸ್ಪತ್ರೆಗೆ ಭೇಟಿ ನೀಡಿ ಬಂದಿಗಳ ಯೋಗಕ್ಷೇಮ ವಿಚಾರಿಸಿರುತ್ತಾರೆ. ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಭೇಟಿ ಮಾಡಿ ಬಂದಿಗಳ ಆರೋಗ್ಯದ ಕುರಿತು ವಿಚಾರಿಸಲಾಗಿ, ವೈದ್ಯಾಧಿಕಾರಿಗಳು ಬಂದಿಗಳಿಗೆ ಯಾವುದೇ ಪ್ರಾಣಾಪಾಯ ಇರುವುದಿಲ್ಲವೆಂದು ತಿಳಿಸಿರುತ್ತಾರೆ. ನಿಗಾವಣೆ ಅವಧಿ ಮುಕ್ತಾಯದ ನಂತರ ಹಂತ ಹಂತವಾಗಿ ಬಂದಿಗಳನ್ನು ಆಸ್ಪತ್ರೆಯಿಂದ ಡಿಸ್‍ಚಾರ್ಜ್ ಮಾಡಲಾಗಿದೆ ಎಂದು ತಿಳಿಸಿದರು.