ರಾಮನಗರ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಕೇಂದ್ರ ಸಚಿವ ಅಮಿತ್ ಶಾ ಚುನಾವಣಾ ಪ್ರಚಾರ ನಡೆಸುತ್ತಿದ್ದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ಎಚ್ ಡಿ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದ್ದು ಇಡೀ ರಾಜ್ಯ ಸುತ್ತಿದರು ಕೂಡ ನನ್ನ ಹೃದಯ ರಾಮನಗರದಲ್ಲಿದೆ ನಾನು ರಾಮನಗರ ಜಿಲ್ಲೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದರು.
ನನ್ನ ಕೊನೆಯ ಉಸಿರು ಇರುವರೆಗೂ ರಾಮನಗರ ಜಿಲ್ಲೆಯನ್ನು ಮರೆಯಲ್ಲ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣೆ ಯಾವ ರೀತಿ ನಡಿತಿದೆ ಗೊತ್ತಿದೆ ಲೋಕಸಭಾ ಚುನಾವಣೆ ಇದೊಂದು ತರಹ ಧರ್ಮ ಯುದ್ಧ ಮೈತ್ರಿ ಅಭ್ಯರ್ಥಿ ಸಿಎನ್ ಮಂಜುನಾಥ್ ಸೇವೆ ಈ ದೇಶಕ್ಕೆ ಬೇಕಾಗಿದೆ ಎಂದು ತಿಳಿಸಿದರು.
ನಾನು ಚನ್ನಪಟ್ಟಣ ಚುನಾವಣೆಗೆ ಬರದಿದ್ದರೂ ನೀವು ನನ್ನನ್ನು ಗೆಲ್ಲಿಸಿದ್ರಿ.ಇಡೀ ರಾಜ್ಯ ಸುತ್ತುತ್ತಿದ್ದೇನೆ ಆದರೆ ನನ್ನ ಹೃದಯ ರಾಮನಗರದಲ್ಲಿ ಇದೆ.ಹಾಸನ ಜಿಲ್ಲೆ ಜನ್ಮ ಕೊಟ್ಟಿದೆ ರಾಮನಗರ ರಾಜಕೀಯವಾಗಿ ಜನ್ಮ ಕೊಟ್ಟಿದೆ. ಏಪ್ರಿಲ್ ನಾಲ್ಕರಂದು ಮಂಡ್ಯದಲ್ಲಿ ನಾಮಪತ್ರ ಸಲ್ಲಿಸಿ ರಾಮನಗರಕ್ಕೆ ಬರುತ್ತೇನೆ.ಈ ಕಾರ್ಯಕ್ರಮ ಯಶಸ್ವಿಯಾಗಿದೆ ನಾನು ಇದನ್ನು ಮರೆಯುವುದಿಲ್ಲ ಕಾಂಗ್ರೆಸ್ ನಾಯಕರು ಚುನಾವಣೆಗೆಲ್ಲಲು ಸೀರೆ ಕುಕ್ಕರ್ ಹಂಚುತ್ತಿದ್ದಾರೆ ಎಂದು ತಿಳಿಸಿದರು.