ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ನಂದಿನಿ ತುಪ್ಪದ ಬೆಲೆಯಲ್ಲಿ ಒಂದು ತಿಂಗಳಲ್ಲಿ ಬರೋಬ್ಬರಿ 120 ರೂ. ಏರಿಕೆಯಾಗಿದೆ. ಒಂದು ಲೀಟರ್ ನಂದಿನಿ ತುಪ್ಪದ ದರ ಸುಮಾರು ₹ 450 ಇತ್ತು ಈಗ ಪ್ರತಿ ಲೀಟರ್ಗೆ ₹ 570ಗೆ ಹೆಚ್ಚಳ ಮಾಡಲಾಗಿದೆ.
ಇನ್ನೂ ಕರ್ನಾಟಕ ಹಾಲು ಒಕ್ಕೂಟವು ತುಪ್ಪದ ಬೆಲೆಯನ್ನು ಹೆಚ್ಚಿಸಿದೆ. ಒಂದು ಲೀಟರ್ ತುಪ್ಪದ ಬೆಲೆಯು 570 ಗೆ ಏರಿಕೆಯಾಗಿದೆ. ಕಳೆದ ಸುಮಾರು ಒಂದು ತಿಂಗಳಿನಿಂದ ತುಪ್ಪದ ಬೆಲೆಯನ್ನು ನಂದಿನಿ ನಿರಂತರವಾಗಿ ಹೆಚ್ಚಿಸುತ್ತಿದೆ. ಆಗಸ್ಟ್ ತಿಂಗಳಲ್ಲಿ ಒಂದು ಲೀಟರ್ ನಂದಿನಿ ತುಪ್ಪದ ದರ ಸುಮಾರು 450 ರೂ. ಇತ್ತು. ಬಳಿಕ ಸೆಪ್ಟೆಂಬರ್ 10ರ ವೇಳೆಗೆ ಈ ದರ 518.18 ರೂ. ಗೆ ಏರಿದೆ. ಆದ್ರೆ ಇದೀಗ ಹೊಸ ಪರಿಷ್ಕರಣೆಯಂತೆ ಪ್ರತಿ ಲೀಟರ್ಗೆ 570 ರೂ. ಮಾಡಲಾಗಿದೆ.
ಕರ್ನಾಟಕ ಹಾಲು ಒಕ್ಕೂಟವು ಆಗಸ್ಟ್ ನಿಂದ ಸೆಪ್ಟೆಂಬರ್ 10 ಒಳಗೆ ಹಂತಹಂತವಾಗಿ ತುಪ್ಪದ ಬೆಲೆಯನ್ನು ಏರಿಕೆ ಮಾಡುತ್ತಿದ್ದು, ಒಂದು ತಿಂಗಳಲ್ಲಿ ಸುಮಾರು 100 ರೂ.ನಷ್ಟು ಹೆಚ್ಚಳವಾಗಿದೆ.