Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಐಐಎಸ್‌ಸಿ ಬೆಂಗಳೂರು ಸಂಶೋಧನಾ ನವೀನತೆಗೆ ಉತ್ತೇಜನ ನೀಡಲಿರುವ ಶಾಫ್ಲರ್ ಇಂಡಿಯಾ

BREAKING : ನಾಳೆ ನಟ ದರ್ಶನ್ ಗೆ ಬಿಗ್ ಡೇ : ಕೊಲೆ ಕೇಸ್ ಕುರಿತು, ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ!

ಕರ್ನಾಟಕ ಸೇರಿದಂತೆ 16 ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಚುನಾವಣಾ ಆಯೋಗ ಆದೇಶ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ‘ಅಕ್ರಮ ಗಣಿಗಾರಿಕೆ‌ ಕೇಸ್’ ಮರೆಮಾಚಲು ಜನಾರ್ದನ ರೆಡ್ಡಿ ‘ಬ್ಯಾನರ್ ಗಲಾಟೆ’ ದೊಡ್ಡದು ಮಾಡಿದ್ರಾ?!
KARNATAKA

BIG NEWS: ‘ಅಕ್ರಮ ಗಣಿಗಾರಿಕೆ‌ ಕೇಸ್’ ಮರೆಮಾಚಲು ಜನಾರ್ದನ ರೆಡ್ಡಿ ‘ಬ್ಯಾನರ್ ಗಲಾಟೆ’ ದೊಡ್ಡದು ಮಾಡಿದ್ರಾ?!

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಸಾವಿರಾರು ಕೋಟಿ ರೂ.ಗಳ ಬೃಹತ್ ಅಕ್ರಮ ಗಣಿಗಾರಿಕೆ ಕೇಸ್ ಮರೆಮಾಚಲು ಬೇಕಂತಲ್ಲೇ ಶಾಸಕ ಜರ್ನಾದನ್ ರೆಡ್ಡಿ, ಬ್ಯಾನರ್ ಗಲಾಟೆ ಶುರು ಮಾಡಿಸಿದ್ದರೆ ಎಂಬ ಗುಮಾನಿ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಬಳ್ಳಾರಿಯ ಜನರು ಹಲವು ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ.

ಸುಪ್ರೀಂಕೋರ್ಟ್‌‌ ಮುಂದೆ ಬರುವ ಓಬಳಾಪುರಂ ಮೈನಿಂಗ್ ಕೇಸ್‌‌ನ ವಿಚಾರಣೆ ಮರೆಮಾಚಲು, ಕೇಸ್ ಕುರಿತು ವಿಷಯಾಂತರಕ್ಕೆ ಅನಗತ್ಯವಾಗಿ ಬ್ಯಾನರ್ ಗಲಾಟೆಯನ್ನೇ ದೊಡ್ಡದಾಗಿ ಮಾಡ್ತಿದ್ದಾರೆ ಎನ್ನಲಾಗುತ್ತಿದೆ.  ಓಬಳಾಪುರಂ ಮೈನಿಂಗ್ ಕೇಸ್‌‌‌‌ನಲ್ಲಿ ಸಿಬಿಐ ಕೋರ್ಟ್ 2025ರ ಮೇ.6 ರಂದು ಜರ್ನಾದನ್‌‌‌‌ರೆಡ್ಡಿಗೆ 7 ವರ್ಷ ಶಿಕ್ಷೆ ಪ್ರಕಟಿಸಿತ್ತು. ಆದರೆ, ತೆಲಂಗಾಣ ಹೈಕೋರ್ಟ್ ಶಿಕ್ಷೆ ರದ್ದುಗೊಳಿಸಿ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಈ ಬಗ್ಗೆ ಸಿಬಿಐ , ಸುಪ್ರೀಂಕೋರ್ಟ್‌‌ಗೆ ಮೇಲ್ಮನವಿ ಸಲ್ಲಿಸಿದೆ. ಅಲ್ಲದೆ, ಸುಪ್ರೀಂಕೋರ್ಟ್‌‌‌‌ನಲ್ಲಿ ಜನಾರ್ದನ ರೆಡ್ಡಿ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದಾರೆ. ಇದು ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ‌. ಇದನ್ನು ಮರೆಮಾಚಲು ಬಳ್ಳಾರಿಯ ಬ್ಯಾನರ್ ಗಲಾಟೆಯನ್ನು ರೆಡ್ಡಿಯವರು ದೊಡ್ಡದಾಗಿ ಬಿಂಬಿಸಿರುವ ಬಗ್ಗೆ ಅನುಮಾನ ಶುರುವಾಗುತ್ತಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಗಂಗಾವತಿ ಶಾಸಕರಾಗಿರುವ ಜನಾರ್ದನ ರೆಡ್ಡಿಗೆ, ಏಳು ವರ್ಷಗಳ ಜೈಲು ಶಿಕ್ಷೆಯನ್ನು ತೆಲಂಗಾಣ ಹೈಕೋರ್ಟ್ ರದ್ದುಗೊಳಿಸಿತ್ತು. ಜೊತೆಗೆ, ಈ ಪ್ರಕರಣದಲ್ಲಿ, ರೆಡ್ಡಿಗೆ ಜಾಮೀನು ಸಹ ನೀಡಿತ್ತು. ಸಿಬಿಐ ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾದ ಬೆನ್ನಲ್ಲೇ ಅವರು ಕಳೆದುಕೊಂಡಿರುವ ಶಾಸಕತ್ವ ಸಹ ಅವರಿಗೆ ಮತ್ತೆ ಸಿಕ್ಕಿತ್ತು. ಆ ತೀರ್ಪಿನ ವಿರುದ್ಧ ಜನಾರ್ದನ ರೆಡ್ಡಿಯವರು ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿರುವ ತೆಲಂಗಾಣ ಹೈಕೋರ್ಟ್, ಕಳೆದ ಜೂ. 11ರಂದು ಈ ತೀರ್ಪು ನೀಡಿ ಷರತ್ತು ಬದ್ಧ ಜಾಮೀನು ನೀಡುವಾಗ ತೆಲಂಗಾಣ ಹೈಕೋರ್ಟ್ ಜನಾರ್ದನ ರೆಡ್ಡಿಯವರಿಗೆ 3 ಷರತ್ತು ವಿಧಿಸಿತ್ತು.

