ಮೈಸೂರು : ಜಿಲ್ಲೆಯ ಹುಣಸೂರಿನಲ್ಲಿ ಪ್ರೀತಿಸಿ ಮದುವೆ ಆಗಿ ಒಂದು ವರ್ಷಕ್ಕೆ ಪತಿ ಬಿಟ್ಟು ಹೋಗಿದ್ದಾನೆ. ಗಂಡನ ಮನೆಯವರೇ ಸಂಸಾರಕ್ಕೆ ಸಮಸ್ಯೆ ತಂದಿದ್ದಾರೆ ಎಂದು ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಇದೀಗ ಪತಿ ಸೇರಿದಂತೆ ಒಟ್ಟು 16 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಚಿತ್ರದುರ್ಗ ಮೂಲದ 24 ವರ್ಷದ ಅಶ್ವಿನಿ,ಮೈಸೂರಿನ ಹುಣಸೂರು ತಾಲೂಕಿನ ಮರೂರು ಗ್ರಾಮದ ಅಭಿಷೇಕ್ ಪರಸ್ಪರ ಪ್ರೀತಿಸುತ್ತಿದ್ದರು.ಅದರಂತೆ ಕಳೆದ ಒಂದು ವರ್ಷದ ಹಿಂದೆ ಅಶ್ವಿನಿಆತನ ಜೊತೆ ಮದುವೆ ಕೂಡ ಆಗಿದ್ದಳು. ಆದರೆ ಮದುವೆಯಾದ ಒಂದೇ ತಿಂಗಳಲ್ಲಿ ಅಭಿಷೇಕ್ ಮತ್ತು ಅಶ್ಚಿನಿ ನಡುವೆ ಪ್ರೀತಿ ಕಮರಿಸಿದೆ. ಸದ್ಯ ಅಭಿಷೇಕ್ ಪ್ರೀತಿಸಿ ಮದುವೆಯಾದ ಅಶ್ಚಿನಿಗೆ ಕೈಕೊಟ್ಟಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈ ದೂರಿನ ಅನ್ವಯ ಪತಿ ಸೇರಿದಂತೆ ಒಟ್ಟು 16 ಮಂದಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.