ಮೈಸೂರು : ನಿನ್ನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮೇದಿನಿ ಗ್ರಾಮದಲ್ಲಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರುಪಾಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭರತ್ ಹಾಗೂ ಲೆಖಿತ್ ಗಾಗಿ ಇದೀಗ ಶೋಧ ಕಾರ್ಯ ಮುಂದುವರಿದಿದೆ.
ಟಿ ನರಸೀಪುರ ತಾಲೂಕಿನ ಮೇದಿನಿ ಎಲ್ಲಿ ನಿನ್ನೆ ಈ ಒಂದು ಘಟನೆ ಸಂಭವಿಸಿತ್ತು. ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಮೇದಿನಿ ಗ್ರಾಮದಲ್ಲಿ ನೀರುಪಾಲಾಗಿರುವವರು ಕೊಳ್ಳೇಗಾಲ ಪಟ್ಟಣದ ನಿವಾಸಿಗಳು ಎಂದು ತಿಳಿದು ಬಂದಿದೆ. ಮೇದಿನಿ ಗ್ರಾಮದ ರಾಮಕಟ್ಟೆ ಬಳಿ ಐವರು ಯುವಕರು ಈಜಲು ಬಂದಿದ್ದರು.
ಈ ವೇಳೆ ನೀರಿನ ಸೆಳೆತಕ್ಕೆ ಭರತ್ ಮತ್ತು ಲಿಖಿತ್ ಕೊಚ್ಚಿ ಹೋಗಿದ್ದರು. ಉಳಿದ ಮೂವರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭರತ್ ಮತ್ತು ಲಿಖಿತ್ ಗಾಗಿ ಅಗ್ನಿಶಾಮಕ ಸಿಬ್ಬಂದಿಯಿಂದ ಹುಡುಕಾಟ ಮುಂದುವರೆದಿದೆ. ಘಟನೆ ಸಂಭಂದ ತಲಕಾಡು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.