ಯಾವ ಪ್ರಕರಣದಲ್ಲಿ ರೆಡ್ಡಿಗೆ ಶಿಕ್ಷೆ?

ಆಂಧ್ರಪ್ರದೇಶಕ್ಕೆ ಸೇರಿದ, ಕರ್ನಾಟಕದ ಗಡಿ ಭಾಗದಲ್ಲಿರುವ ಓಬಳಾಪುರಂ ಎಂಬ ಗ್ರಾಮದಲ್ಲಿ 1990ರ ದಶಕದಿಂದಲೂ ಜನಾರ್ದನ ರೆಡ್ಡಿಯವರು ಓಬಳಾಪುರಂ ಮೈನಿಂಗ್ ಕಂಪನಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಅದರ ಮೂಲಕ ಗಣಿಗಾರಿಕೆ ನಡೆಸುತ್ತಾ ಬಂದಿದ್ದರು. ಆ ಕಂಪನಿಯಿಂದ ಗಣಿಗಾರಿಕೆಯ ನಿಯಮ ಉಲ್ಲಂಘನೆ, ಅದಿರಿಗಾಗಿ ಕರ್ನಾಟಕ – ಆಂಧ್ರ ನಡುವಿನ ಗಡಿಯ ರೇಖೆಯನ್ನೇ ಬದಲಾಯಿಸಿ, ಬದಲಾದ ನಕ್ಷೆಗಳಿಗೆ ಅನುಸಾರವಾಗಿ ಸರ್ಕಾರದಿಂದ ಗುತ್ತಿಗೆ ಅನುಮತಿಗಳು ಪಡೆದಿರುವುದು ಸೇರಿದಂತೆ ಅನೇಕ ರೀತಿಯ ಅವ್ಯವಹಾರಗಳಾಗಿರುವ ಬಗ್ಗೆ ಅವರ ವಿರುದ್ಧ ದೂರುಗಳು ದಾಖಲಾಗಿದ್ದವು.

