ಚಿತ್ರದುರ್ಗ : ನನ್ನ ಮಗನ ಮರ್ಮಾಂಗಕ್ಕೆ ಒದ್ದು, ಸುಟ್ಟು ಕೊಲೆ ಮಾಡಲಾಗಿದೆ ಎಂದು ಕೊಲೆಯಾದ ರೇಣುಕಾಸ್ವಾಮಿ ತಂದೆ ಶಿವನಗೌಡ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗ ಕೊಲೆ ಮಾಡುವಂತಹ ತಪ್ಪು ಮಾಡಿಲ್ಲ. ಪ್ರಕರಣವನ್ನು ಸಿಬಿಐಗೆ ನೀಡಬೇಕು. ನನ್ನ ಸೊಸೆ ಈಗ ಐದು ತಿಂಗಳ ಗರ್ಭಿಣಿ, ಅವಳಿಗೆ ಯಾರು ಆಸರೆ ಆಗ್ತಾರೆ. ಸರ್ಕಾರದಿಂದ ನನ್ನ ಸೊಸೆಗೆ ಪರಿಹಾರ ಕೊಡಬೇಕು. ಪ್ರಕರಣದ ಆರೋಪಿಗಳಾದ ದರ್ಶನ್, ಪವಿತ್ರಾಗೌಡಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಮಗನನ್ನು ಕಳೆದುಕೊಂಡ ತಾಯಿ ಆಕ್ರೋಶ ಮುಗಿಲು ಮುಟ್ಟಿದ್ದು ದರ್ಶನ್ ಎಲ್ಲಾ ಫಿಲ್ಮ್ನ ಗಳನ್ನು ಬ್ಯಾಣ್ ಮಾಡಬೇಕು ಅತನನ್ನು ಚಿತ್ರರಂಗದಿಂದ ನಿಷೇಧಿಸಬೇಕು, ದರ್ಶನ್ ಮತ್ತು ಗ್ಯಾಂಗ್ ಕಠಿಣ ಶಿಕ್ಷೆಯಾಗಬೇಕು. ನನ್ನ ಮಗ ವಿಲವಿಲ ಒದ್ದಾಡಿ ಸತ್ತಂತೆ ದರ್ಶನ್ ಸಾಯಬೇಕು. ಪವಿತ್ರಾ ಗೌಡಳನ್ನು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಕೊಲೆಯಾದ ರೇಣುಕಾಸ್ವಾಮಿ
ನನ್ನ ಸೊಸೆಗೆ ಅನ್ಯಾಯ ಆಗಿದೆ, ಪರಿಹಾರ ಕೊಡಬೇಕುಉ. ಅವನ ಹತ್ರ ಎಂತಾ ಕಂತ್ರಿ ಬುದ್ದಿ ಇತ್ತು ಗೊತ್ತಾಗಿದೆ. ಅವನಿಗೆ ಕಠಿಣ ಶಿಕ್ಷೆಯಾಗಬೇಕು, ನಮ್ಮ ವಂಶ ನಿರ್ವಂಶ ಮಾಡಿದ ದರ್ಶನ್‌ಗೆ ತಕ್ಕ ಶಾಸ್ತಿ ಆಗಲಿ. ನನ್ನ ಮಗನನ್ನು ಕೊಂದಂತೆ ಅವನನ್ನು ಸಾಯಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.