ನವದೆಹಲಿ: ಅಕ್ರಮ ಹಣ ವರ್ಗಾವಣೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( KPCC President DK Shivakumar ) ಸೇರಿದಂತೆ ನಾಲ್ವರ ವಿರುದ್ಧ ದಾಖಲಾಗಿದ್ದಂತ ಪ್ರಕರಣದ ವಿಚಾರಣೆಯನ್ನು, ಜನಪ್ರತಿನಿಧಿಗಳ ಇಡಿ ವಿಶೇಷ ನ್ಯಾಯಾಲಯವು ( ED Special Court ) ಜನವರಿ 18ಕ್ಕೆ ಮುಂದೂಡಿದೆ.

BREAKING NEWS: ಡಿ.19ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಫಿಕ್ಸ್: ಹೀಗಿದೆ ತಾತ್ಕಾಲಿಕ ಕಾರ್ಯಕ್ರಮಗಳ ಪಟ್ಟಿ

ಇಂದು ನವದೆಹಲಿಯಲ್ಲಿ ಚುನಾಯಿತ ಪ್ರತಿನಿಧಿಗಳ ಪ್ರಕರಣಗಳ ಇಡಿ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಕೈಗೆತ್ತಿಕೊಳ್ಳಲಾಯಿತು. ಈ ವೇಳೆ ಆರೋಪಿಗಳ ಪರ ವಕೀಲರು ಇಡಿಯಿಂದ ಆರೋಪ ಪಟ್ಟಿಯ ಪ್ರತಿಯನ್ನು ನೀಡುವಂತೆ ಕೇಳಲಾಗಿದೆ. ಕೆಲವೇ ದಿನಗಳಲ್ಲಿ ನೀಡುವುದಾಗಿ ಹೇಳಿದ್ದಾರೆ. ಆದ್ರೇ ನೀಡಿರುವಂತ ದಾಖಲೆಗಳು ಸಮರ್ಪಕವಾಗಿಲ್ಲ. ಹೀಗಾಗಿ ತಮಗೆ ವಾದ ಮಂಡಿಸಲು ಇನ್ನಷ್ಟು ದಿನ ಬೇಕು ಎಂಬುದಾಗಿ ಕೋರಿಕೊಂಡರು.

BIG NEWS: ಕರಾವಳಿಯಲ್ಲಿ ಮತ್ತೆ ‘ಧರ್ಮ ದಂಗಲ್’: ಕುಕ್ಕೆಯಲ್ಲಿ ಚಂಪಾಷಷ್ಠಿಗೆ ಅನ್ಯಮತೀಯರ ವ್ಯಾಪರಕ್ಕೆ ಬ್ರೇಕ್

ಈ ಮನವಿಯನ್ನು ಪುರಸ್ಕರಿಸಿದಂತ ನ್ಯಾಯಾಲಯದ ಮುಂದೆ ದುಬೈಗೆ ತೆರಳೋದಕ್ಕೆ ಡಿ.ಕೆ ಶಿವಕುಮಾರ್ ಗೆ ಅನುಮತಿ ನೀಡುವಂತೆಯೂ ಕೋರಲಾಯಿತು. ಆಗ ನ್ಯಾಯಾಲಯವು ಈ ಸಂಬಂಧ ಸೂಕ್ತ ದಾಖಲೆ ಸಲ್ಲಿಸುವಂತೆ ಸೂಚಿ, ಇದರ ವಿಚಾರಣೆಯನ್ನು ನವೆಂಬರ್ 26ಕ್ಕೆ ನಡೆಸೋದಾಗಿ ತಿಳಿಸಿತು.

ಕೃಷಿ ಸಾಲ ವಿತರಣೆಯಲ್ಲಿ ಡಿಸಿಸಿ ಬ್ಯಾಂಕುಗಳಿಂದ ಉತ್ತಮ ಸಾಧನೆ – ಸಚಿವ ಎಸ್.ಟಿ.ಸೋಮಶೇಖರ್ ಶ್ಲಾಘನೆ

Share.
Exit mobile version