ಬೆಂಗಳೂರು: ಪ್ರೇಮಿಸಲು ನಿರಾಕರಿಸಿದಳು ಎನ್ನುವ ಕಾರಣಕ್ಕೆ ಯುವತಿಯೊಬ್ಬಳ ಮೇಲೆ ಆ್ಯಸಿಡ್ ಎರಚಿ ಜೈಲುಪಾಲಾಗಿರುವ ಆರೋಪಿ ನಾಗೇಶ್ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಹೌದು, ಮಾಡಿದ್ದುಣ್ಣೋ ಮಾರಾಯ ಎಂಬಂತೆ ತಾನು ಮಾಡಿದ ತಪ್ಪಿಗೆ ಈಗ ಜೈಲು ಶಿಕ್ಷೆ ಅನುಭವಿಸುತ್ತಿರುವ ನಾಗೇಶ್ ಗ್ಯಾಂಗ್ರಿನ್ ರೋಗದಿಂದ ಬಳಲುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಅನ್ನಪೂರ್ಣೇಶ್ವರಿ ನಗರದ ಡಿ ಗ್ರೂಪ್ ಲೇಔಟ್ ನಿವಾಸಿಯಾಗಿದ್ದಂತ ಆರೋಪಿ ನಾಗೇಶ್, ಏಪ್ರಿಲ್ 28, 2022ರಂದು ಪ್ರೀತಿಸಲು ನಿರಾಕರಿಸಿದ ಕಾಮಾಕ್ಷಿಪಾಳ್ಯದ ಯುವತಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದನು. ಈ ಸಂಬಂಧ ಆತನನ್ನು ಅರೆಸ್ಟ್ ಮಾಡಲಾಗಿತ್ತು.
ಆದ್ರೆ, ಜೈಲು ಶಿಕ್ಷೆ ಸಾಲದೆಂಬಂತೆ ಗ್ಯಾಂಗ್ರಿನ್ ರೋಗದಿಂದ ಬಳಲುತ್ತಿದ್ದಾನೆ. ಇದ್ರಿಂದ ಆತನ ಎರಡೂ ಕಾಲುಗಳನ್ನು ತೆಗೆದುಹಾಕುವ ಸ್ಥಿತಿ ಎದುರಾಗಿದ್ದು, ಸರಿಯಾದ ಚಿಕಿತ್ಸೆ ಕೊಡಿಸುವಂತೆ ಸೂಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.