ಮೈಸೂರು: ಇಂದು ಭಾರತದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದೇಶದ ಪ್ರಥಮ ಉಪಪ್ರಧಾನಿ ಮತ್ತು ಗೃಹ ಸಚಿವರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ, ನೈರುತ್ಯ ರೈಲ್ವೆ, ಮೈಸೂರು ವಿಭಾಗದ ವತಿಯಿಂದ ಏಕತಾ ಪಾದಯಾತ್ರೆ ಆಯೋಜಿಸಲಾಯಿತು.
ಈ ಪಾದಯಾತ್ರೆ ಚಾಮುಂಡಿ ಕ್ಲಬ್ ನಿಂದ ಪ್ರಾರಂಭವಾಗಿ ಮೈಸೂರು ರೈಲು ನಿಲ್ದಾಣದ ಬಳಿ ಸಮಾಪ್ತಿಯಾಯಿತು. ಈ ಪಾದಯಾತ್ರೆಯು ರೈಲ್ವೆ ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ಏಕತೆ ಮತ್ತು ಅಖಂಡತೆಯ ಸಂದೇಶವನ್ನು ಸಾರಿತು.
ಮುದಿತ್ ಮಿತ್ತಲ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ಮೈಸೂರು ಮತ್ತು ಶ್ರೀ ಶಮ್ಮಾಸ್ ಹಮೀದ್, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ಪಾದಯಾತ್ರೆಯನ್ನು ಮುನ್ನಡೆಸಿದರು. ಎಲ್ಲಾ ಶಾಖಾ ಅಧಿಕಾರಿಗಳು, ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಹಾಗೂ ವಿವಿಧ ವಿಭಾಗಗಳ ನೌಕರರು ಉತ್ಸಾಹಪೂರ್ಣವಾಗಿ ಪಾಲ್ಗೊಂಡರು.
ಈ ಪಾದಯಾತ್ರೆಯನ್ನು ರಾಷ್ಟ್ರೀಯ ಏಕತಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಯಿತು. ಭಾರತದ ಏಕತೆಯ ಸಂಕೇತವಾದ “ಭಾರತದ ಉಕ್ಕಿನ ಮನುಷ್ಯ” ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ದೃಷ್ಟಿ ಮತ್ತು ದೇಶದ ಏಕೀಕರಣದ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನೆರವೇರಿಸಲಾಯಿತು.
‘ಗ್ರಾಮ ಪಂಚಾಯ್ತಿ ಚುನಾವಣೆ’ಗೆ ‘ನಾಮಪತ್ರ’ದೊಂದಿಗೆ ಸಲ್ಲಿಸಲು ಈ ‘ದಾಖಲೆ’ಗಳು ಕಡ್ಡಾಯ
BREAKING : ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ ನ.3 ರಂದು ದೋಷಾರೋಪ ನಿಗದಿ
 
		



 




