ಮೈಸೂರು: ಪ್ರವಾಸಿಗರಿ ಬಿಗ್ ಶಾಕ್ ಎನ್ನುವಂತೆ ಮೈಸೂರು ಆಡಳಿತ ಮಂಡಳಿಯಿಂದ ಅರಮನೆ ಪ್ರವೇಶ ಶುಲ್ಕವನ್ನು ಹೆಚ್ಚಳ ಮಾಡಿ ಆದೇಶಿಸಿದೆ.
ಈ ಸಂಬಂಧ ಮೈಸೂರಿನ ಅರಮನೆ ಆಡಳಿತ ಮಂಡಳಿಯಿಂದ ಪರಿಷ್ಕೃತ ಪ್ರವೇಶ ದರದ ಆದೇಶವನ್ನು ಮಾಡಲಾಗಿದೆ. ವಿದೇಶಿಕರ ಪ್ರವೇಶ ಶುಲ್ಕವನ್ನು 1000ಕ್ಕೆ ಏರಿಕೆ ಮಾಡಲಾಗಿದೆ. ಈ ಹಿಂದೆ 100 ಇದ್ದಂತ ಪ್ರವೇಶ ದರವನ್ನು 900ಕ್ಕೆ ಹೆಚ್ಚಿಸಲಾಗಿದೆ.
ಇನ್ನೂ ಭಾರತೀಯ ವಯಸ್ಕರಿಗೆ ಪ್ರವೇಶ ಶುಲ್ಕವನ್ನು 100 ರೂ ನಿಂದ 120 ರೂಗೆ ಏರಿಕೆ ಮಾಡಲಾಗಿದೆ. 10 ರಿಂದ 18 ವರ್ಷದೊಳಗಿನ ಮಕ್ಕಳಿಗೆ ರೂ.70, ಪ್ರವಾಸಕ್ಕೆ ಬರುವಂತ ವಿದ್ಯಾರ್ಥಿಗಳಿಗೆ ತಲಾ ರೂ.50 ದರವನ್ನು ನಿಗದಿ ಪಡಿಸಲಾಗಿದೆ.
ಇನ್ನೂ ಅರಮನೆ ಒಳಗಿನ ಚಪ್ಪಲಿ ಸ್ಟಾಂಡ್, ಲಗೇಜ್ ಕೊಠಡಿಗೆ ವಿಧಿಸಲಾಗುತ್ತಿದ್ದಂತ ದರವನ್ನು ರದ್ದುಗೊಳಿಸಲಾಗಿದೆ. ಉಚಿತ ಸೇವೆ ನೀಡಲು ಅರಮನೆ ಆಡಳಿತ ಮಂಡಳಿ ನಿರ್ಧರಿಸಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲೊಬ್ಬ ಅಪರೂಪದ ‘ಡೊಳ್ಳು ಕಲಾವಿದ’: ಇವರ ಸಾಧನೆ ಕೇಳಿದ್ರೆ ‘ನೀವೇ ಶಾಕ್’ ಆಗ್ತೀರಿ