ಹುಬ್ಬಳ್ಳಿ: ರಾಜಾದ್ಯಂತ ‘ನಮ್ಮ ಕ್ಲಿನಿಕ್’ ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಹುಬ್ಬಳ್ಳಿಯಲ್ಲಿ ಚಾಲನೆ ನೀಡಿದರು. ಜನರಿಗೆ ಹಲವು ಉಚಿತ ಸೇವೆ ನೀಡುವ ನಿಟ್ಟಿನಲ್ಲಿ ನಮ್ಮ ಕ್ಲಿನಿಕ್ ಆರಂಭವಾಗಿದೆ.
ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಇದರ ಸೇವೆಯನ್ನು ಎಲ್ಲರ ಪಡೆದುಕೊಳ್ಳಬೇಕು, ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಈ ನಿಟ್ಟಿನಲ್ಲಿ ನಾವು ಜನರ ಬೆಂಬಲಕ್ಕೆ ಇದ್ದೇವೆ ಅಂಥ ತಿಳಿಸಿದರು. ಇದೇ ವೇಳೆ ಅವರು ರಾಜ್ಯದ ಎಲ್ಲರ ಆರೋಗ್ಯ ಕಾಪಾಡಲಾಗುವುದು ಎಂದು ಹೇಳಿದರು.
ನಮ್ಮ ಕ್ಲಿನಿಕ್ ನಲ್ಲಿ ಏನೆಲ್ಲಾ ಸೇವೆ ಲಭ್ಯ
1) ಗರ್ಭಿಣಿ ಆರೈಕೆ
2) ಮಕ್ಕಳ ಸೇವೆ
3) ಸಾಂಕ್ರಾಮಿಕ ರೋಗಗಳ ನಿರ್ವಹಣೆ
4) ಕಣ್ಣಿನ ತಪಾಸಣೆ
5) ಮೂಗು, ಗಂಟಲು ENT ಸೇವೆಗಳು
6) ಮಾನಸಿಕ ಆರೋಗ್ಯ ಸ್ಕ್ರೀನಿಂಗ್ ಸೇ
7) ಶಿಶುವಿನ ಆರೈಕೆ
8) ಕುಟುಂಬ ಕಲ್ಯಾಣ ಸೇವೆ
9)ವೃದ್ಧಾಪ್ಯ ಆರೈಕೆ
10) ಮಧುಮೇಹ, ರಕ್ತದೊತ್ತಡ ಚೆಕ್ ಅಪ್
11)ಶಿಶುವಿನ ಸೇವೆ
12)ಸಂಪೂರ್ಣ ಒಪಿಡಿ ಸೇವೆ
ಇದೇ ವೇಳೆ ಮಾತನಾಡಿದ ಆರೋಗ್ಯ ಸಚಿವ ಆರ್.ಸುಧಾಕರ್ ಅವರು ಮಾತನಾಡಿ ಒಂದು ದೇಶ ಒಂದು ರೇಶನ್ ರೀತಿಯಲ್ಲಿ ನಾವು ಈ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಹಿಂದೆ ಯಾರು ಮಾಡದ ಯೋಜನೆಗಳನ್ನು ಜನರ ಸಲುವಾಗಿ ಮಾಡುತ್ತಿದ್ದೇವೆ ಅಂತ ಹೇಳಿದರು. ಆರೋಗ್ಯವೇ ಮಹಾಭಾಗ್ಯವಾಗಿದ್ದು, ಆರೋಗ್ಯದಲ್ಲಿ ನಾವು ಚೆನ್ನಾಗಿ ಇರಬೇಕು, ಇದು ನಮ್ಮ ರಾಜ್ಯಕ್ಕೆ ಒಳ್ಳೆಯದು ಅಂತ ತಿಳಿಸಿದರು. ಇವತ್ತು ಪ್ರಾಥಮಿಕ ಚಿಕಿತ್ಸೆ ಕ್ರಮಗಳು, ಸಿಗಲಿದೆ ಅಂತ ತಿಳಿಸಿದರು. ಜನಸಂಖ್ಯೆಗೆ ಅನುಗುಣವಾಗಿ ಇರಲಿಲ್ಲ. ಇದನ್ನು ನಾವು ಮನಗಂಡು, ಇದಕ್ಕೆ ಕಾಯಕಲ್ಪ ಕೊಟ್ಟು 430 ಕೇಂದ್ರಗಳನ್ನು ಮೊದಲ ಹಂತದಲ್ಲಿ ತನ್ನ ಕೆಲಸವನ್ನು ಮಾಡಲಿದ್ದಾರೆ ಅಂತ ತಿಳಿಸಿದರು. ನಮ್ಮ ಕ್ಲಿನಿಕ್ ನಲ್ಲಿ ವೈದ್ಯರು ಸೇರಿದಂತೆ ಸಂಬಂಧಪಟ್ಟ ನುರಿತ ತಜ್ಞನರು ಲಭ್ಯವಿರುತ್ತಾರೆ ಅಂತ ತಿಳಿಸಿದರು. ಈ ಸೇವೆಯು ಉಚಿತವಾಗಿದ್ದು, ಇಲ್ಲಿ ಮುವಕ್ಕಿಂಥ ಹೆಚ್ಚಿನ ವಯಸ್ಕರು ಸಂಪೂರ್ಣವಾದ ತಪಾಸಣೆಯನ್ನು ನಡೆಸಿ ಅಂತ ಮನವಿ ಮಾಡಿಕೊಂಡರು. ಇದರಿಂದ ಅವಧಿಗೂ ಮುನ್ನವೇ ನಾವು ಆಪಾಯಿಂದ ಪಾರಾಗಬಹುದು ಅಂತ ತಿಳಿಸಿದರು.
