ಶಿವಮಾಗ್ಗ; ಸಾಗರದ ಮಾರಿಕಾಂಬಾ ನ್ಯಾಸ ಸಮಿತಿಯ ಚುನಾವಣೆಯ ಘೋಷಣೆಗೂ ಮುನ್ನವೇ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಫೈನಲ್ ಆಗಿದೆ. ಇಂದು ಚುನಾವಣೆಗೆ ನಾಮಪತ್ರ ಸಲ್ಲಿಸೋ ಮುನ್ನವೇ ಖಾಸಗಿ ಹೋಟೆಲ್ ನಲ್ಲಿ ನಡೆದಂತ ಸಭೆಯಲ್ಲಿ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಮಾರಿಗುಡಿ ಸಮಿತಿಗೆ ಅಧ್ಯಕ್ಷರಾಗಿ ಪವಿತ್ರ ನಾಗರಾಜ್, ಉಪಾಧ್ಯಕ್ಷರಾಗಿ ಶ್ರೀನಿವಾಸ್ ಮೇಸ್ತ್ರಿ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಡಿ ಆನಂದ್ ಆಯ್ಕೆ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬಾ ನ್ಯಾಸ ಸಮಿತಿಯ ಪದಾಧಿಕಾರಿಗಳ ಆಯ್ಕೆಯ ಸಂಬಂಧ ಹಿತರಕ್ಷಣಾ ಸಮಿತಿ ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯರು ಒಟ್ಟುಗೂಡಿ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದರು. ಈ ಸಭೆಯಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಕೆಗೂ ಮುನ್ನವೇ ಪದಾಧಿಕಾರಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.
ಹೀಗಿದೆ ಮಾರಿಗುಡಿ ಸಮಿತಿ ಪದಾಧಿಕಾರಿಗಳ ಪೈನಲ್ ಪಟ್ಟಿ
1. ಪವಿತ್ರಾ ನಾಗರಾಜ್, ಅಧ್ಯಕ್ಷರು
2. ಶ್ರೀನಿವಾಸ್ ಮೇಸ್ತ್ರಿ, ಉಪಾಧ್ಯಕ್ಷರು
3. ಎಂ.ಡಿ ಆನಂದ್, ಪ್ರಧಾನ ಕಾರ್ಯದರ್ಶಿಗಳು
4. ಪುರುಷೋತ್ತಮ್(ಪುಚ್ಚಿ) ಹಾಗೂ ವಿ.ಗುರು, ಕಾರ್ಯದರ್ಶಿಗಳು
5. ವಿ.ಶಂಕರ್(ಮಾಸ್ಟರ್ ಶಂಕರ್), ಖಜಾಂಚಿ








