ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಆರೋಪ ಹೊರಿಸಿದ ಹಿನ್ನೆಲೆಯಲ್ಲಿ ಪ್ರಚೋದನಾಕಾರಿ ಹೇಳಿಕೆ ಕೊಟ್ಟು ಸಮಾಜ ಒಡೆಯಲು ಯತ್ನಿಸುತ್ತಿರುವ ಬಿಜೆಪಿ ನಾಯಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಕಮೀಷನರ್ ಕಚೇರಿಯಲ್ಲಿ ದೂರು ನೀಡಿದ್ದಾರೆ.
ಜಾಗತಿಕವಾಗಿ, 2023 ರಲ್ಲಿ ಕಾರ್ಯನಿರ್ವಹಿಸುವ ಪ್ರತಿ 1.26 ಮಿಲಿಯನ್ ವಿಮಾನಗಳಿಗೆ ಒಂದು ಅಪಘಾತ ವರದಿಯಾಗಿದೆ: IATA
ನಾವೆಲ್ಲಾ ಭಾರತೀಯರು, ಕನ್ನಡಿಗರು. ಒಂದು ಸಮಾಜವನ್ನು ಟಾರ್ಗೆಟ್ ಮಾಡಿ ಅವನನ್ನು ಜೀವನ ಮಾಡಲು ಬಿಡುತ್ತಿಲ್ಲ. ಒಬ್ಬ ಸಂಸದ ಗೆದ್ದಾಗ ಜಿಂದಾಬಾದ್ ಹಾಕೋಕು ಬಿಟ್ಟಿಲ್ಲ. ಪ್ರಚೋದನಕಾರಿ ಹೇಳಿಕೆ ಕೊಟ್ಟವರ ವಿರುದ್ಧ ಎಫ್ಐಆರ್ ದಾಖಲಿಸಲು ಮನವಿ ಮಾಡಿದ್ದೇವೆ. ಮೂರು ಸೀಟ್ ಗೆದ್ದಿರುವುದನ್ನು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಉರ್ಕೊಂಡು ಈ ರೀತಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡೋಕೆ ಆಗಲ್ಲ. ಸಿದ್ದರಾಮಯ್ಯ, ಡಿಕೆಶಿ ಇರೋವರೆಗೂ ನಮ್ಮ ಶಾಸಕರನ್ನು ಖರೀದಿ ಮಾಡಲು ಆಗಲ್ಲ ಎಂದರು.
ಆರ್ ಅಶೋಕ್, ಅಶ್ವಥ್ ನಾರಾಯಣ್, ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ದೂರು ಕೊಡಲು ಬಂದಿದ್ದೇವೆ. ನಾಸೀರ್ ಹುಸೇನ್ ಜಿಂದಾಬಾದ್ ಎಂಬುದನ್ನು ತಿರುಚಿ ಹೇಳಲಾಗುತ್ತಿದೆ. ಅದನ್ನು ಪಾಕಿಸ್ತಾನ ಜಿಂದಾಬಾದ್ ಎಂದು ತಿರುಚಿ ಹೇಳಿ ಸಮಾಜ ಒಡೆದುಹಾಕುವ ಹೇಳಿಕೆ ನೀಡಿದ್ದಾರೆ. ಕಮ್ಯೂನಲ್ ವಿಚಾರದ ಬಗ್ಗೆ ದಂಗೆ ಹಚ್ಚಲು ಈ ರೀತಿ ಮಾಡಲಾಗುತ್ತಿದೆ. ರಾಜಕೀಯ ಮಾಡಿ ಈ ರೀತಿ ಹಬ್ಬಿಸಲಾಗುತ್ತಿದೆ. ಒಂದೇ ಒಂದು ಸಮಾಜವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಇಂದು ‘ಕನ್ನಡ ನಾಮಫಲಕ’ ಹಾಕಲು ‘BBMP’ ಡೆಡ್ ಲೈನ್: ಇಲ್ಲದಿದ್ದರೇ ಮಳಿಗೆ ‘ಲೈಸೆನ್ಸ್ ರದ್ದು’