ಬೆಂಗಳೂರು: 2025-26ನೇ ಸಾಲಿನ ಎನ್ ಎಂ ಎಂ ಎಸ್ ಪರೀಕ್ಷೆಯನ್ನು ಮುಂದೂಡಿಕೆ ಮಾಡಿ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಆದೇಶಿಸಿದೆ.
ಈ ಕುರಿತಂತೆ ಕೆ ಎಸ್ ಕ್ಯೂ ಎ ಎ ಸಿಯ ಕಾರ್ಯನಿರ್ವಾಹಕ ನಿರ್ದೇಶಕರು ಆದೇಶ ಹೊರಡಿಸಿದ್ದು, 2025-26ನೇ ಸಾಲಿನಲ್ಲಿ ನ್ಯಾಷನಲ್ ಮೀನ್ಸ್ -ಕಮ್ ಮೆರಿಟ್ ವಿದ್ಯಾರ್ಥಿ ವೇತನ (NMMS) ಪರೀಕ್ಷೆಯನ್ನು ದಿನಾಂಕ:18.01.2026 (ಭಾನುವಾರ)ರಂದು ನಡೆಸುವುದಾಗಿ ಉಲ್ಲೇಖ(2)ರ ಈ ಕಛೇರಿ ಜ್ಞಾಪನದಲ್ಲಿ ತಿಳಿಸಲಾಗಿತ್ತು. ಕಾರಣಾಂತರಗಳಿಂದ ಸದರಿ ಪರೀಕ್ಷೆಯನ್ನು ಮುಂದೂಡಿ ದಿನಾಂಕ:01.02.2026 (ಭಾನುವಾರ)ರಂದು ನಿಗದಿಪಡಿಸಲಾಗಿದೆ ಎಂದಿದ್ದಾರೆ.
ಈ ಬಗ್ಗೆ ಜಿಲ್ಲೆ, ತಾಲ್ಲೂಕು, ಶಾಲಾ ಹಂತದಲ್ಲಿ ವ್ಯಾಪಕ ಪ್ರಚಾರ ನೀಡಿ, ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸಲು ಅಗತ್ಯ ಕ್ರಮವಹಿಸಲು ತಿಳಿಸಿದೆ. ಹಾಗೂ ಈಗಾಗಲೇ NMMS ಪರೀಕ್ಷೆಗೆ ನಿಗದಿಯಾಗಿರುವ ಪರೀಕ್ಷಾ ಕೇಂದ್ರಗಳನ್ನು ಬೇರೆ ಯಾವುದೇ ಪರೀಕ್ಷೆಗಳಿಗೆ ನೀಡದಂತೆ ಕ್ರಮವಹಿಸಲು ತಿಳಿಸಿದ್ದಾರೆ.

ಸಿಎಂ ಅವಧಿ ಕ್ವಾಂಟಿಟಿಗಿಂತ ಕ್ವಾಲಿಟಿ ಬಗ್ಗೆ ಚರ್ಚೆಯಾಗಬೇಕು: ಸಂಸದ ಬೊಮ್ಮಾಯಿ