ಅದೇ ಪ್ರಕರಣವು ನ್ಯಾಯಾಲಯದಲ್ಲಿ ಅನೇಕ ವರ್ಷಗಳಿಂದ ನಡೆಯುತ್ತಿತ್ತು. ಕಳೆದ ಮೇ 6ರಂದು ರೆಡ್ಡಿಯವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಏಳು ವರ್ಷಗಳ ಶಿಕ್ಷೆ ವಿಧಿಸಿತ್ತು. ಈಗ ಆ ಶಿಕ್ಷೆ ರದ್ದಾಗಿದೆ. ಸಿಬಿಐ ನ್ಯಾಯಾಲಯದಿಂದ ಜನಾರ್ದನ ರೆಡ್ಡಿಯವರ ವಿರುದ್ಧ ತೀರ್ಪು ಹೊರಬಿದ್ದ ನಂತರ, ಅವರನ್ನು ಕರ್ನಾಟಕ ವಿಧಾನಸಭೆಯ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ತೆಲಂಗಾಣ ಹೈಕೋರ್ಟ್ ನಿಂದ ಜೂ. 11ರಂದು ಹೊರಬಿದ್ದಿರುವ ತೀರ್ಪಿನಿಂದಾಗಿ, ಜನಾರ್ದನ ರೆಡ್ಡಿಯವರ ಶಾಸಕತ್ವ ಸ್ಥಾನ ಅವರಿಗೆ ಮರಳಿದೆ. ಸಿಬಿಐ ನ್ಯಾಯಾಲಯದ ತೀರ್ಪು ಮೇ 6ರಂದು ಹೊರಬಿದ್ದಿದ್ದರಿಂದ ಅದೇ ದಿನದಿಂದ ಜಾರಿಗೆ ಬರುವಂತೆ ಶಾಸಕತ್ವ ಅನರ್ಹತೆಯನ್ನೂ ಜಾರಿಗೊಳಿಸಿ ಕರ್ನಾಟಕ ವಿಧಾನಸಭೆ ಸಚಿವಾಲಯದಿಂದ ಆದೇಶ ಹೊರಡಿಲಾಗಿತು.

ಇತರೆ ಮುಖ್ಯಾಂಶಗಳು

* ಸುಪ್ರೀಂಕೋರ್ಟ್‌‌‌‌ಗೆ ಮೇಲ್ಮನವಿ ಸಲ್ಲಿಸಿರುವ ಸಿಬಿಐ
* ಮುಂದಿನ ವಾರ ಬಹುತೇಕ ವಿಚಾರಣೆ ಕೈಗೆತ್ತಿಕೊಳ್ಳಲಿರುವ ಸುಪ್ರೀಂಕೋರ್ಟ್
* ಸಿಬಿಐ ಕೋರ್ಟ್‌‌‌‌ನ ತೀರ್ಪು ಎತ್ತಿಹಿಡಿದರೆ ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ ‌
* ಇದೇ ಕಾರಣಕ್ಕೆ ಕ್ಷುಲ್ಲಕ ಬ್ಯಾನರ್ ಗಲಾಟೆಯನ್ನ ದೊಡ್ಡದು ಮಾಡಿರುವ ಬಗ್ಗೆ ಸ್ಥಳೀಯರಲ್ಲಿ ಅನುಮಾನ
* ಮುಂದಿನ ವಾರ ಸುಪ್ರೀಂಕೋರ್ಟ್‌‌‌‌ನಲ್ಲಿ ಜನಾರ್ದನ ರೆಡ್ಡಿ ಭವಿಷ್ಯ ನಿರ್ಧಾರ.
* 29 ಲಕ್ಷ ಮೆಟ್ರಿಕ್ ಟನ್ ಅಕ್ರಮ
* 884 ಕೋಟಿ ರೂ. ಮೊತ್ತದ ಅದಿರು ತೆಗೆದ ಆರೋಪ
* ಕರ್ನಾಟಕ,ಆಂಧ್ರ ಗಡಿರೇಖೆ ಅಳಿಸಿ ಹಾಕಿದ ಆರೋಪ
* 2025ರ ಮೇ 6ರಂದು ಸಿಬಿಐ ಕೋರ್ಟ್ ನಿಂದ ಶಿಕ್ಷೆ ಪ್ರಕಟ
* 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಜನಾರ್ಧನ ರೆಡ್ಡಿ
* ಈಗಾಗಲೇ 3 ವರ್ಷ ಜೈಲು ಶಿಕ್ಷೆ ಅನುಭವಿಸಿರುವ ರೆಡ್ಡಿ
* ಶಿಕ್ಷೆ ಪ್ರಮಾಣ ಕಡಿಮೆ ಮಾಡುವಂತೆ ಮನವಿ
ಜಗನ್ ಸರ್ಕಾರದ ವೇಳೆ ವಿಥ್ ಡ್ರಾ ಮಾಡಲಾಗಿತ್ತು
* ಕಾನೂನುಬಾಹಿರವಾಗಿ ಓಬಳಾಪುರಂ ಮೈನಿಂಗ್ ಮಾಡಿರುವ ಕುರಿತು ವರದಿ ಸಲ್ಲಿಕೆ
* ನಿವೃತ್ತ ನ್ಯಾಯಮೂರ್ತಿ ಸುದಾಸ್ ದುನಿಯಾ ಅವರಿಂದ ವರದಿ ಸಲ್ಲಿಕೆ
* 115 ಪುಟ ವರದಿ ನೀಡಿರುವ ಕಮಿಟಿ.
* ವರದಿಯಲ್ಲಿ ಅಕ್ರಮ ಸಾಬೀತು

