ಮೈಸೂರು : ಮೈಸೂರು ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್ ವಿದ್ಯಾಶಂಕರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಇದರ ಆಡಿಯೋ ವೈರಲ್ ಆಗಿದೆ ಎನ್ನಲಾಗಿದೆ.
ವಿವಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಕುಲಪತಿ ವಿದ್ಯಾಶಂಕರ್ ಲೈಂಗಿಕ ಕಿರುಕುಳ ನೀಡುತ್ತಿದ್ದು, ಆಕೆಯ ಜೊತೆಗೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ ಎನ್ನಲಾಗಿದೆ.
ಕುಲಪತಿ ಆಡಿಯೋ ಬಿಡುಗಡೆಗೆ ಎಂದು ಮೈಸೂರು ಪತ್ರಕರ್ತರ ಭವನಕ್ಕೆ ಆಗಮಿಸಿದ ಸಿಂಡಿಕೇಟ್ ಮಾಜಿ ಸದಸ್ಯ ಡಾ, ಮಹದೇವ್ ಹಾಗೂ ಮತ್ತಿತರರ ಮೇಲೆ ಹಲ್ಲೆಗೆ ಮುಂದಾದ ಘಟನೆ ವರದಿಯಾಗಿದೆ. ಮುಕ್ತ ವಿವಿ ರಿಜಿನಲ್ ಡೈರೆಕ್ಟರ್ ಸುಧಾಕರ್ ಹೊಸಳ್ಳಿ ಡಾ ಮಹದೇವ್ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದಾರೆ ಎನ್ನಲಾಗಿದೆ.
BIGG NEWS: ಕಾಂಗ್ರೆಸ್ ನವರಿಗೆ ನರಕ ಉಂಟಾಗಿದೆ; ಕೈ PAY CM ಅಭಿಯಾನ ವಿರುದ್ಧ ಶಿವರಾಮ್ ಹೆಬ್ಬಾರ್ ಕಿಡಿ