ಆರೋಗ್ಯ ಕ್ಷೇತ್ರಕ್ಕೆ ಮುಂದಿನ ಬಜೆಟ್ ನಲ್ಲಿ 10 ಸಾವಿರ ಕೋಟಿ ಅನುದಾನ
ಆರೋಗ್ಯ ಕ್ಷೇತ್ರಕ್ಕೆ ಮುಂದಿನ ಬಜೆಟ್ ನಲ್ಲಿ 10 ಸಾವಿರ ಕೋಟಿ ಅನುದಾನ ಮೀಸಲು ಇಡಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಿಸಿದರು.
ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ ಆರೋಗ್ಯ ಕ್ಷೇತ್ರಕ್ಕೆ ಮುಂದಿನ ಬಜೆಟ್ ನಲ್ಲಿ 10 ಸಾವಿರ ಕೋಟಿ ಅನುದಾನ ಮೀಸಲು ಇಡಲಾಗುತ್ತದೆ. ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಹೆಚ್ಚಿನ ಮಹತ್ವ ನೀಡಲಾಗುತ್ತದೆ. 60 ವರ್ಷ ಮೇಲ್ಪಟ್ಟವರಿಗೆ ಉಚಿತ ಕಣ್ಣಿನ ಚಿಕಿತ್ಸೆ ನೀಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ನಮ್ಮ್ ಕ್ಲಿನಿಕ್ ಗಳನ್ನಮೇಲ್ದರ್ಜೆಗೇರಿಸಲು ಅನುದಾನ
ನಮ್ಮ್ ಕ್ಲಿನಿಕ್ ಗಳನ್ನಮೇಲ್ದರ್ಜೆಗೇರಿಸಲು ಮುಂದಿನ ಬಜೆಟ್ ನಲ್ಲಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು., ಹಿಂದೆ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಡಿಸ್ಪೆನ್ಸರಿಗಳಿದ್ದವು. ವೈದ್ಯರು ನೆಗಡಿ, ಜ್ವರ ಇತ್ಯಾದಿ ಸಣ್ಣಪುಟ್ಟ ಪರೀಕ್ಷೆ ಮಾಡಿ ಚಿಕಿತ್ಸೆ ನೀಡುತ್ತಿದ್ದರು. ಬಡವರಿಗೆ ಪ್ರಾಥಮಿಕವಾಗಿ ಚಿಕಿತ್ಸೆ ನೀಡುವ ದೃಷ್ಟಿಯಿಂದ ನಮ್ಮ ಕ್ಲಿನಿಕ್ ಸ್ಥಾಪಿಸಲಾಗುತ್ತಿದೆ. 437 ಇಡೀ ರಾಜ್ಯ ದಲ್ಲಿ ಸ್ಥಾಪನೆಯಾಗುತ್ತಿದೆ. ಪ್ರಥಮ ಹಂತದಲ್ಲಿ ನೂರು ಕ್ಲಿನಿಕ್ ಗಳು ಪ್ರಾರಂಭವಾಗುತ್ತದೆ. ನಮ್ಮ ಕ್ಲಿನಿಕ್ ಗಳ ಕಾರ್ಯವೈಖರಿ ನೋಡಿಕೊಂಡು ತಪಾಸಣೆ ಮಾಡಿ ಔಷಧ ನೀಡುವುದಲ್ಲದೆ, ರಕ್ತ ಪರೀಕ್ಷೆ ಮುಂತಾದ ಪೂರ್ವಭಾವಿ ಪರೀಕ್ಷೆಗಳನ್ನು ಕೈಗೊಳ್ಳಲು ವ್ಯವಸ್ಥೆ ಕಲ್ಪಿಸಲಾಗುವುದು. ಟೆಲಿ ಮೆಡಿಸಿನ್ ವ್ಯವಸ್ಥೆಯನ್ನೂ ಇದಕ್ಕೇ ಜೋಡಿಸಲಾಗುವುದು ಎಂದರು.