ರಾಜ್ಯದ `ಪಡಿತರ ಚೀಟಿದಾರರೇ’ ಗಮನಿಸಿ : ‘ರೇಷನ್ ಕಾರ್ಡ್’ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಮತ್ತೆ ಅವಕಾಶ.!

BREAKING : 15 ನಿಮಿಷಗಳ ಕಾಲ `ಲಿಫ್ಟ್’ನಲ್ಲಿ ಸಿಲುಕಿದ ಕೆ.ಹೆಚ್.ಮುನಿಯಪ್ಪ, MLC ಚಂದ್ರಪ್ಪ.!

Share. Facebook Twitter LinkedIn WhatsApp Email

Related Posts

ಐಐಎಸ್‌ಸಿ ಬೆಂಗಳೂರು ಸಂಶೋಧನಾ ನವೀನತೆಗೆ ಉತ್ತೇಜನ ನೀಡಲಿರುವ ಶಾಫ್ಲರ್ ಇಂಡಿಯಾ

2 Mins Read

BREAKING : ನಾಳೆ ನಟ ದರ್ಶನ್ ಗೆ ಬಿಗ್ ಡೇ : ಕೊಲೆ ಕೇಸ್ ಕುರಿತು, ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ!

1 Min Read

ಕರ್ನಾಟಕ ಸೇರಿದಂತೆ 16 ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಚುನಾವಣಾ ಆಯೋಗ ಆದೇಶ

2 Mins Read
Recent News

ಐಐಎಸ್‌ಸಿ ಬೆಂಗಳೂರು ಸಂಶೋಧನಾ ನವೀನತೆಗೆ ಉತ್ತೇಜನ ನೀಡಲಿರುವ ಶಾಫ್ಲರ್ ಇಂಡಿಯಾ

BREAKING : ನಾಳೆ ನಟ ದರ್ಶನ್ ಗೆ ಬಿಗ್ ಡೇ : ಕೊಲೆ ಕೇಸ್ ಕುರಿತು, ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ!

ಕರ್ನಾಟಕ ಸೇರಿದಂತೆ 16 ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಚುನಾವಣಾ ಆಯೋಗ ಆದೇಶ

ಜೆಇಇ ಅಡ್ವಾನ್ಸ್‌ಡ್-2026: ಪರೀಕ್ಷಾ ಮಾರ್ಗಸೂಚಿ ಪ್ರಕಟ; ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶಗಳು ಇಲ್ಲಿವೆ

State News
KARNATAKA

ಐಐಎಸ್‌ಸಿ ಬೆಂಗಳೂರು ಸಂಶೋಧನಾ ನವೀನತೆಗೆ ಉತ್ತೇಜನ ನೀಡಲಿರುವ ಶಾಫ್ಲರ್ ಇಂಡಿಯಾ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಶಾಫ್ಲರ್ ಇಂಡಿಯಾ, ಬೆಂಗಳೂರಿನ ಫೌಂಡೇಶನ್ ಫಾರ್ ಸೈನ್ಸ್ ಇನೋವೇಶನ್ ಅಂಡ್ ಡೆವಲಪ್‌ಮೆಂಟ್ (ಎಫ್‌ಎಸ್‌ಐಡಿ) ನಲ್ಲಿ ಅತ್ಯಾಧುನಿಕ ಗಣಕ ಸಂಶೋಧನಾ…

BREAKING : ನಾಳೆ ನಟ ದರ್ಶನ್ ಗೆ ಬಿಗ್ ಡೇ : ಕೊಲೆ ಕೇಸ್ ಕುರಿತು, ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ!

ಕರ್ನಾಟಕ ಸೇರಿದಂತೆ 16 ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಚುನಾವಣಾ ಆಯೋಗ ಆದೇಶ

ಜೆಇಇ ಅಡ್ವಾನ್ಸ್‌ಡ್-2026: ಪರೀಕ್ಷಾ ಮಾರ್ಗಸೂಚಿ ಪ್ರಕಟ; ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶಗಳು ಇಲ್ಲಿವೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.