ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜೈಲಿನಲ್ಲಿರಲಿ ಅಥವಾ ಹೊರಗಿರಲಿ ತಮ್ಮ ಜೀವನವನ್ನು ದೇಶಕ್ಕೆ ಸಮರ್ಪಿಸಿದ್ದಾರೆ ಎಂದು ಶುಕ್ರವಾರ ಹೇಳಿದ್ದಾರೆ. ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ ಹಾಜರುಪಡಿಸುವಾಗ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಜ್ರಿವಾಲ್, “ಒಳಗೆ ಅಥವಾ ಹೊರಗೆ ಇರಲಿ, ನನ್ನ ಜೀವನವನ್ನ ದೇಶಕ್ಕೆ ಸಮರ್ಪಿಸಲಾಗಿದೆ” ಎಂದು ಹೇಳಿದರು.
ಈಗ ರದ್ದುಪಡಿಸಲಾದ 2021-22ರ ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಕೇಜ್ರಿವಾಲ್ ಅವರನ್ನ ಏಜೆನ್ಸಿ ಗುರುವಾರ ಬಂಧಿಸಿದ ಒಂದು ದಿನದ ನಂತರ ಜಾರಿ ನಿರ್ದೇಶನಾಲಯ (ಇಡಿ) ಕೇಜ್ರಿವಾಲ್ ಅವರನ್ನ 10 ದಿನಗಳ ಕಸ್ಟಡಿಗೆ ಕೋರಿದೆ. ಅಂದ್ಹಾಗೆ, ಮಧ್ಯಂತರ ರಕ್ಷಣೆ ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಮನವಿಯನ್ನ ದೆಹಲಿ ಹೈಕೋರ್ಟ್ ತಿರಸ್ಕರಿಸಿದ ನಂತರ ಈ ಬಂಧನ ನಡೆದಿದೆ.
ಬಿಜೆಪಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ – ಸಿಎಂ ಸಿದ್ಧರಾಮಯ್ಯ ವಾಗ್ಧಾಳಿ
BREAKING: ಬೆಂಗಳೂರಲ್ಲಿ ಪೊಲೀಸ್ ಠಾಣೆಯಲ್ಲೇ ಪಿಸ್ತೂಲಿನಿಂದ ಮಿಸ್ ಫೈರಿಂಗ್: ಠಾಣೆ ರೈಟರ್ ಕಾಲಿಗೆ ಗಾಯ
BREAKING : ದೆಹಲಿ ಸಿಎಂ ‘ಕೇಜ್ರಿವಾಲ್’ ಅಸ್ವಸ್ಥ : ‘Bp’ ಲೋ, ಕೋರ್ಟ್’ನಿಂದ ಹೊರ ಕರೆತಂದ ಅಧಿಕಾರಿಗಳು