ಮ್ಯಾನ್ಮಾರ್: ಮ್ಯಾನ್ಮಾರ್ನಲ್ಲಿ ಸೋಮವಾರ ಜನಾಂಗೀಯ ಅಲ್ಪಸಂಖ್ಯಾತ ಗುಂಪು ನಡೆಸುತ್ತಿದ್ದ ಸಂಗೀತ ಕಚೇರಿಯ ಮೇಲೆ ನಡೆದ ಮಿಲಿಟರಿ ವೈಮಾನಿಕ ದಾಳಿಯಿಂದ ಸುಮಾರು 50 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.
ಉತ್ತರದ ರಾಜ್ಯವಾದ ಕಚಿನ್ನಲ್ಲಿ ದಾಳಿಗಳು ನಡೆದಿವೆ ಎಂದು ವರದಿಯಾಗಿದೆ. ಇದನ್ನು ಸೇನೆ ಇನ್ನೂ ಖಚಿತಪಡಿಸಿಲ್ಲ. ವರದಿಗಳ ಪ್ರಕಾರ, ಮೂರು ಜೆಟ್ಗಳಿಂದ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ನಾಗರಿಕರು, ಪ್ರಮುಖ ಸ್ಥಳೀಯ ಗಾಯಕರು ಮತ್ತು ಕಚಿನ್ ಇಂಡಿಪೆಂಡೆನ್ಸ್ ಆರ್ಮಿ (ಕೆಐಎ) ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದೆ.
ರಾತ್ರಿ 8:40 ರ ಸುಮಾರಿಗೆ (ಸ್ಥಳೀಯ ಕಾಲಮಾನ) ಜೆಟ್ಗಳು ಸಮಾರಂಭದ ಮೇಲೆ ದಾಳಿ ನಡೆಸಿವೆ. ಈ ವೇಳೆ, ಕೆಐಎ ಸದಸ್ಯರು ಮತ್ತು ನಾಗರಿಕರು ಸೇರಿದಂತೆ ಸುಮಾರು 50 ಜನರು ಸಾವನ್ನಪ್ಪಿದ್ದಾರೆ ಎಂದು KIA ವಕ್ತಾರ ಕರ್ನಲ್ ನಾವ್ ಬು ತಿಳಿಸಿದ್ದಾರೆ.
ಮ್ಯಾನ್ಮಾರ್ನಲ್ಲಿರುವ ವಿಶ್ವಸಂಸ್ಥೆಯ ಕಚೇರಿಯು “ಕಚಿನ್ ರಾಜ್ಯದ ಹ್ಪಕಾಂತ್ನಲ್ಲಿ ನಡೆದ ವೈಮಾನಿಕ ದಾಳಿಯ ವರದಿಗಳಿಂದ ತೀವ್ರ ಕಳವಳ ಮತ್ತು ದುಃಖವಾಗಿದೆ” ಎಂದು ಹೇಳಿದೆ.
BIGG NEWS : ಬೆಚ್ಚಿ ಬೀಳಿಸುವಂತಿದೆ ಕರ್ನಾಟದಲ್ಲಿ ಅತಿ ವೇಗದ ಚಾಲನೆಯಿಂದ ಮೃತಪಟ್ಟವರ ಸಂಖ್ಯೆ!
BIGG NEWS : ಮುಂದಿನ ವಿಧಾನಸಭೆ ಚುನಾವಣೆಗೆ ಕ್ಷೇತ್ರ ಘೋಷಿಸಿದ ಸಚಿವ ಶ್ರೀರಾಮುಲು