ಮೈಸೂರು : ಕಳೆದ ಮಾರ್ಚ್ 12 ರಂದು ಮೈಸೂರು ತಾಲೂಕಿನ ಅನಗಹಳ್ಳಿಯಲ್ಲಿ ತೋಟದ ಮನೆಯಲ್ಲಿ ಪ್ರಿಯತಯ ಜೊತೆಗೆ ಇದ್ದಾಗಲೇ ಸೂರ್ಯ ಎನ್ನುವ ವ್ಯಕ್ತಿಯ ಭೀಕರವಾದ ಕೊಲೆ ಆಗಿತ್ತು. ಈಗ ಈ ಒಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ತಾಲೂಕಿನ ಜಯಪುರ ಠಾಣೆ ಪೊಲೀಸರು ಕೇವಲ 48 ಗಂಟೆಗಳಲ್ಲಿ 8 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಹೌದು ಕೊಲೆ ನಡೆದ 48 ಗಂಟೆಯಲ್ಲಿ 8 ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೈಸೂರು ತಾಲೂಕಿನ ಜಯಪುರ ಠಾಣೆ ಪೋಲೀಸರು 8 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಎಸ್ ರಾಜು, ಕಿರಣ್ ಅಲಿಯಾಸ್ ಚಡ್ಡಿ, ಬಿ ಮನು, ಚಂದ್ರಶೇಖರ್ ಅಲಿಯಾಸ್ ಮಂಗೂ, ಸುನಿಲ್ ಕುಮಾರ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಅಲ್ಲದೇ ಇಬ್ಬರು ಬಾಲಕರು ಸೇರಿದಂತೆ 8 ಆರೋಪಿಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಬೋಗಾದಿಯ ಶರತ್ ಗ್ಯಾಂಗ್ ನಿಂದ ಈ ಒಂದು ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. ಬೇರೊಂದು ಕೇಸ್ ನಲ್ಲಿ ಜೈಲು ಪಾಲಾಗಿದ್ದ ಶರತ್ ಗ್ಯಾಂಗ್ ಈ ಕೊನೆ ಮಾಡಿದೆ. ಮೂರು ವರ್ಷದಿಂದ ಶರತ್ ಮತ್ತು ದೊರೆಸ್ವಾಮಿ ಅಲಿಯಾಸ್ ಸೂರ್ಯ ನಡುವೆ ದ್ವೇಷಯಿತ್ತು. ಶರತ್ ಮತ್ತು ಗ್ಯಾಂಗ್ ಕೊಲ್ಲುವುದಾಗಿ ಸೂರ್ಯ ಹೆದರಿಸುತ್ತಿದ್ದ.
ಇದೇ ಭಯದಿಂದ ಸೂರ್ಯನನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ತಪ್ಪು ಒಕೊಂಡಿದ್ದಾರೆ. ಮಾರ್ಚ್ 12ರಂದು ಮೈಸೂರು ತಾಲೂಕಿನ ಅನಗಹಳ್ಳಿಯಲ್ಲಿ ಸೂರ್ಯನ ಹತ್ಯೆಯಾಗಿತ್ತು. ಪ್ರೇಯಸಿ ಶ್ವೇತಾ ಜೊತೆಗಿದ್ದಾಗ ಸೂರ್ಯನನ್ನು ಈ ಆರೋಪಿಗಳು ಕೊಲೆ ಮಾಡಿದ್ದರು. ಸೂರ್ಯನನ್ನು ಕೊಂದು ಪ್ರೇಯಸಿ ಶ್ವೇತಾಗೆ ಧಮ್ಕಿ ಹಾಕಿ ಕಳುಹಿಸಿದ್ದರು. ಯಾರಿಗಾದರೂ ತಿಳಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೆದರಿಸಿದ್ದರು. ಸಿ ಸಿ ಕ್ಯಾಮರಾದ ಡಿವಿಆರ್ ಸೂರ್ಯನ ಮೋಬೈಲ್ ಕೊಂಡೋಯ್ದಿದ್ದರು.