ಚಿಕ್ಕಬಳ್ಳಾಪುರ : ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಜಿಲ್ಲಾಡಳಿತ ಗುಡ್ ನ್ಯೂಸ್ ನೀಡಿದ್ದು, ಸನ್ ರೈಸ್ ನೋಡಲು ಪ್ರವಾಸಿಗರ ಭೇಟಿ ಸಮಯ ಬದಲಾವಣೆ ಮಾಡಲಾಗಿದೆ.
ಹೌದು, ಇನ್ಮುಂದೆ ಪ್ರವಾಸಿಗರು ನಂದಿ ಬೆಟ್ಟಕ್ಕೆ ಬೆಳಗ್ಗೆ 5:30 ಕ್ಕೆ ಪ್ರವೇಶ ಪಡೆಯಹುದು. ನಂದಿಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ 5:30 ಕ್ಕೆ ಪ್ರವೇಶ ನೀಡಲು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಈ ಮೊದಲು ನಂದಿ ಬೆಟ್ಟಕ್ಕೆ ಬೆಳಗ್ಗೆ 6 ಗಂಟೆಯಿಂದ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು, ಇದರಿಂದ ಪ್ರವಾಸಿಗರಿಗೆ ಸನ್ ರೈಸ್ ನೋಡಲು ಆಗುತ್ತಿರಲಿಲ್ಲ, ಇದೀಗ ಜಿಲ್ಲಾಡಳಿತ ಹೊಸ ಆದೇಶ ಹೊರಡಿಸುವ ಮೂಲಕ ಪ್ರವಾಸಿಗರಿಗೆ ಗುಡ್ ನ್ಯೂಸ್ ನೀಡಿದೆ.
ನಂದಿ ಬೆಟ್ಟ ಅಥವಾ ನಂದಿ ದುರ್ಗ ಒಂದು ಪುರಾತನ ಕಾಲದ ಕೋಟೆ, ಇದು ಭಾರತದ ದಕ್ಷಿಣಭಾಗದಲ್ಲಿರುವ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇರುವ ಗಿರಿಧಾಮ. ಚಿಕ್ಕಬಳ್ಳಾಪುರ ಪಟ್ಟಣದಿಂದ 10 ಕಿ.ಮಿ ದೂರದಲ್ಲಿ ಹಾಗು ಬೆಂಗಳೂರು ನಗರದಿಂದ ಸುಮಾರು 45 ಕಿ.ಮಿ ದೂರದಲ್ಲಿದೆ. ಇದು ಭಾರತದ ಎರಡನೆಯ ಅತ್ಯಂತ ದೊಡ್ಡ ಬೆಟ್ಟ. ಹೊಸದಾಗಿ ನಿರ್ಮಾಣಗೊಂಡಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದೆ. ಜೊತೆಗೆ, ನಂದಿಬೆಟ್ಟವು ದೇವನಹಳ್ಳಿ ನಗರದ ಹತ್ತಿರದ ರಾಷ್ಟ್ರೀಯ ಹೆದ್ದಾರಿ (ಎನ್ ಹೆಚ್-೭)ಯಿಂದ 20 ಕಿ.ಮಿ ದೂರದಲ್ಲಿದೆನಂದಿ ಬೆಟ್ಟದ ಹೆಸರಿನ ಮೂಲದ ಬಗ್ಗೆ ಹಲವಾರು ಕಥೆಗಳಿವೆ. ಚೋಳರ ಕಾಲದಲ್ಲಿ, ನಂದಿ ಬೆಟ್ಟವನ್ನು ಆನಂದ ಗಿರಿ ಎಂದು ಕರೆಯಲಾಗುತ್ತಿತ್ತು, ಅದರ ಅರ್ಥ ಸಂತೋಷದಿಂದ ಕೂಡಿದ ಬೆಟ್ಟ ಎಂದಾಗಿತ್ತು. ಮತ್ತೊಂದು ಶಾಸನದ ಪ್ರಕಾರ ಪುರಾತನ ಕಾಲದ ಸುಮಾರು 1000 ವರ್ಷಗಳ ಹಿಂದಿನ ನಂದಿ ದೇವಾಲಯ ಬೆಟ್ಟದ ಮೇಲೆ ಇರುವುದರಿಂದ ಬೆಟ್ಟಕ್ಕೆ ನಂದಿ ಬೆಟ್ಟ ಎಂಬ ಹೆಸರು ಬಂದಿದೆ.