ಮೈಸೂರು : ಇತ್ತೀಚಿಗೆ ಈ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ದೊಡ್ಡ ದೊಡ್ಡ ಅನಾಹುತಗಳು ನಡೆಯುತ್ತಿವೆ.ಇದೀಗ ಮೈಸೂರು ನಲ್ಲೂ ಅಂತದ್ದೇ ಘಟನೆ ನಡೆದಿದ್ದು, instagram ಮೂಲಕ ಪರಿಚಯವಾಗಿದ್ದ ಯುವಕ ಹಾಗೂ ಮಹಿಳೆ ನಡುವೆ ಇದೀಗ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ.
‘ರಾಹುಲ್ ಗಾಂಧಿ ಹಿಂದೂಫೋಬಿಕ್ ಮಾತ್ರವಲ್ಲ, ಸ್ತ್ರೀದ್ವೇಷಿಯೂ ಹೌದು’: ಅಮಿತ್ ಮಾಳವೀಯ ವಾಗ್ದಾಳಿ
ಮದುವೆ ಆಗದಿದ್ದರೆ ಬಿಲ್ಡಿಂಗ್ ಮೇಲಿಂದ ಬಿದ್ದು ಸಾಯ್ತೀನಿ ಎಂದು ಮಹಿಳೆಯು ಕಟ್ಟಡದ ತುದಿಯಲ್ಲಿ ನಿಂತು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ. ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿ ಪ್ರೀತಿಸಿದ್ದ ಯುವತಿಯು, ಖಾಸಗಿ ಹೋಟೆಲ್‌ನ ಮೇಲ್ಭಾಗದಲ್ಲಿ ನಿಂತು ರಂಪಾಟ ಮಾಡಿದ್ದು, ವಿವಾಹಿತ ಮಹಿಳೆಯಿಂದ ಯುವಕನನ್ನ ಮದುವೆ ಆಗುವಂತೆ ಒತ್ತಾಯ ಮಾಡಿದ್ದಾಳೆ. ಇಲ್ಲದಿದ್ದರೆ ಬಿಲ್ಡಿಂಗ್ ಮೇಲತ್ತಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನು ಬಿಹಾರ ಮೂಲದ ನಾಸಿಂ ಬೇಗಂ(31) ಹಾಕಿದ್ದಾಳೆ. ಸದ್ಯ ನಂಜನಗೂಡು ಪಟ್ಟಣ ಪೊಲೀಸರ ವಶದಲ್ಲಿ ಮಹಿಳೆ ಇದ್ದಾಳೆ.
ಡಬ್ಲ್ಯುಪಿಎಲ್ 2024: ಪ್ರಶಸ್ತಿ ಗೆದ್ದ ಆರ್ಸಿಬಿ ಮಹಿಳಾ ತಂಡಕ್ಕೆ ಶುಭಕೋರಿದ ವಿಜಯ್ ಮಲ್ಯ!
ಕಳೆದ ಒಂದು ವರ್ಷದಿಂದ ಬಿಹಾರ ಮೂಲದ ಮಹಿಳೆ ಹಾಗೂ ಯುವಕ ಆಸಿಬೂರ್ ರೆಹಮಾನ್ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಮೂಲಕ ಪರಸ್ಪರ ಪರಿಚಯವಾಗಿದ್ದರು. ಮೂರು ತಿಂಗಳ ಹಿಂದಷ್ಟೇ ಯುವಕ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿ ಕೆಲಸವೊಂದಕ್ಕೆ ಸೇರಿಕೊಂಡಿದ್ದ ಹಾಗೂ ಗ್ರಾಮದಲ್ಲೇ ರೂಂ ಬಾಡಿಗೆ ಪಡೆದು ವಾಸವಾಗಿದ್ದ.
ಪ್ರಧಾನಿ ಮೋದಿ, ಅಮಿತ್ ಶಾ ಹೇಳಿದರೂ ನನ್ನ ಸ್ಪರ್ಧೆ ಖಚಿತ : ಕೆ.ಎಸ್ ಈಶ್ವರಪ್ಪ ಸ್ಪಷ್ಟನೆ
ಶನಿವಾರ ಬಿಹಾರದಿಂದ ನೇರವಾಗಿ ನಂಜನಗೂಡಿಗೆ ಬಂದ ಮಹಿಳೆ ಖಾಸಗಿ ಲಾಡ್ಜ್ನಲ್ಲಿ ರೂಂ ಮಾಡಿದ್ದಳು. ಅಲ್ಲಿಗೆ ಯುವಕನನ್ನು ಕರೆಸಿಕೊಂಡು ಮದುವೆ ಆಗುವಂತೆ ಒತ್ತಾಯಿಸಿದ್ದಾಳೆ. ಇಬ್ಬರಿಗೂ ವಯಸ್ಸಿನ ಅಂತರವಿದೆ ಎಂದು ಹೇಳಿ ಯುವಕ ಮದುವೆಗೆ ನಿರಾಕರಿಸಿದ್ದಾನೆ. ಇದ್ದಕ್ಕಿದ್ದಂತೆ ಲಾಡ್ಜ್ ಕಟ್ಟಡದ ಟೆರೆಸ್ ಮೇಲೆ ತೆರಳಿ ಕೆಳಗೆ ಜಿಗಿಯುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಬಗ್ಗೆ ಮಾಹಿತಿ ಅರಿತ ನಂಜನಗೂಡು ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಮಹಿಳೆಯ ಮನವೊಲಿಸಿ ವಶಕ್ಕೆ ಪಡೆದಿದ್ದಾರೆ. ಮಹಿಳೆಗೂ ನನಗೂ ಯಾವುದೇ ಸಂಬಂಧವಿಲ್ಲವೆಂದು ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ. ಈ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.