ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಈ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದರು.
ನಾನು ಸಲ್ಲಿಸಿದ್ದ ಅರ್ಜಿಯ ಬಗ್ಗೆ ನ್ಯಾಯಮೂರ್ತಿ ತೀರ್ಪು ನೀಡಿದ್ದಾರೆ. ಹೈ ಕೋರ್ಟ್ ಆದೇಶವನ್ನು ಮಾಧ್ಯಮಗಳ ಮೂಲಕ ನೋಡಿದ್ದೇನೆ. ನನಗೆ ಪೂರ್ಣ ಜಡ್ಜ್ಮೆಂಟ್ ಓದಲು ಆಗಿಲ್ಲ. ಬಿಎನ್ಎಸ್ 218 ರ ಪ್ರಕಾರ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿಲ್ಲ. ಹೈಕೋರ್ಟ್ ಇದನ್ನು ಸಂಪೂರ್ಣ ತಿರಸ್ಕಾರ ಮಾಡಿದೆ. 17 ಎ ಪ್ರಕಾರ ಪ್ರಾಸಿಕ್ಯೂಷನ್ ಗೆ ಹೈಕೋರ್ಟ್ ಅನುಮತಿ ನೀಡಿಲ್ಲ. ಪ್ರಾಥಮಿಕ ತನಿಖೆಗೆ ಮಾತ್ರ ಹೈಕೋರ್ಟ್ ಅನುಮತಿ ನೀಡಿದೆ.
ಬಿಜೆಪಿ ಜೆಡಿಎಸ್ ನಾಯಕರ ಒಳಸಂಚಿಗೆ ನಾನು ಹೆದರುವುದಿಲ್ಲ. ರಾಜಭವನ ದುರ್ಬಳಕೆಗೆ ನಾವು ಹೆದರಲ್ಲ. ರಾಜ್ಯದ ಜನರ ಆಶೀರ್ವಾದ ನಮ್ಮ ಮೇಲೆ ಇದೆ.. ಬಿಜೆಪಿ ಜೆಡಿಎಸ್ ನ ಒಳಸಂಚು, ರಾಜ್ಯಪಾಲರ ದುರುಪಯೋಗಕ್ಕೆ ಹೆದರಲ್ಲ. ಕರ್ನಾಟಕದ ಜನ ನಮ್ಮ ಪಕ್ಷ ಹಾಗೂ ನನ್ನ ಪರವಾಗಿ ನಮ್ಮ ಎಲ್ಲಾ ಸಚಿವರು, ಡಿಸಿಎಂ, ಶಾಸಕರು ನನ್ನ ಪರವಾಗಿ ಇದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಕೂಡ ನನ್ನ ಪರವಾಗಿ ಇದ್ದು, ಕಾನೂನು ಹೋರಾಟದ ಕುರಿತು ಸಲಹೆ ನೀಡಿದೆ ಎಂದು ತಿಳಿಸಿದರು.
ನರೇಂದ್ರ ಮೋದಿ ನೇತೃತ್ವ ಸರ್ಕಾರ ಇಡಿ ದೇಶದಲ್ಲಿ ಸೇಡಿನ ರಾಜಕೀಯ ಮಾಡುತ್ತಿದೆ. ದೇಶದಲ್ಲಿರುವ ವಿಪಕ್ಷಗಳ ಸರ್ಕಾರಗಳ ಮೇಲೆ ಸೇಡಿನ ರಾಜಕೀಯ ಮಾಡುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದಾರೆ. ಯಾವಾಗಲೂ ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದವರು. ಹಣಬಲದಿಂದ ಅವರು ಅಧಿಕಾರಕ್ಕೆ ಬಂದಿದ್ದಾರೆ.
ನಮ್ಮ ಶಾಸಕರ ಖರೀದಿಗೆ ಬಿಜೆಪಿಯವರು ಪ್ರಯತ್ನಿಸಿದ್ದರು ನಮ್ಮ ಶಾಸಕರು ದುಡ್ಡಿನ ಹಿಂದೆ ಬಿದ್ದಿಲ್ಲ ಹೇಗಾದರೂ ಮಾಡಿ ಸರ್ಕಾರಕ್ಕೆ ಕಪ್ಪು ಮಸಿ ಬಳಿಯಲು ಯತ್ನಿಸಿದ್ದಾರೆ ಆಪರೇಷನ್ ಕಮಲದ ಮೂಲಕವೇ ಅಧಿಕಾರಕ್ಕೆ ಬಂದಿದ್ದಾರೆ.ನಾವು 136 ಸ್ಥಾನ ಗೆದ್ದರು ಆಪರೇಷನ್ ಕಮಲಕ್ಕೆ ಪ್ರಯತ್ನಿಸಿದ್ದಾರೆ ದುಡ್ಡು ಕೊಟ್ಟು ಶಾಸಕರನ್ನು ಸೆಳೆಯುಕ್ಕೆ ಪ್ರಯತ್ನ ಮಾಡಿದ್ದರು ಆದರೆ ನಮ್ಮ ಶಾಸಕರು ಬಿಜೆಪಿಯವರ ಆಮಿಷಕ್ಕೆ ಒಳಗಾಗಲಿಲ್ಲ .ಅಲ್ಲದೆ ನಮ್ಮ ಗ್ಯಾರಂಟಿ ಯೋಜನೆಯನ್ನು ವಿರೋಧಿಸುತ್ತಿದ್ದಾರೆ.
ಬಿಜೆಪಿಯವರು ಇಡೀ ದೇಶದಲ್ಲಿ ಮಾಡಿದಂತೆ ಕರ್ನಾಟಕದಲ್ಲೂ ಕೂಡ ಕಾಂಗ್ರೆಸ್ ಸರ್ಕಾರವನ್ನು ಅಲುಗಾಡಿಸಬೇಕು, ಕಪ್ಪು ಮಸಿ ಬಳಿಯಬೇಕು, ನಮ್ಮ ಸರ್ಕಾರಕ್ಕೆ ಕಪ್ಪುಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಆಪರೇಷನ್ ಮಾಡಕ್ಕೆ ಆಗಲಿಲ್ಲ. ಅನ್ನಭಾಗ್ಯ ಗ್ರಹಲಕ್ಷ್ಮಿ ಯುವ ನಿಧಿ ಎಲ್ಲವನ್ನು ವಿರೋಧ ಮಾಡಿದರು.ಅವರು ಸಾಮಾಜಿಕ ನ್ಯಾಯ ಬಡವರ ವಿರೋಧಿಗಳು. ಸರ್ಕಾರಕ್ಕೆ ಕಪ್ಪುಮಸಿ ಬಳಿಯುವುದು ಅವರ ದುರಾಲೋಚನೆ ಎಂದು ವಾಗ್ದಾಳಿ ನಡೆಸಿದರು.