ಸತಾರಾ : 11ನೇ ಹಿಲ್ ಹಾಫ್ ಮ್ಯಾರಥಾನ್ ನಲ್ಲಿ ಭಾಗವಹಿಸುತ್ತಿದ್ದ ರಾಷ್ಟ್ರೀಯ ಟೇಬಲ್ ಟೆನಿಸ್ ಆಟಗಾರ ಹೃದಯಾಘಾತದಿಂದ ಭಾನುವಾರ ಸಾವನ್ನಪ್ಪಿದ್ದರು.
ಮೂಲತಃ ಕೊಲ್ಹಾಪುರದವರಾದ 32 ವರ್ಷದ ರಾಜ್ ಪಟೇಲ್ ಅವರು ಸುಮಾರು 7,000 ಜನರು ಭಾಗವಹಿಸಿದ್ದ ಹಾಫ್ ಮ್ಯಾರಥಾನ್ ನಲ್ಲಿ ಹೃದಯಾಘಾತದಿಂದ ನಿಧನರಾದರು ಎನ್ನಲಾಗಿದೆ. ಪಟೇಲ್ ಅವರ ಪಾರ್ಥಿವ ಶರೀರವನ್ನು ಪೊಲೀಸರು ಮತ್ತು ಹಾಫ್ ಮ್ಯಾರಥಾನ್ ಆಯೋಜಕರು ಸತಾರಾ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು. “ಮೃತರ ಮರಣೋತ್ತರ ಪರೀಕ್ಷೆಯನ್ನು ಇಲ್ಲಿಯೇ ನಡೆಸಲಾಗುವುದು ಎನ್ನಲಾಗಿದೆ. ಇನ್ನೂ ಈ ಸ್ಪರ್ಧೆಯಲ್ಲಿ ಓಡುವಾಗ ಇನ್ನೂ ಮೂವರು ಸ್ಪರ್ಧಿಗಳು ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.