ಬೆಂಗಳೂರು: ಕೆಲ ದಿನಗಳ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ( CM Basavaraj Bommai ) ನೇತೃತ್ವದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ, ಚಳಿಗಾಲದ ವಿಧಾನಮಂಡಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಸೋದಕ್ಕೆ ತೀರ್ಮಾನ ಕೈಗೊಳ್ಳಲಾಗಿತ್ತು. ಅದರಂತೆ ಈಗ ರಾಜ್ಯ ಸರ್ಕಾರದ ಡಿಸೆಂಬರ್ 19ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕಲಾಪ ನಡೆಸಲು ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ.

ನಾಳೆಯಿಂದ ನಂದಿನಿ ಹಾಲು, ಮೊಸರಿನ ದರ 2 ರೂ ಹೆಚ್ಚಳ: ಹೀಗಿದೆ ನೂತನ ಪರಿಷ್ಕೃತ ದರಪಟ್ಟಿ | Nandini Milk Price Hike

ಈ ಕುರಿತಂತೆ ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯದರ್ಶಿ ಕೆ.ಆರ್ ಮಹಾಲಕ್ಷ್ಮೀ ಆದೇಶ ಹೊರಡಿಸಿದ್ದು, ಡಿಸೆಂಬರ್ 19ರಿಂದ 30ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ಕಲಾಪವನ್ನು ಬೆಳಗಾವಿಯ ಸುವರ್ಣ ವಿಧಾನ ಸೌಧದ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ ನಡೆಸಲು ಕರೆ ನೀಡಲಾಗಿದೆ. ಆ ತಾತ್ಕಾಲಿಕ ಕಾರ್ಯಕ್ರಮ ಪಟ್ಟಿಯು ಈ ಕೆಳಗಿನಂತಿದೆ ಎಂದಿದ್ದಾರೆ.

ಬಿಬಿಎಂಪಿ ವೋಟರ್ ಐಡಿ ಪರಿಷ್ಕರಣೆ ಅಕ್ರಮ: ನಾಳೆ ಬೆಂಗಳೂರಿಗೆ ಉಪ ಚುನಾವಣಾ ಆಯುಕ್ತರ ಭೇಟಿ

ಹೀಗಿದೆ ಡಿ.19ರಿಂದ 30ರವರೆಗೆ ಕಾರ್ಯಕ್ರಮ ಪಟ್ಟಿ

  • ದಿನಾಂಕ 19-12-2022ರ ಸೋಮವಾರ, ಸರ್ಕಾರಿ ಕಾರ್ಯಕಲಾಪಗಳು
  • ದಿನಾಂಕ 20-12-2022ರ ಮಂಗಳವಾರ, ಸರ್ಕಾರಿ ಕಾರ್ಯಕಲಾಪಗಳು
  • ದಿನಾಂಕ 21-12-2022ರ ಗುರುವಾರ, ಸರ್ಕಾರಿ ಕಾರ್ಯಕಲಾಪಗಳು
  • ದಿನಾಂಕ 23-12-2022ರ ಶುಕ್ರವಾರ, ಖಾಸಗಿ, ಸರ್ಕಾರಿ ಕಾರ್ಯಕ್ರಮಗಳು
  • ದಿನಾಂಕ 24-12-2022ರ ಶನಿವಾರ, ಸಾರ್ವತ್ರಿಕ ರಜಾದಿನ
  • ದಿನಾಂಕ 25-12-2022ರ ಭಾನುವಾರ, ಸಾರ್ವತ್ರಿಕ ರಜಾ ದಿನ
  • ದಿನಾಂಕ 26-12-2022ರ ಸೋಮವಾರ, ಸರ್ಕಾರಿ ಕಾರ್ಯಕಲಾಪಗಳು
  • ದಿನಾಂಕ 27-12-2022ರ ಮಂಗಳವಾರ, ಸರ್ಕಾರಿ ಕಾರ್ಯಕಲಾಪಗಳು
  • ದಿನಾಂಕ 28-12-2022ರ ಬುಧವಾರ, ಸರ್ಕಾರಿ ಕಾರ್ಯಕಲಾಪಗಳು
  • ದಿನಾಂಕ 29-12-2022ರ ಗುರುವಾರ, ಸರ್ಕಾರಿ ಕಾರ್ಯಕಲಾಪಗಳು
  • ದಿನಾಂಕ 30-12-2022ರ ಶುಕ್ರವಾರ, ಖಾಸಗಿ, ಸರ್ಕಾರಿ ಕಾರ್ಯಕಲಾಪಗಳು

Share.
Exit mobile version