ಮೈಸೂರು: ದಸರಾ ಜಂಬೂಸವಾರಿಯಲ್ಲಿ ( Mysure Dasara ) ಪ್ರಮುಖ ಆಕರ್ಷಣೆಯಾಗಿ, ದಸರಾ ವೀಕ್ಷಕರನ್ನು ಸೆಳೆಯುತ್ತಿದ್ದಂತ ಗೋಪಾಲಸ್ವಾಮಿ ಆನೆ, ಇಂದು ನಿಧನವಾಗಿದೆ. ಈ ಮೂಲಕ ಮೈಸೂರು ದಸರಾ ಆನೆ ಗೋಪಾಲಸ್ವಾಮಿ ಇನ್ನಿಲ್ಲವಾಗಿದೆ.

BIG NEWS: ಕರಾವಳಿಯಲ್ಲಿ ಮತ್ತೆ ‘ಧರ್ಮ ದಂಗಲ್’: ಕುಕ್ಕೆಯಲ್ಲಿ ಚಂಪಾಷಷ್ಠಿಗೆ ಅನ್ಯಮತೀಯರ ವ್ಯಾಪರಕ್ಕೆ ಬ್ರೇಕ್

ಈ ಬಾರಿಯ ದಸರಾ ಮಹೋತ್ಸವದಲ್ಲಿ ಗೋಪಾಲಸ್ವಾಮಿ ಆನೆ ಭಾಗಿಯಾಗಿತ್ತು. ದಸರಾ ಬಳಿಕ ಕಾಡಾನೆ ಶಿಬಿರಕ್ಕೆ ತೆರಳಿದ್ದಂತ ಗೋಪಾಲಸ್ವಾಮಿ, ಕಾಡಾನೆಯ ಜೊತೆಗಿನ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡಿತ್ತು. ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಂತ ಗೋಪಾಲಸ್ವಾಮಿ ಆನೆ, ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.

BREAKING NEWS: ಡಿ.19ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಫಿಕ್ಸ್: ಹೀಗಿದೆ ತಾತ್ಕಾಲಿಕ ಕಾರ್ಯಕ್ರಮಗಳ ಪಟ್ಟಿ

ಅಂದಹಾಗೇ ಗೋಪಾಲಸ್ವಾಮಿ ಆನೆ ಕಾಡಾನೆಗಳನ್ನು ಪಳಗಿಸೋದರಲ್ಲಿ ಎತ್ತಿದ ಕೈ ಆಗಿತ್ತು. ವಿವಿಧ ತರಬೇತಿಯನ್ನು ಗೋಪಾಲಸ್ವಾಮಿ ಆನೆಗೆ ನೀಡಲಾಗಿತ್ತು. ಇಂತಹ ಆನೆ ಮೈಸೂರಿನ ಹುಣಸೂರಿನ ಮತ್ತಿಗೋಡ ಆನೆ ಶಿಬಿರದಲ್ಲಿತ್ತು. ಕೆಲ ದಿನಗಳ ಹಿಂದೆ ಸೆರೆ ಹಿಡಿದಿದ್ದಂತ ಅಯ್ಯಪ್ಪ ಎಂಬ ಆನೆಯ ಜೊತೆಗೆ ಕಾದಾಟದಲ್ಲಿಯೇ ತೀವ್ರವಾಗಿ ಗಾಯಗೊಂಡು, ಇಂದು ನಿಧನವಾಗಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ: ಡಿ.ಕೆ ಶಿವಕುಮಾರ್ ಸೇರಿ ನಾಲ್ವರ ವಿರುದ್ಧದ ಇಡಿ ವಿಚಾರಣೆ ಜ.18ಕ್ಕೆ ಮುಂದೂಡಿಕೆ

Share.
Exit mobile version