ಮೈಸೂರು : ಮೈಸೂರಲ್ಲಿ ಪ್ರೀತ್ಸೆ ಪ್ರೀತ್ಸೆ ಎಂದು ಯುವಕನೊಬ್ಬ ಅಪ್ರಾಪ್ತೆ ಬಾಲಕಿಯ ಬೆನ್ನುಬಿದ್ದಿದ್ದಾನೆ. ಇದರಿಂದ ಕಿರುಕುಳದಿಂದ ಮನನೊಂದ 17 ವರ್ಷದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಂಜನಗೂಡು ಪಟ್ಟಣದಲ್ಲಿ ಆದಿತ್ಯ ವಿರುದ್ಧ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ನಂಜನಗೂಡು ಪಟ್ಟಣದಲ್ಲಿ 17 ವರ್ಷದ ಬಾಳಿಕೆ ಆತ್ಮಹತ್ಯೆಗೆ ಶರಣಾಗಿದ್ದು ಪೋಷಕರು ಆದಿತ್ಯ ಎನ್ನುವ ಯುವಕನ ವಿರುದ್ಧ ಕಿರುಕುಳ ನೀಡಿದ್ದಾನೆ ಎಂದು ಆರಂಭಿಸಿದ್ದಾರೆ. ಕಿರುಕುಳ ಕೊಡುತ್ತಿರುವ ಬಗ್ಗೆ ಬಾಲಕಿ ಪೋಷಕರಿಗೆ ಹೇಳಿದ್ದಾಳೆ. ಬಾಲಕಿಯ ತಂದೆ ಆದಿತ್ಯನಿಗೆ ಕರೆದು ಬುದ್ಧಿ ಮಾತು ಹೇಳಿದ್ದಾರೆ. ಆದರೂ ಕೂಡ ಆದಿತ್ಯ ಬಾಲಕಿಗೆ ಕಿರುಕುಳ ನೀಡುತ್ತಿದ್ದ ಇದರಿಂದ ಮನನೊಂದು ಮನೆಯಲ್ಲಿಯೇ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಂಜನಗೂಡು ಠಾಣೆಯಲ್ಲಿ ಆದಿತ್ಯನ ವಿರುದ್ಧ ಪ್ರಕರಣ ದಾಖಲಾಗಿದೆ.








