ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣದ ಟಿಕೆಟ್ ಅದರ ಹೆಚ್ಚಳ ಮಾಡಿ ಬಿಎಮ್ಆರ್‌ಸಿಎಲ್ ಆದೇಶ ಹೊರಡಿಸಿದೆ. ಈ ವಿಚಾರವಾಗಿ ಸರಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯಿಸಿದ್ದು, ನಾವು ಬಸ್ ಟಿಕೆಟ್ ದರ ಹೆಚ್ಚಳ ಮಾಡಿದ್ದಕ್ಕೆ ಗುಲಾಬಿ ಹೂ ಕೊಟ್ಟು ಕ್ಷಮೆ ಕೇಳಿದ ಬಿಜೆಪಿ ನಾಯಕರು, ಈಗ ಮೋದಿ ಪರವಾಗಿ ಗುಲಾಬಿ ಹೂವು ಕ್ಷಮೆ ಕೇಳಲ್ವಾ? ಎಂದು ವ್ಯಂಗ್ಯವಾಡಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೆಟ್ರೋ ಪ್ರಯಾಣದ ದರ ಏರಿಕೆಗೆ ಕೇಂದ್ರ ಸರ್ಕಾರವೇ ಹೊಣೆಯಾಗಿದೆ. ತಾತ್ಕಾಲಿಕವಾಗಿ ಇದರ ಏರಿಕೆ ನಿಲ್ಲಿಸಿದರೆ ಅದು ಕೇಂದ್ರ ಸರ್ಕಾರದ್ದು. ಮೋದಿ ಪರವಾಗಿ ಬಿಜೆಪಿಗರು ಮೆಟ್ರೋ ನಿಲ್ದಾಣದಲ್ಲಿ ಕ್ಷಮೆ ಕೇಳಲಿ. ಬೇಕಿದ್ದರೆ ನಾವೇ ಬಿಜೆಪಿ ಗಳಿಗೆ ಗುಲಾಬಿ ಖರೀದಿ ಮಾಡಿಕೊಡುತ್ತೇವೆ. ಬಸ್ ಪ್ರಯಾಣದರ ಏರಿಸಿದಾಗ ನಮ್ಮ ವಿರುದ್ಧ ಪ್ರತಿಭಟನೆ ಮಾಡಿದರು. ಈಗ ಯಾಕೆ ಕೇವಲ ಮನವಿ ಕೊಡ್ತೀರಾ? ಮೋದಿ ಪರವಾಗಿ ಗುಲಾಬಿ ಕೊಟ್ಟು ಕ್ಷಮೆ ಕೇಳಲ್ವಾ? ಎಂದು ಬೆಂಗಳೂರಿನಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ವ್ಯಂಗ್ಯವಾಡಿದರು.
ಕಳೆದ ತಿಂಗಳು ರಾಜ್ಯ ಸರ್ಕಾರ ಕೆಎಸ್ಆರ್ಟಿಸಿ ಪ್ರಯಾಣದ ಟಿಕೆಟ್ ದರದಲ್ಲಿ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಈ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರೊಂದಿಗೆ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿದ್ದ ಪ್ರಯಾಣಿಕರಿಗೆ ಗುಲಾಬಿ ಹೂ ನೀಡಿ, ರಾಜ್ಯ ಸರ್ಕಾರದ ಪರ ನಾವು ಕ್ಷಮೆ ಕೇಳುತ್ತೇವೆ ಎಂದು ದೊಡ್ಡ ಹೈಡ್ರಾಮಾ ಮಾಡಿದರು. ಇದೇ ವಿಚಾರವಾಗಿ ಇದೀಗ ಪ್ರಿಯಾಂಕ್ ಖರ್ಗೆ, ಕೇಂದ್ರ ಮೆಟ್ರೋ ದರ ಏರಿಕೆ ಮಾಡಿದಕ್ಕೆ ಮೋದಿ ಪರವಾಗಿ ಮೆಟ್ರೋ ನಿಲ್ದಾಣಕ್ಕೆ ತೆರಳಿ ಪ್ರಯಾಣಿಕರಿಗೆ ಗುಲಾಬಿ ಹೂ ಕೊಟ್ಟು ಕ್ಷಮೆ ಕೇಳಲ್ವಾ? ಎಂದು ಕುಟುಕಿದ್ದಾರೆ.