ಹೈದ್ರಬಾದ್: ಜನಪ್ರಿಯ ಧಾರಾವಾಹಿ “ತ್ರಿನಯನಿ” ಪಾತ್ರದ ಮೂಲಕ ಹೆಸರುವಾಸಿಯಾದ ನಟ ಚಂದು ಚಲ್ಲಾ ಶುಕ್ರವಾರ ಸಂಜೆ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಹನಟಿ ಪವಿತ್ರಾ ಜಯರಾಮ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಕೆಲವೇ ದಿನಗಳ ನಂತರ ಈ ಹೃದಯ ವಿದ್ರಾವಕ ಸುದ್ದಿ ಬಂದಿದೆ. ‘ತ್ರಿನಯನಿ’, ‘ರಾಧಮ್ಮ ಪೆಲ್ಲಿ’ ಮತ್ತು ‘ಕಾರ್ತಿಕ ದೀಪಂ’ ನಂತಹ ಜನಪ್ರಿಯ ಧಾರಾವಾಹಿಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ಚಂದು ಚಲ್ಲಾ ಅವರು ಶುಕ್ರವಾರ ಅಲ್ಕಾಪುರ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ನಡುವೆ ಚಂದು ಪವಿತ್ರಾ ಜಯರಾಮ್ ಅವರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಎನ್ನಲಾಗಿದೆ.ಚಂದು 2015 ರಲ್ಲಿ ಶಿಲ್ಪಾ ಪ್ರೇಮಾ ಅವರನ್ನು ವಿವಾಹವಾದರು ಮತ್ತು ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದಾಗ್ಯೂ, ಅವರು ದೂರವಾಗಿದ್ದರು ಎಂದು ವರದಿಯಾಗಿದೆ. ಅವರು ಆರು ವರ್ಷಗಳಿಂದ ಸಹ ನಟಿ ಪವಿತ್ರಾ ಜಯರಾಮ್ ಅವರೊಂದಿಗೆ ಸಂಬಂಧ ಹೊಂದಿದ್ದರು, ಮತ್ತು ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಅವರ ಸಾವಿನ ದುಖಃ ತಾಳಲಾರದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ನಡುವೆ ಚಂದ್ರಕಾಂತ್ ಪತ್ನಿ ಶಿಲ್ಪಾ ಅವರು ತೆಲುಗು ಮಾಧ್ಯಮದ ಜೊತೆ ಈ ಬಗ್ಗೆ ಮಾತನಾಡಿದ್ದು, ಅದರಲ್ಲಿ ಅವರು . ಪವಿತ್ರಾ ಜಯರಾಮ್- ನನ್ನ ಗಂಡ ರಿಲೇಶನ್‌ಶಿಪ್‌ನಲ್ಲಿ ಇದ್ದ ವಿಷಯ ನನಗೆ ಗೊತ್ತಾಗಿತ್ತು. ಅಲ್ಲಿಂದ ಚಂದ್ರಕಾಂತ್ ನನಗೆ ಸಿಕ್ಕಾಪಟ್ಟೆ ಹೊಡೆಯುತ್ತಿದ್ದರು, ನನಗೆ 4 ವರ್ಷದ ಒಂದು ಮಗು, 8 ವರ್ಷದ ಒಂದು ಮಗು ಇದೆ ಅಂತ ಹೇಳಿದ್ದಾರೆ.