ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮಳೆಯ ಅಬ್ಬರದಿಂದ ನಾನಾ ಅವಾಂತರ ಸೃಷ್ಟಿಯಾಗಿದೆ. ಮಳೆಗೆ ನಂದಿಗಿರಿಧಾಮದಲ್ಲಿ ಮತ್ತೆ ಗುಡ್ಡ ಕುಸಿತಗೊಂಡಿದೆ. ಹೀಗಾಗಿ ಪ್ರವಾಸಿಗರಿಗೆ ಆತಂಕ ಮನೆ ಮಾಡಿದೆ. ಮಿರ್ಜಾ ಸರ್ಕಲ್ ಮುಂಭಾಗದ ತಿರುವಿನಲ್ಲಿ ಗುಡ್ಡ ಕುಸಿತಗೊಂಡಿದೆ.
HEALTH TIPS: ರಕ್ತದಲ್ಲಿ ಗ್ಲುಕೋಸ್ ಕಡಿಮೆಯಾಗುವುದನ್ನು ತಪ್ಪಿಸಲು ಈ ಕ್ರಮವನ್ನು ಅನುಸರಿಸಿ
ರಸ್ತೆಗೆ ಅಡ್ಡಲಾಗಿ ಬೃಹತ್ ಬಂಡೆಯೊಂದು ಬಿದ್ದಿದೆ. ಇದರಿಂದ ರಸ್ತೆಯ ಮುಕ್ಕಾಲು ಭಾಗ ಮಣ್ಣು, ಬಂಡೆಗಳು ಆವರಿಸಿದೆ. ಹೀಗಾಗಿ ವಾಹನ ಸಂಚಾರಕ್ಕೆ ತೊಂದರೆ ಆಗಿದೆ.
ಇನ್ನೂ ರಾಜ್ಯದಲ್ಲಿ ಮೂರು ದಿನ ಮಳೆಯ ಕಾಟ ಜನರಿಗೆ ತಪ್ಪಿದ್ದಲ್ಲ. ಪ್ರತಿನಿತ್ಯ ಬೆಳಗ್ಗೆ ತಣ್ಣಿದ್ದ ಮಳೆರಾಯ ದೀಢಿರ್ ನೇ ಸಂಜೆ ಒಂದೇ ಸಮಾನೆ ಬರುತ್ತದೆ. ಹೀಗಾಗಿ ಆಫೀಸ್ ನಿಂದ ಬರುವವರಿಗೆ ತೊಂದರೆ ಆಗುತ್ತಿದೆ. ಮಳೆಯಿಂದ ಕೆರೆ, ಹಳ್ಳವೆಲ್ಲ ತುಂಬಿ ಉಕ್ಕಿದ್ದು, ರಸ್ತೆಗಳೆಲ್ಲ ಜಲಾವೃತಗೊಂಡಿದೆ.