ಮೈಸೂರು : ನಾಡಹಬ್ಬ ಮೈಸೂರು ದಸರಾ ಹಾಗೂ ಆಯುಧ ಪೂಜೆ ಅಂಗವಾಗಿ ಇಂದು ಕೇಂದ್ರ ಸಚಿವರಾದಂತಹ ಹೆಚ್‍ಡಿ ಕುಮಾರಸ್ವಾಮಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡಿ ದೇವಿ ದರ್ಶನ ಪಡೆದುಕೊಂಡರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಹತ್ತಿರ ಇರುವ ಪೆನ್ ಡ್ರೈವ್ನಲ್ಲಿ ಯಾವುದೇ ಅಶ್ಲೀಲ ವಿಡಿಯೋ ಇಲ್ಲ. ಬದಲಾಗಿ ವರ್ಗಾವಣೆ ದಂಧೆಯ ಕುರಿತು ಇದೆ. ಪೆನ್ಡ್ರೈವ್ ನಲ್ಲಿ ವರ್ಗಾವಣೆ ದಂಧೆಗೆ ಸಂಬಂಧಿಸಿದ ದಾಖಲೆ ಇರುವುದು. ನನ್ನ ಪೆನ್ ಪೆನ್ ಡ್ರೈವ್ ನಲ್ಲಿ ಯಾವುದೊ ಒಂದು ಅಶ್ಲೀಲ ವಿಡಿಯೋ ಇಲ್ಲ. ನಾನು ಅಧಿಕಾರದಲ್ಲಿದ್ದಾಗ ಕಮಿಷನ್ ಪಡೆದು ವರ್ಗಾವಣೆ ಮಾಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಕೋವಿಡ್ ಅಕ್ರಮದ ತನಿಖೆಗೆ ನನ್ನ ತಕರಾರು ಇಲ್ಲ. ತಪ್ಪನ್ನು ಮುಚ್ಚಿಕೊಳ್ಳಲು ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸರಕಾರಕ್ಕೆ ಮೋಸ ಮಾಡಿ 14 ಸೈಟ್ ಪಡೆದಿದ್ದರು. ಈಗ ಸರ್ಕಾರದ ಸೈಟ್ ಅನ್ನು ವಾಪಸ್ ನೀಡಿದ್ದಾರೆ. ವಾಲ್ಮೀಕಿ ನಿಗಮದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಸರ್ಕಾರಕ್ಕೆ ಮೋಸ ಮಾಡಿ ಸಿದ್ದರಾಮಯ್ಯ ಸೈಟ್ ತೆಗೆದುಕೊಂಡಿದ್ದರು.
ಬಳಿಕ ಪರಿಸ್ಥಿತಿ ವ್ಯತಿರಿಕ್ತವಾದಾಗ ಮುಡಾ ಸೈಟ್ ವಾಪಸ್ ಕೊಟ್ಟಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ದುರುಪಯೋಗ ಆಗಿದೆ. ಇವರೇ ಆರ್ಥಿಕ ಸಚಿವರು ಇವರ ಇಲಾಖೆಗೆ ಸಂಬಂಧಪಟ್ಟ ಹಣ ಬಿಡುಗಡೆಯಾಗಿದೆ. ಅದರ ಸತ್ಯಾಂಶಗಳು ಹೊರಬರುವ ಕಾಲ ದೂರ ಇಲ್ಲ. ಸಿದ್ದರಾಮಯ್ಯ ಬಗ್ಗೆ ಹಿನಕಲ್ ಸಾಕಮ್ಮನ ಕೇಳಿದರೆ ಗೊತ್ತಾಗುತ್ತದೆ. ಯಾವ ವಾವ್ ಮಾರ್ಗದಲ್ಲಿ ಸೈಟ್ ಪಡೆದಿದ್ದಾರೆ ಎಂದು ಗೊತ್ತಾಗುತ್ತದೆ.ಇದೆಲ್ಲ ಇತಿಹಾಸ ಇದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ನವರು ಇಂದು ಅದ್ಯಾವುದೋ ಜಾಹೀರಾತು ಕೊಟ್ಟಿದ್ದಾರೆ. ದುಷ್ಟ ಶಕ್ತಿಗಳ ಎದುರು ಸತ್ಯದ ಜಯ ಅಂತೆ ರಾಜ್ಯವನ್ನು ವಾಮ ಮಾರ್ಗ ಮೋಸದಿಂದ ಅಸ್ಥಿರಗೊಳಿಸುತ್ತಿದ್ದಾರೆ ಎಂದು ಜಾಹೀರಾತು ಕೊಟ್ಟಿದ್ದಾರೆ. ಆದರೆ ವಾಮಮಾರ್ಗ, ಮೋಸವನ್ನು ಸ್ಥಿರಗೊಳಿಸಲು ಹೊರಟಿರುವ ಸರ್ಕಾರವಿದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಾನು ಕೇಳುತ್ತೇನೆ ಯಾವತ್ತೂ ಸತ್ಯ ಧರ್ಮ ಉಳಿಸಿದ್ದಾರೆ?ಹೀಗಾಗಿ ಸ್ಥಿರಗೊಳಿಸುವುದು ಅಸ್ಥಿರಗೊಳಿಸುವುದು ನಮ್ಮ ಕೈಯಲ್ಲಿ ಇಲ್ಲ ಎಲ್ಲ ಚಾಮುಂಡಿ ತಾಯಿಯ ಕೈಯಲ್ಲಿದೆ ಎಂದು ತಿಳಿಸಿದರು.